ಶಾಲಾ, ಕಾಲೇಜು ಆವರಣ ಸ್ವಚ್ಛತೆ

2Jaggu8-web
ಬೆಳಗಾವಿ ಶಹಾಪುರದ ಸರ್ಕಾರಿ ಸರಸ್ವತಿ ಬಾಲಕಿಯರ ಪದವಿಪೂರ್ವ ಕಾಲೇಜಿನಲ್ಲಿ ಈಚೆಗೆ ಸ್ವಚ್ಛತಾ ಹಿ ಸೇವಾ ಕಾರ್ಯಕ್ರಮ ಜರುಗಿತು. ಎನ್.ಬಿ.ಶಿರಶ್ಯಾಡರವರ, ಅನುಸೂಯಾ ಹಿರೇಮಠ, ಕಲಾವತಿ ಅಡಮನಿ, ಶ್ಯಾಮ ಚೌಗುಲೆ, ಸುಭಾಷ ಘರಾಣಿ ಇತರರಿದ್ದರು.
Published on

ಬೆಳಗಾವಿ: ಶಹಾಪುರದ ಸರ್ಕಾರಿ ಸರಸ್ವತಿ ಬಾಲಕಿಯರ ಪದವಿಪೂರ್ವ ಕಾಲೇಜಿನಲ್ಲಿ ಈಚೆಗೆ ರಾಷ್ಟ್ರೀಯ ಸೇವಾ ಯೋಜನಾ ಘಟಕದಿಂದ ಸ್ವಚ್ಛತಾ ಹಿ ಸೇವಾ ಕಾರ್ಯಕ್ರಮ ಜರುಗಿತು. ಬೆಳಗಾವಿಯ ಸರ್ಕಾರಿ ಪ್ರಾಥಮಿಕ ಶಾಲೆ ನಂ.17ರ ಶಾಲಾ ಆವರಣ, ಕಾಲೇಜಿನ ಆವರಣ, ಕಾಲೇಜಿನ ಕೊಠಡಿ ಸ್ವಚ್ಛಗೊಳಿಸಿದರು. ಸೆ.15ರಿಂದ ಅ.2ರವರೆಗೆ ಸ್ವಚ್ಛತಾ ಹೀ ಸೇವಾ ಕಾರ್ಯಕ್ರಮದ ಅಂಗವಾಗಿ ಕಾಲೇಜಿನಲ್ಲಿ ಸ್ವಚ್ಛತೆಯ ಬಗ್ಗೆ ಜಾಗೃತಿ ಕಾರ್ಯಕ್ರಮ ಜರುಗಿತು. ಪ್ಲಾಸ್ಟಿಕ್ ಮುಕ್ತ ಭಾರತದ ಪರಿಕಲ್ಪನೆ ಹಾಗೂ ನಗರ ಹಾಗೂ ಗ್ರಾಮಗಳಲ್ಲಿ ವಿದ್ಯಾರ್ಥಿಗಳಿಗೆ ಹಸಿ ಕಸ ಮತ್ತು ಒಣ ಕಸ ಬೇರ್ಪಡಿಸುವ ಕುರಿತು ಪಾಲಿಕೆಯ ಸಹಯೋಗದಲ್ಲಿ ತಿಳಿಸಲಾಯಿತು. ಪ್ರಾಚಾರ್ಯ ಎನ್.ಬಿ.ಶಿರಶ್ಯಾಡರವರ, ಅನುಸೂಯಾ ಹಿರೇಮಠ, ಪಾಲಿಕೆ ನಿರೀಕ್ಷಕಿ ಕಲಾವತಿ ಅಡಮನಿ, ಪಾಲಿಕೆ ಆರೋಗ್ಯ ವಿಭಾಗದ ಮುಖ್ಯಸ್ಥ ಶ್ಯಾಮ ಚೌಗುಲೆ, ಸುಭಾಷ ಘರಾಣಿ, ಕಿರಣ ದೇಮಟ್ಟಿ, ಲಕ್ಷ್ಮಣಗೌಡ ಹಾಗೂ ಶಹಾಪುರ ವಿಭಾಗದ ಎಲ್ಲ ಪೌರಕಾರ್ಮಿಕರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net