

ಕುಂದಾಪುರ: ಬದುಕಿನಲ್ಲಿ ಸಾಧನೆ ಮಾಡಬೇಕಾದರೆ ಶಿಸ್ತು ಮುಖ್ಯ, ಶಾಲೆಗಳಲ್ಲಿ ರಚಿಸುವ ವಿವಿಧ ಶಾಲಾ ಕ್ಲಬ್ಗಳು ಮಕ್ಕಳಲ್ಲಿ ನಾಯಕತ್ವ ಗುಣ ಬೆಳೆಯಲು ಪೂರಕವಾಗಿವೆ. ಪ್ರೌಢಶಾಲೆಯ ಹಂತದಲ್ಲಿಯೇ ಮಕ್ಕಳು ನಾಯಕತ್ವ ಗುಣ ಬೆಳೆಸಿಕೊಳ್ಳಬೇಕು. ರೀಡ್, ರಿಟೈನ್, ರಿಕಾಲ್ ವಿದ್ಯಾರ್ಥಿಗಳ ಲಕ್ಷಣವಾಗಬೇಕು ಎಂದು ಕನ್ನಡ ಸಾಹಿತ್ಯ ಪರಿಷತ್ ಉಡುಪಿಯ ಕಾರ್ಯದರ್ಶಿ ಸುಬ್ರಹ್ಮಣ್ಯ ಶೆಟ್ಟಿ ಹೇಳಿದರು.
ಹಟ್ಟಿಯಂಗಡಿಯ ಶ್ರೀ ಸಿದ್ಧಿವಿನಾಯಕ ವಸತಿ ಶಾಲೆಯಲ್ಲಿ 2025-26ನೇ ಸಾಲಿನ ವಿದ್ಯಾರ್ಥಿ ನಾಯಕರ ಪದಗ್ರಹಣ ಮತ್ತು ವಿವಿಧ ವಿದ್ಯಾರ್ಥಿ ಸಂಘಗಳ ಉದ್ಘಾಟನಾ ಸಮಾರಂಭದಲ್ಲಿ ಶನಿವಾರ ಮಾತನಾಡಿದರು.
ಶಿವಲಿಂಗಕ್ಕೆ ಹಾಲೆರೆವ ಮೂಲಕ ವಿನೂತನವಾಗಿ ಕಾರ್ಯಕ್ರಮ ಉದ್ಘಾಟಿಸಲಾಯಿತು. ಶ್ರೀ ಸಿದ್ಧಿ ಶೈಕ್ಷಣಿಕ ಪ್ರತಿಷ್ಠಾನದ ಕಾರ್ಯದರ್ಶಿ, ಪ್ರಾಂಶುಪಾಲ ಶರಣಕುಮಾರ ವಹಿಸಿದ್ದರು. ಕೋಟ ವಿವೇಕ ಪದವಿಪೂರ್ವ ಕಾಲೇಜು ಪ್ರಾಂಶುಪಾಲ ಜಗದೀಶ ನಾವುಡ ಮಾತನಾಡಿದರು. ಹತ್ತನೇ ತರಗತಿಯ ಗಂಭೀರ ಜಿ.ಗೌಡ ಮತ್ತು ಭವ್ಯಶ್ರೀ ಶೆಟ್ಟಿ ವಿದ್ಯಾರ್ಥಿ ನಾಯಕ ಮತ್ತು ವಿದ್ಯಾರ್ಥಿ ನಾಯಕಿಯಾಗಿ ಆಯ್ಕೆಗೊಂಡರು. ಶಿಕ್ಷಕಿ ಅಶ್ವಿನಿ ವಿದ್ಯಾರ್ಥಿಗಳಿಗೆ ಪ್ರತಿಜ್ಞಾ ವಿಧಿ ಬೋಧಿಸಿದರು. ಶಾಲಾ ಆಡಳಿತಾಧಿಕಾರಿ ವೀಣಾರಶ್ಮಿ ಎಂ., ಉಪಪ್ರಾಂಶುಪಾಲ ರಾಮ ದೇವಾಡಿಗ ಹಾಗೂ ಶಿಕ್ಷಕರು ಮತ್ತು ಶಿಕ್ಷಕೇತರರು ಉಪಸ್ಥಿತರಿದ್ದರು.
ವಿದ್ಯಾರ್ಥಿಗಳಾದ ಪೃಥ್ವಿ ಸ್ವಾಗತಿಸಿದರು. ಶಿಕ್ಷಕಿ ಸಂಗೀತಾ ಎಸ್.ಜಿ. ವಿದ್ಯಾರ್ಥಿ ನಾಯಕರ ಪಟ್ಟಿ ವಾಚಿಸಿದರು. ವಿದ್ಯಾರ್ಥಿನಿಯರಾದ ಪೂರ್ವಿ ಜಗನ್ನಾಥ್ ನಿರೂಪಿಸಿದರು. ಶರಣ್ಯಾ ವಂದಿಸಿದರು.