ಶಾಲೆಯ ಸ್ವಚ್ಛತೆ ಕಾಪಾಡಿ

19 KAMPLI 02
ಕಂಪ್ಲಿ ತಾಲೂಕಿನ ರಾಮಸಾಗರ ಗ್ರಾಮದ ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ಎರಡು ಕೊಠಡಿಗಳ ನಿರ್ಮಾಣಕ್ಕೆ ಗ್ರಾಮದ ಪ್ರಮುಖರಾದ ಎಚ್.ಶಿವಶಂಕರಗೌಡ, ಟಿ.ನಿರಂಜನಸ್ವಾಮಿ ಭೂಮಿ ಪೂಜೆ ನೆರವೇರಿಸಿದರು. ಪ್ರಮುಖರಾದ ಕರೆಂಟ್ ಎಂ.ಗೋಪಾಲಪ್ಪ, ಶರಣಪ್ಪ ಬೊಮ್ಮಗಂಡಿ, ನಾಗನಗೌಡ ಎಂ.ಎ., ಸುಗ್ಗೇನಹಳ್ಳಿ ರಮೇಶ ಇತರರಿದ್ದರು.
Published on

ಕಂಪ್ಲಿ: ಸರ್ಕಾರಿ ಶಾಲೆಗಳ ಉಳಿವಿಗೆ ಮತ್ತು ಅಭಿವೃದ್ಧಿಗೆ ಸಾರ್ವಜನಿಕರ ಸಹಕಾರ ಅಗತ್ಯ ಎಂದು ಬ್ಲಾಕ್ ಕಾಂಗ್ರೆಸ್ ಎಸ್ಸಿ ವಿಭಾಗದ ಅಧ್ಯಕ್ಷ ಆರ್.ಎಂ.ರಾಮಯ್ಯ ಹೇಳಿದರು.

ತಾಲೂಕಿನ ರಾಮಸಾಗರ ಗ್ರಾಮದ ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ಆಯೋಜಿಸಿದ್ದ ಭೂಮಿ ಪೂಜೆಯಲ್ಲಿ ಸೋಮವಾರ ಮಾತನಾಡಿದರು.
ಶತಮಾನೋತ್ಸವವನ್ನು ಗ್ರಾಮದ ಜನತೆ ಒಗ್ಗಟ್ಟಿನಿಂದ ಆಚರಿಸಿದ ಪ್ರತಿಫಲವಾಗಿ, 27.80ಲಕ್ಷ ರೂ. ವೆಚ್ಚದ ಎರಡು ಕೊಠಡಿಗಳ ನಿರ್ಮಾಣಕ್ಕೆ ಅನುದಾನ ದೊರೆತಿದೆ. ಶಾಲೆಗಳ ಅಭಿವೃದ್ಧಿಗೆ ಪ್ರಗತಿಪರ ಸಂಘಟನೆಗಳು ಕೈಜೋಡಿಸಬೇಕು.

ಶಾಲೆಯ ಸ್ವಚ್ಚತೆ ಮತ್ತು ಪಾವಿತ್ರ್ಯತೆ ಕಾಪಾಡಲು ಸುತ್ತಲಿನ ಜನತೆ ಸಹಕರಿಸಬೇಕು ಎಂದರು. ಗ್ರಾಮದ ಪ್ರಮುಖರಾದ ಎಚ್.ಶಿವಶಂಕರಗೌಡ, ಟಿ.ನಿರಂಜನಸ್ವಾಮಿ, ಕರೆಂಟ್ ಎಂ.ಗೋಪಾಲಪ್ಪ, ಶರಣಪ್ಪ ಬೊಮ್ಮಗಂಡಿ, ಕಾಳಿಂಗವರ್ಧನ ಹಾದಿಮನೆ,

ಗುರುರಾಜ, ಹರಿಜನ ಮಲ್ಲಯ್ಯ, ಎಸ್.ಡಿ.ಎಂ.ಸಿ ಅಧ್ಯಕ್ಷ ಬಿ.ಶ್ರೀನಿವಾಸ, ಮುಖ್ಯಶಿಕ್ಷಕ ನಾಗನಗೌಡ ಎಂ.ಎ., ಶಿಕ್ಷಕ ಸುಗ್ಗೇನಹಳ್ಳಿ ರಮೇಶ, ಡಿಎಸ್‌ಎಸ್ ಸಂಚಾಲಕ ಎಸ್.ಮಂಜುನಾಥ, ಗುತ್ತಿಗೆದಾರ ಅನಿಲ್‌ಕುಮಾರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net