

ಮಂಗಳೂರು: ಶೈಕ್ಷಣಿಕ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ದಕ್ಷಿಣ ಕನ್ನಡ ಜಿಲ್ಲೆಯ ಕೆಲವು ಸರ್ಕಾರಿ ಶಾಲೆಗಳು ಶೋಚಣೀಯ ಸ್ಥಿತಿಯಲ್ಲಿವೆ.
ಭಾರೀ ಮಳೆಯ ಕಾರಣ ಸುಳ್ಯ ತಾಲೂಕಿನ ಮರ್ಕಂಜ ಗ್ರಾಮದ ಮಿತ್ತಡ್ಕ ಮರ್ಕಂಜ ಶಾಲಾ ಕೊಠಡಿಯ ಮೇಲ್ಟಾವಣಿ ಸೋರುತ್ತಿದ್ದು ನೀರೆಲ್ಲ ತರಗತಿ ಕೊಠಡಿಯೊಳಗೆ ಬರುತ್ತಿದೆ. 4ನೇ ತರಗತಿ ವಿದ್ಯಾರ್ಥಿಗಳು ಈ ಕೊಠಡಿಯೊಳಗೆ ಕುಳಿತು ಪಾಠ ಕೇಳುತ್ತಿದ್ದಾರೆ.
ಶಾಲಾ ಮೇಲ್ಟಾವಣಿಯನ್ನು ಶೀಘ್ರ ಸರಿಪಡಿಸಿಸಬೇಕೆಂದು ಶಾಲಾ ಪೋಷಕ ಪ್ರತಿನಿಧಿ ಜಗನ್ನಾಥ ಜಯನಗರ ವಿನಂತಿಸಿದ್ದಾರೆ.
'ಮೊನ್ನೆಯಷ್ಟೇ ಮೇಲ್ಟಾವಣಿ ಸರಿಪಡಿಸಲಾಗಿತ್ತು. ಆದರೂ ಸೋರುತ್ತಿದೆ. ಶಾಲೆಗೆ ಹೊಸ ಕಟ್ಟಡ ಬೇಕೆನ್ನುವುದು ನಮ್ಮ ಬೇಡಿಕೆಯೂ ಇದೆ. ಮತ್ತು ರಿಪೇರಿಗೆ ಬರುತ್ತಿರುವ ಅನುದಾನ ಸಾಕಾಗುತ್ತಿಲ್ಲ. ಆ ಕೊಠಡಿಯ ಒಂದು ಬದಿಯಲ್ಲಿ 4ನೇ ತರಗತಿ ನಡೆಯುತ್ತಿದೆ” ಎಂದು ಎಸ್.ಡಿ.ಎಂ.ಸಿ. ಅಧ್ಯಕ್ಷೆ ಸಂಧ್ಯಾ ದೋಳ ತಿಳಿಸಿದ್ದಾರೆ.