ಕೃಷಿಮೇಳದಲ್ಲಿ ಶಾಲಾಮಕ್ಕಳ ಖುಷಿಮೇಳ: ಗಮನ ಸೆಳೆಯುತ್ತಿವೆ ಹಲವು ಕೃಷಿ ಪ್ರಾತ್ಯಕೆಗಳು

krushi
Published on

ಬೆಂಗಳೂರು: ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಗಾಂಧಿ ಕೃಷಿ ವಿಜ್ಞಾನ ಕೇಂದ್ರ ಆವರಣದಲ್ಲಿ ಆಯೋಜಿಸಿರುವ "ಕೃಷಿ ಮೇಳ'ದ 3ನೇ ದಿನವಾದ ಶನಿವಾರ ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ್ದ ಸಾವಿರಾರು ಶಾಲಾಮಕ್ಕಳು, ಮೇಳ ವೀಸಿ ಪುಳಕಗೊಂಡರು.

ವೇದಿಕೆ ಮುಂಭಾಗದಲ್ಲಿ ಪ್ರತಿಷ್ಠಾಪಿಸಿರುವ ಹುಲ್ಲುಹಾಸಿನ ಮನೆ, "ಪ್ರತಿ ತುತ್ತಿಗೂ ರೈತರನ್ನು ಸ್ಮರಿಸೋಣ' ಎಂಬ ಆಶಯದೊಂದಿಗೆ ನಿರ್ಮಿಸಿರುವ ನೇಗಿಲು ಹೊತ್ತ ರೈತರ ಪ್ರತಿಮೆ, ನರ್ಸರಿಯಲ್ಲಿನ ಸಸಿ ಸೇರಿ ಹಲವು ಕೃಷಿ ಪ್ರಾತ್ಯಕೆಗಳನ್ನು ಕಂಡು ವಿದ್ಯಾರ್ಥಿಗಳು ಸಂಭ್ರಮಪಟ್ಟರು. ಕೃಷಿಯಲ್ಲಿ ಇಷ್ಟೆಲ್ಲ ಆವಿಷ್ಕಾರಗಳಿವೆ ಎಂಬುದನ್ನು ಇವತ್ತೇ ತಿಳಿದಿದ್ದು ಎಂದು ವಿದ್ಯಾರ್ಥಿಗಳು ಹೇಳಿದರು. ಆದಾಯ ದ್ವಿಗುಣಕ್ಕೆ ಸಮಗ್ರ ಕೃಷಿ ನೀತಿ ಅಳವಡಿಸುವಿಕೆ, ಎಕರೆ ಜಮೀನಿನಲ್ಲಿ 10 ಬೆಳೆ ಬೆಳೆಯುವ ಬಗೆ, ಸಾವಯವ ಕೃಷಿಗೆ ಹೆಚ್ಚಿನ ಒತ್ತು, ರೈತರ ಮನೋಭಾವ ಬದಲಾವಣೆ, ಉತ್ಪನ್ನಗಳನ್ನು ಪೊಟ್ಟಣ ಮಾಡಿ ನೇರವಾಗಿ ಮಾರುಕಟ್ಟೆಗಳಲ್ಲಿ ಮಾರಾಟ ಮಾಡುವ ಬಗ್ಗೆ ಕಲಿಯುವುದು ಹಾಗೂ ಕೃಷಿ ವಿವಿ ತಜ್ಞರು ನಡೆಸುವ ತಂತ್ರಾನ ತಲುಪಿ ಬೆಳೆ ಬೆಳೆಯುವ ಅನ್ನದಾತ ಆರ್ಥಿಕವಾಗಿ ಸದೃಢಗೊಳ್ಳುತ್ತೇನೆ ಎಂಬುದು ಒಟ್ಟಾರೆ ಮೇಳದ ಸಾರವಾಗಿತ್ತು.

ಭತ್ತ, ಮುಸುಕಿನ ಜೋಳ, ಕೊರಳೆ, ಅವರೆ, ಎಳ್ಳು, ಹುಚ್ಚೆಳ್ಳು, ಹರಳೆ ಸೇರಿ ನೂತನ ತಳಿಗಳು ಹಾಗೂ 38ಕ್ಕೂ ಅಧಿಕ ತಂತ್ರಜ್ಞಾನಗಳು ಪ್ರದರ್ಶನದಲ್ಲಿ ರಾರಾಜಿಸುತ್ತಿವೆ. ಅಭಿವೃದ್ಧಿ ಇಲಾಖೆಗಳ ಮಳಿಗೆಗಳು, ಕೃಷಿ ಪರಿಕರ ಮಳಿಗೆಗಳು, ಕೃಷಿ ಇಂಜಿನಿಯರಿಂಗ್​ ಮತ್ತು ಪಶುಸಂಗೋಪನೆ ಹಾಗೂ ಕೃಷಿ ವಿವಿ ನೂತನ ತಂತ್ರಜ್ಞಾನಗಳ ಬಗ್ಗೆ 700ಕ್ಕೂ ಮಳಿಗೆಗಳಲ್ಲಿ ಮಾಹಿತಿ ನೀಡಲಾಗುತ್ತಿದೆ. ರೈತರ ಕೃಷಿ ಸಮಸ್ಯೆಗಳಿಗೆ ತಜ್ಞರಿಂದ ವೈಜ್ಞಾನಿಕ ಸಲಹೆ, ವಿಜ್ಞಾನಿಗಳ ತಂಡದಿಂದ ಕೃಷಿ ಸಂಬಂಧಿ ಪ್ರಶ್ನೆಗಳಿಗೆ ಪರಿಹಾರ, ಪ್ರಾತ್ಯಕಾ ತಾಕುಗಳು, ಖುಷ್ಕಿ ಬೇಸಾಯಕ್ಕೆ ಸೂಕ್ತವಾದ ಬೆಳೆ ಪದ್ಧತಿಗಳು, ತೋಟಗಾರಿಕೆ ಬೆಳೆಗಳು ಮತ್ತು ನಿಖರ ಕೃಷಿ ಪ್ರಾತ್ಯಕೆ, ಸಮಗ್ರ ಬೇಸಾಯ ಪದ್ಧತಿ, ಔಷಧೀಯ ಮತ್ತು ಸುಗಂಧ ದ್ರವ್ಯ ಸಸ್ಯಗಳು, ಜಲಾನಯನ ನಿರ್ವಹಣೆ, ಸಾವಯವ ಕೃಷಿ ಪದ್ಧತಿಗಳು, ಸಮಗ್ರ ಪೋಷಕಾಂಶಗಳು ಮತ್ತು ಪೀಡೆ ನಿರ್ವಹಣೆ, ಮಣ್ಣು ಪರೀೆಗೆ ಅನುಗುಣವಾಗಿ ಬೆಳೆ ಸ್ಪಂದನೆ ಪ್ರಾತ್ಯಕೆ. ರೈತರ ಸಮಸ್ಯೆಗಳಿಗೆ ತಜ್ಞರಿಂದ ಸಲಹೆ, ಹನಿ, ತುಂತುರು ನೀರಾವರಿ ಪದ್ಧತಿಗಳು, ಮಳೆ ಹಾಗೂ ಮೇಲ್ಛಾವಣಿ ನೀರಿನ ಕೂಯ್ಲು, ಸುಧಾರಿತ ಕೃಷಿ ಯಂತ್ರೋಪಕರಣ ಪ್ರದರ್ಶನ, ಕೃಷಿ ಉತ್ಪನ್ನ ಸಂಸ್ಕರಣೆ ಮತ್ತು ಮೌಲ್ಯವರ್ಧನೆ, ಬಿತ್ತನೆ ಬೀಜಗಳ ಪರೀೆ ಹಾಗೂ ಶೇಖರಣೆ, ಹವಾಮಾನ ಚತುರ ಕೃಷಿ, ಜೈವಿಕ ಇಂಧನ, ಕೃಷಿ ಪರಿಕರಗಳ ಮಳಿಗೆಗಳಿಗೆ ಸಾವಿರಾರು ಜನರು ಭೇಟಿ ನೀಡಿ ಮಾಹಿತಿ ಪಡೆಯುತ್ತಿರುವುದು ಕಂಡುಬಂತು.

ಕೃಷಿ ಸಲಹಾ ಕೇಂದ್ರಕ್ಕೆ ಸಾವಿರಾರು ರೈತರು ಭೇಟಿ

ಮೇಳದಲ್ಲಿ ಸ್ಥಾಪಿಸಿರುವ ಸಲಹಾ ಸೇವಾಗಳ ಕೂಟಕ್ಕೆ 3 ದಿನದಲ್ಲಿ 2ಸಾವಿರಕ್ಕೂ ಅಧಿಕ ಮಂದಿ ಭೇಟಿ ನೀಡಿ ವಿವಿಧ ಮಾಹಿತಿಗಳನ್ನು ಕೃಷಿ ವಿಜ್ಞಾನಿಗಳಿಂದ ಪಡೆದುಕೊಂಡಿದ್ದಾರೆ. ಬೇಸಾಯಶಾಸ್ತ್ರ, ಮಣ್ಣು ವಿಜ್ಞಾನ ಮತ್ತು ಕೃಷಿ ರಾಸಾಯನಶಾಸ್ತ್ರ, ತೋಟಗಾರಿಕೆ, ಅನುವಂಶೀಯತೆ ಸಸ್ಯಶಾಸ್ತ್ರ, ಪರಿಸರವಿಜ್ಞಾನ ವಿಭಾಗ, ಬೆಳೆ ಶರೀರ ಕ್ರಿಯಾಶಾಸ್ತ್ರ, ಕೃಷಿ ಕೀಟಶಾಸ್ತ್ರ, ಸಸ್ಯ ರೋಗಶಾಸ್ತ್ರ, ಜೇನು ಕೃಷಿ, ರೇಷ್ಮೆ ಕೃಷಿ, ಪ್ರಾಣಿವಿಜ್ಞಾನ ವಿಭಾಗ, ಆಹಾರ ವಿಜ್ಞಾನ ಮತ್ತು ಮಣ್ಣು, ಕೃಷಿ ಅರ್ಥಶಾಸ್ತ್ರ ವಿಭಾಗಗಳಲ್ಲಿನ ಸ್ಟಾಲ್​ಗಳಿಗೆ ರೈತರು ಭೇಟಿ ನೀಡಿ ಮಾಹಿತಿ ಪಡೆದರು. ಸಲಹಾ ಸೇವೆಗಳ ಕೂಟದಲ್ಲಿ ಪ್ರತಿಷ್ಠಾಪಿಸಿರುವ ಒಂದೊಂದು ಪ್ರಾತ್ಯಕೆ ಕೇಂದ್ರಗಳಲ್ಲಿ ಜಿಕೆವಿಕೆಯ ಕೃಷಿ ವಿಜ್ಞಾನಿಗಳು ರೈತರಿಗೆ ಉಪಯುಕ್ತ ಮಾಹಿತಿ ಒದಗಿಸಿದರು. ಹೆಚ್ಚಿನ ರೈತರು ಸಸ್ಯ ತಂತ್ರಜ್ಞಾನ, ಪ್ರಾಣಿವಿಜ್ಞಾನ, ಬೇಸಾಯಶಾಸ್ತ್ರ, ತೋಟಗಾರಿಕೆ, ಕೃಷಿ ವಿಜ್ಞಾನ ಸಂಬಂಧಿಸಿದ ಬಗ್ಗೆ ಹೆಚ್ಚಿನ ಮಾಹಿತಿ ಪಡೆದಿದ್ದು ಗಮನಾರ್ಹ. ಒಟ್ಟು 18 ಪ್ರಾತ್ಯಕೆ ಕೇಂದ್ರಗಳನ್ನು ಪ್ರತಿಷ್ಠಾಪಿಸಲಾಗಿದೆ. ಪ್ರತಿ ಪ್ರಾತ್ಯಕೆ ಕೇಂದ್ರದಲ್ಲಿ ಬೆಳೆಗಳ ಕುರಿತು ಕ್ಯೂಆರ್​ ಕೋಡ್​ ಅಳವಡಿಸಿರುವುದು ವಿಶೇಷವಾಗಿತ್ತು.

ಹವಾಮಾನ ಆಧಾರಿತ ಬೇಳೆ ಮಾಹಿತಿ

ಮೇಳದಲ್ಲಿ ತೆರೆದಿರುವ ಬೆಂಗಳೂರು ಕೃಷಿ ವಿವಿ ಮಳಿಗೆಗಳ ಕೇಂದ್ರದಲ್ಲಿ ಶನಿವಾರ ಹೆಚ್ಚಿನ ಭೇಟಿ ನೀಡಿದರು. ಇದರ ಪರಿಣಾಮ ಕೆಲವೆಡೆ ನೂಕುನೂಗ್ಗಲು ಉಂಟಾಯಿತು. ಕೃಷಿ ವಿಭಾಗ, ಹವಾಮಾನ ಆಧಾರಿತ ಬೀಜ ಬಿತ್ತನೆ, ನೀರು ನಿರ್ವಹಣಾ ತಂತ್ರಜ್ಞಾನ ಕೇಂದ್ರ, ಜೋಳ, ಮಣ್ಣು, ಜಲಾನಯನ, ಭತ್ತ, ಸಸ್ಯಸಂರಕ್ಷಣೆ, ರೇಷ್ಮೆ, ಎಣ್ಣೆಕಾಳು, ದ್ವಿದಳ ಧಾನ್ಯ, ಕೀಟಶಾಸ್ತ್ರ, ವಾಣಿಜ್ಯ ಬೆಳೆ, ಕಳೆ ನಿರ್ವಹಣೆ, ಜೈವಿಕ ಗೊಬ್ಬರ, ಜೀಜ ತಾಂತ್ರಿಕತೆ, ಜೈವಿಕ ಇಂಧನ, ಕಬ್ಬು ಪ್ರಾತ್ಯಕ ಕೇಂದ್ರಗಳಿಗೆ ಸಾಕಷ್ಟು ಮಂದಿ ಭೇಟಿ ನೀಡಿದರು. ಆಯಾ ಪ್ರಾತ್ಯಕ ಕೇಂದ್ರಗಳಲ್ಲಿ ಬೆಳೆಗಳ ಕುರಿತು ಮಾಹಿತಿ ಲಕ ಹಾಕಲಾಯಿತು. ತಳಿಯ ಹೆಸರು, ಬೆಳೆಯುವ ದಿನಗಳ ಅವಧಿ, ಇಳುವರಿ, ಯಾವ ತಿಂಗಳಲ್ಲಿ ಬೀಜ ಬಿತ್ತನೆ ಮಾಡಬೇಕು, ಹಿಂಗಾರು, ಮುಂಗಾರು ಸಂದರ್ಭದಲ್ಲಿ ಯಾವ್ಯಾವ ಬೆಳೆ ಬೆಳೆಯಬೇಕು, ಹವಾಮಾನ ವೈಪರಿತ್ಯ ಸಮಸ್ಯೆಯಿಂದ ಬೆಳೆ ರಸಿಕೊಳ್ಳುವುದು ಹೇಗೆ, ಕಳೆಯಿಂದ ಬೆಳೆ ರಸಿಕೊಳ್ಳಲು ಏನು ಮಾಡಬೇಕು ಎಂಬಿತ್ಯಾದಿ ಮಾಹಿತಿಗಳನ್ನು ಕೃಷಿ ವಿಜ್ಞಾನಿಗಳು ನೀಡಿದರು.

ಮೊದಲ ಬಾರಿಗೆ ಕ್ಯೂಆರ್​ ಕೋಡ್​ ಪರಿಚಯ

ಈ ಬಾರಿ ಕೃಷಿ ಮೇಳದಲ್ಲಿ ಪ್ರತಿ ಬೆಳೆ, ಪ್ರತಿ ತಾಕು, ತಂತ್ರಜ್ಞಾನಗಳು, ಜೇನು ಕೃಷಿ, ಪಾಲಿಹೌಸ್​ನಲ್ಲಿ ಬೆಳೆದಿರುವ ಬೆಳೆಗಳ ಜಾಗ ಹೀಗೆ ಎಲ್ಲೆಡೆಯೂ ಕ್ಯೂಆರ್​ ಕೋಡ್​ ಸ್ಕಾ$್ಯನರ್​ ಅಳವಡಿಸಲಾಗಿದೆ. ಪ್ರತಿ ಬೆಳೆಯ ಸಾಲಿನ ಮಧ್ಯೆ ಕ್ಯೂಆರ್​ ಕೋಡ್​ ಲಕವಿದೆ. ಸ್ಥಳದಲ್ಲಿ ಮಾಹಿತಿ ಕೊಡುವ ವಿಜ್ಞಾನಿಗಳು ಹಾಗೂ ತಜ್ಞರು ಇಲ್ಲದಿದ್ದರೂ ತಮ್ಮ ಮೊಬೈಲ್​ನಲ್ಲಿ ಆ ಕೋಡ್​ ಸ್ಕಾ$್ಯನ್​ ಮಾಡಿದರೆ ಆ ಬೆಳೆಯ ವಿಶೇಷತೆ ಹಾಗೂ ಅದರ ಪೂರ್ಣ ಮಾಹಿತಿ ಮೊಬೈಲ್​ನಲ್ಲಿ ಅನಾವರಣಗೊಳ್ಳುತ್ತದೆ. ಹೀಗಾಗಿ, ಮೇಳದ ವೀಕ್ಷಣೆಗೆ ಮತ್ತಷ್ಟು ಸುಲಭಗೊಳಿಸಲಾಗಿದೆ. ಇದು ಜಿಕೆವಿಕೆ ಆವರಣದಲ್ಲಿ ಮಾಡಿರುವ ಮೊದಲ ಪ್ರಯತ್ನವಾಗಿದ್ದು, ಶನಿವಾರ ಸಾಕಷ್ಟು ಮಂದಿ ಅದರ ಬಗ್ಗೆ ಮಾಹಿತಿ ಪಡೆದರು.

ಟೊಮ್ಯಾಟೋ, ವೀಳ್ಯದೆಲೆ ವೈನ್​!

ಟೊಮ್ಯಾಟೋ, ವೀಳ್ಯದೆಲೆಗಳಿಂದಲೂ ತಯಾರಿಸುವ ವೈನ್​ ಕೃಷಿ ಮೇಳದಲ್ಲಿ ಪ್ರದರ್ಶನಕ್ಕಿಡಲಾಗಿದ್ದು, ನೋಡುಗರ ಗಮನ ಸೆಳೆಯುತ್ತಿದೆ. ಬಾಗಲಕೋಟೆಯ ತೋಟಗಾರಿಕೆ ವಿಜ್ಞಾನಗಳ ವಿವಿಯ ಕೊಯ್ಲೋತ್ತರ ತಂತ್ರಜ್ಞಾನ ವಿಜ್ಞಾನ ವಿಭಾಗದ ವತಿಯಿಂದ ವೈನ್​ ತಯಾರಿ ತಂತ್ರಜ್ಞಾನ ಅಭಿವೃದ್ಧಿಪಡಿಸಿದೆ. ಇದರಲ್ಲಿ ಔಷಧ ಗುಣವುಳ್ಳ ಗಿಡಮೂಲಿಕೆ ಬಳಸಿ ತಯಾರಿಸುವುದರಿಂದ ಆರೋಗ್ಯಕ್ಕೆ ಒಳ್ಳೆಯದು. ವೈನ್​ನಲ್ಲಿ ಸಕ್ಕರೆ ಅಂಶ ಕಡಿಮೆ ಇದೆ. ಮಧುಮೇಹಿಗಳು, ಹೃದ್ರೋಗಿಗಳಿಗೆ ಬಳಸಬಹುದು. ಬೆಟ್ಟದ ನೆಲ್ಲಿಕಾಯಿ ಮತ್ತು ನೆಲ್ಲಿಕಾಯಿ ಬೀಜದ ವೈನ್​, ಜೆಮ್​ ನೇರಳೆ ಹಣ್ಣು, ಬೇಲದ ಹಣ್ಣು, ಹಲಸಿನ ಹಣ್ಣಿನ ವೈನ್​ಗಳಿವೆ. ವೈನ್​ನಲ್ಲಿ ದ್ರಾಕ್ಷಿ ಹೊರತುಪಡಿಸಿ ಬಗೆಬಗೆಯ ವೈನ್​ಗಳಿರುವುದು ಖುಷಿಯ ಸಂಗತಿ ಎಂದು ಗ್ರಾಹಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ರಾಸಾಯನಿಕಮುಕ್ತ ವೈನ್​ಗಳಾಗಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net