

ಹಾಸನ: ಇತ್ತೀಚೆಗೆ ಚಾಲಕರ ಅಜಾಗರೂಕತೆಯ ಚಾಲನೆಯಿಂದಾಗಿ ಬಸ್ ಅಪಘಾತಕ್ಕೆ ಈಡಾಗುತ್ತಿರುವ ಪ್ರಕರಣಗಳು ಹೆಚ್ಚಾಗಿದ್ದು, ಇಂದು ಖಾಸಗಿ ಶಾಲಾ ಬಸ್ಸೊಂದು ಪಲ್ಟಿಯಾಗಿ, ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ.
ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ಶ್ರವಣಬೆಳಗೊಳದಲ್ಲಿರುವ ಬಿಎಂಎಚ್ ಶಾಲೆಯ ಬಸ್ ಪರಮ ಗ್ರಾಮದ ಅಪಘಾತಕ್ಕೀಡಾಗಿ ಪಲ್ಟಿಯಾಗಿದೆ. ಚಾಲಕನ ಅಜಾಗರೂಕತೆಯ ಚಾಲನೆಯಿಂದಾಗಿ ಬಸ್ ಹಳ್ಳಕ್ಕೆ ಉರುಳಿದೆ.
ತಕ್ಷಣ ಸ್ಥಳೀಯರು ನೆರವಿಗೆ ಧಾವಿಸಿದ್ದು, ಅವರ ಸಮಯಪ್ರಜ್ಞೆಯಿಂದ ವಿದ್ಯಾರ್ಥಿಗಳನ್ನು ರಕ್ಷಣೆ ಮಾಡಲಾಗಿದೆ. ಅದಾಗ್ಯೂ ಐದಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಗಾಯಗಳಾಗಿದ್ದು, ಅವರಿಗೆ ಚಿಕಿತ್ಸೆ ನೀಡಲಾಗಿದೆ.