

ಮಂಡ್ಯ: ಜಿಲ್ಲೆಯ ಜನರು ನನ್ನನ್ನು ಪ್ರೀತಿಯಿಂದ ಬೆಳೆಸಿದ್ದಾರೆ. ಈ ಹಿನ್ನೆಲೆಯಲ್ಲಿ ನನ್ನಿಂದಾಗುವ ಸೇವೆ ಮಾಡುವ ಇಚ್ಚೆ ಹೊಂದಿದ್ದೇನೆ ಎಂದು ಶಂಭು ಸೇವಾ ಟ್ರಸ್ಟ್ ಹಾಗೂ ಮನ್‌ಮುಲ್ ಅಧ್ಯಕ್ಷ ಬಿ.ಆರ್.ರಾಮಚಂದ್ರು ಹೇಳಿದರು.
ತಾಲೂಕಿನ ಹಲ್ಲೆಗೆರೆ ಗ್ರಾಮದಲ್ಲಿ ಟ್ರಸ್ಟ್ ವತಿಯಿಂದ ಸರ್ಕಾರಿ ಶಾಲಾ ಮಕ್ಕಳಿಗೆ ಉಚಿತವಾಗಿ ಬ್ಯಾಗ್ ವಿತರಣೆ ಮಾಡಿ ಮಾತನಾಡಿದರು. ಜನರಿಗೆ ಸೇವೆ ಮಾಡುವುದೇ ಶಂಭು ಸೇವಾ ಟ್ರಸ್ಟ್ ಉದ್ದೇಶವಾಗಿದೆ. ಪ್ರತಿಯೊಬ್ಬರನ್ನು ಸಮಾನವಾಗಿ ಕಾಣುವ ದೃಷ್ಟಿಯಿಂದ ಒಂದನೇ ತರಗತಿಯಿಂದ 10ನೇ ತರಗತಿಯ ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ಟ್ರಸ್ಟ್ ವತಿಯಿಂದ ಉಚಿತವಾಗಿ ಬ್ಯಾಗ್‌ಗಳನ್ನು ವಿತರಣೆ ಮಾಡಲಾಗುತ್ತಿದೆ. ಶಿಕ್ಷಣಕ್ಕಾಗಿ ಸರ್ಕಾರ ಅನೇಕ ಸವಲತ್ತುಗಳನ್ನು ನೀಡುತ್ತಿದೆ. ವಿದ್ಯಾರ್ಥಿಗಳು ಅವುಗಳನ್ನು ಬಳಸಿಕೊಂಡು ಉನ್ನತವಾಗಿ ವ್ಯಾಸಂಗ ಮಾಡುವಂತೆ ಸಲಹೆ ನೀಡಿದರು.
ಸುಬ್ಬಣ್ಣ, ಲಿಂಗರಾಜು, ರಾಮಲಿಂಗಣ್ಣ, ನಾಗರಾಜು, ಅನ್ನದಾನಿಗೌಡ, ಶಂಕರ್, ರಮೇಶ್, ಕೃಷ್ಣ, ಲೋಕೇಶ್, ಪ್ರೇಮಾ, ತಾಯಮ್ಮ, ಮರೀಗೌಡ ಇತರರಿದ್ದರು.
ಹಲ್ಲೆಗೆರೆ ಗ್ರಾಮದ ಪರಿಣಿತ ವಿದ್ಯಾಸಂಸ್ಥೆ, ಚನ್ನಕೇಶವ ಪ್ರೌಢಶಾಲೆ ಶಾಲೆ, ಸರ್ಕಾರಿ ಶಾಲೆ, ಚಿಕ್ಕಬಳ್ಳಿ, ಆನಸೋಸಲು, ತಂಗಳಗೆರೆ, ದ್ಯಾಪಸಂದ್ರ, ದೊಡ್ದಬಾಣಸವಾಡಿ ಮತ್ತು ಚಾಮಲಪುರ ಸರ್ಕಾರಿ ಶಾಲೆಯ ಎಲ್ಲ ಮಕ್ಕಳಿಗೆ ಟ್ರಸ್ಟ್ ವತಿಯಿಂದ ಉಚಿತವಾಗಿ ಶಾಲಾಬ್ಯಾಗ್ ವಿತರಿಸಲಾಯಿತು. ಬಿ.ಆರ್.ರಾಮಚಂದ್ರು ಹಾಗೂ ಟ್ರಸ್ಟ್‌ನ ಕಾರ್ಯದರ್ಶಿ ಸುರೇಶ್ ಅವರನ್ನು ಗ್ರಾಮಸ್ಥರು ಸನ್ಮಾನಿಸಿದರು.