

ನ್ಯಾಮತಿ: ಮಕ್ಕಳಿಗೆ ಶಿಕ್ಷಣದ ಜತೆಗೆ ಸಂಸ್ಕಾರವನ್ನು ಕಲಿಸುವ ಮೂಲಕ ಸಮಾಜದ ಉತ್ತಮ ವ್ಯಕ್ತಿಯನ್ನಾಗಿ ಮಾಡುವ ಜವಾಬ್ದಾರಿ ತಾಯಿಯ ಮೇಲಿದೆ ಎಂದು ನ್ಯಾಮತಿ ಸಮುದಾಯ ಆರೋಗ್ಯ ಕೇಂದ್ರದ ಮಕ್ಕಳ ವೈದ್ಯ ರಘುಕುಮಾರ್ ಹೇಳಿದರು.
ತಾಲೂಕಿನ ಫಲವನಹಳ್ಳಿ ಗ್ರಾಮದ ಶ್ರೀಲಕ್ಷ್ಮೀ ರಂಗನಾಥ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ ಶಾಲಾ ವಾರ್ಷಿಕೋತ್ಸವ ಉದ್ಘಾಟಿಸಿ ಮಾತನಾಡಿದರು.
ಹೊರಗಡೆ ಆಡವಾಡಲು ಬಿಡದೆ ಮಕ್ಕಳ ಕೈಗೆ ಮೊಬೈಲ್ ನೀಡುವುದರಿಂದ ಅವರ ದೈಹಿಕ ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಹಾಗಾಗಿ ಪಾಲಕರು ವಿದ್ಯಾಭ್ಯಾಸಕ್ಕೆ ಮಾತ್ರ ಮೊಬೈಲ್ ಕೊಡಿ. ಉತ್ತಮ ಆರೋಗ್ಯಕ್ಕಾಗಿ ಮನೆಯಲ್ಲಿಯೇ ಪೌಷ್ಟಿಕ ಆಹಾರವನ್ನು ತಯಾರಿಸಿ ಆರೋಗ್ಯವಂತ ಕುಟುಂಬವಾಗಿಸಿ ಎಂದರು.
ಫಲವನಹಳ್ಳಿ ಆಯುರ್ವೆದಿಕ್ ಆಸ್ಪತ್ರೆಯ ವೈದ್ಯ ಲಿಂಗರಾಜೇಂದ್ರ ಮಾತನಾಡಿದರು. ವಿವಿಧ ವಿಭಾಗದಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಮತ್ತು ವಾರ್ಷಿಕೋತ್ಸವದ ಹಿನ್ನಲೆ ಆಯೋಜಿಸಿ ಕ್ರೀಡಾ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಣೆ ಮಾಡಿದರು.
ಸಂಸ್ಥೆಯ ಅಧ್ಯಕ್ಷ ಬಿ. ಶರಣಪ್ಪ ಅಧ್ಯಕ್ಷತೆ ವಹಿಸಿದ್ದರು. ಸವಳಂಗ ಆರೋಗ್ಯ ಕೇಂದ್ರದ ನರ್ಸ್ಗಳಾದ ಸರಸ್ವತಮ್ಮ ಮತ್ತು ಶಾರದಾ, ಪಿಡಿಒ ಸೋಮಣ್ಣ, ಕಾರ್ಯದರ್ಶಿ ಅರವಿಂದ್ ಇತರರಿದ್ದರು.