ಜ್ಞಾನ ದೇಗುಲಕ್ಕೆ ಕೈ ಮುಗಿದು ಬಂದ ಮಕ್ಕಳು ; ಶಾಲೆಗಳಲ್ಲಿ ಮಕ್ಕಳ ಕಲರವ

Maralur Gowrnment School (6)
Published on

ತುಮಕೂರು: ಕರೊನಾ ಕಡಿಮೆಯಾಗುತ್ತಿರುವ ನಡುವೆ ಬಹುದಿನದ ನಂತರ 6, 7, ಮತ್ತು 8ನೇ ತರಗತಿ ಸೋಮವಾರ ಆರಂಭವಾಗಿದ್ದು, ಮಕ್ಕಳು ಶಾಲಾ ಸಮವಸ್ತ್ರ ಧರಿಸಿ ಖುಷಿಯಿಂದಲೇ ಶಾಲೆಗಳಿಗೆ ಆಗಮಿಸಿದರು.

ತುಮಕೂರು ಶೈಕ್ಷಣಿಕ ಜಿಲ್ಲೆಯ 2417 ಪ್ರಾಥಮಿಕ ಶಾಲೆಗಳಲ್ಲಿ 6 ರಿಂದ 8ನೇ ತರಗತಿಯ 85 ಸಾವಿರ ವಿದ್ಯಾರ್ಥಿಗಳು ಹಾಗೂ ಮಧುಗಿರಿ ಶೈಕ್ಷಣಿಕ ಜಿಲ್ಲೆಯಲ್ಲಿ 1403 ಪ್ರಾಥಮಿಕ ಶಾಲೆಗಳಲ್ಲಿ 45 ಸಾವಿರ ವಿದ್ಯಾರ್ಥಿಗಳು 6, 7 ಹಾಗೂ 8ನೇ ತರಗತಿಗಳಿಗೆ ದಾಖಲಾಗಿದ್ದು, ಎಲ್ಲ ಶಾಲೆಗಳಿಗೆ ವಿದ್ಯಾರ್ಥಿಗಳು ಉತ್ಸಾಹದಿಂದ ಬಂದರು.

ಸರ್ಕಾರ 9 ರಿಂದ 12ನೇ ತರಗತಿವರೆಗೆ ಶಾಲೆ, ಕಾಲೇಜುಗಳನ್ನು ಆರಂಭಿಸಿ ಯಶ ಕಂಡಿರುವ ಹಿನ್ನೆಲೆಯಲ್ಲಿ ಅದೇ ವಾದರಿಯಲ್ಲಿ ಎಲ್ಲ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡು ಇಂದಿನಿಂದ 6 ರಿಂದ 8ನೇ ತರಗತಿಗಳನ್ನು ಆರಂಭಿಸಿದೆ. ಜಿಲ್ಲೆಯಾದ್ಯಂತ ಸರ್ಕಾರಿ ಮತ್ತು ಖಾಸಗಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ಕಲರವ ಇತ್ತು.

ಶಾಲಾ ಕೊಠಡಿಗಳಲ್ಲಿ ಪರಸ್ಪರ ಅಂತರ ಕಾಯ್ದುಕೊಂಡು ವಾಸ್ಕ್ ಧರಿಸಿ ವಿದ್ಯಾರ್ಥಿಗಳು ಡೆಸ್ಕ್‌ಗಳಲ್ಲಿ ಕುಳಿತುಕೊಂಡಿದ್ದ ದೃಶ್ಯಗಳು ಕಂಡು ಬಂದವು, ಸೋಮವಾರ ಬೆಳಗ್ಗೆ ಶಾಲಾ ಆವರಣಗಳಲ್ಲಿ ಪ್ರಾರ್ಥನೆಯೊಂದಿಗೆ ಶಾಲೆಗಳು ಆರಂಭವಾದವು. ಕರೊನಾ ಕಾರಣಕ್ಕೆ ಕಳೆದ 2 ವರ್ಷಗಳಿಂದ ಮಕ್ಕಳ ಕಲರವ ಇಲ್ಲದೆ ಬಣಗುಡುತ್ತಿದ್ದ ಶಾಲಾ ಆವರಣದಲ್ಲಿ ಹಬ್ಬದ ವಾತಾವರಣವಿತ್ತು.

ಕೊಠಡಿಯಲ್ಲಿ ಗರಿಷ್ಠ 20 ಮಕ್ಕಳಿಗೆ ಕುಳಿತು ಪಾಠ ಕೇಳಲು ಅವಕಾಶ ನೀಡಲಾಗಿತ್ತು, ಮೊದಲ ದಿನವಾದ ಸೋಮವಾರ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಿದ್ದ ಕಾರಣಕ್ಕೆ ಎಲ್ಲಿಯೂ ಸಮಸ್ಯೆಯಾಗಲಿಲ್ಲ. ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾದರೆ ಪಾಳಿಯಲ್ಲಿ ತರಗತಿ ನಡೆಸಲು ಶಿಕ್ಷಣ ಇಲಾಖೆ ಮಾರ್ಗಸೂಚಿಯಲ್ಲಿ ಸೂಚಿಸಲಾಗಿದೆ. ಮರಳೂರಿನ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆ ಮುಖ್ಯಶಿಕ್ಷಕ ರುಕ್ಮಾಂಗ ವಾತನಾಡಿ, ಸರ್ಕಾರದ ಸುತ್ತೋಲೆಯಂತೆ 6 ಮತ್ತು 7ನೇ ತರಗತಿಯ ಮಕ್ಕಳನ್ನು ಶಾಲೆಗೆ ಬರ ವಾಡಿಕೊಳ್ಳುತ್ತಿದ್ದು, ಮಕ್ಕಳಿಗೆ ಸಮವಸ್ತ್ರ, ಪಠ್ಯ ಪುಸ್ತಕ ನೀಡಿ ಸ್ವಾಗತಿಸಲಾಗುತ್ತಿದೆ. ಕರೊನಾ ವಾರ್ಗಸೂಚಿ ಪ್ರಕಾರ ಎಲ್ಲ ಮುನ್ನೆಚ್ಚರಿಕೆ ಕ್ರಮ ಪಾಲಿಸಲಾಗಿದೆ ಎಂದರು.

ಬೆಳಗ್ಗೆ 10ರಿಂದ ಮಧ್ಯಾಹ್ನ 1ರ ವರೆಗೂ ತರಗತಿಗಳನ್ನು ನಡೆಸಲಾಯಿತು, ವಾರದಲ್ಲಿ 5 ದಿನಗಳು ತರಗತಿಗಳು ನಡೆಯಲಿದ್ದು, ಶನಿವಾರ ಮತ್ತು ಭಾನುವಾರ ಶಾಲೆಗೆ ರಜೆ ಇರುತ್ತದೆ. ವಾರಾಂತ್ಯದಲ್ಲಿ ಶಾಲಾ ಆವರಣ, ಶಾಲಾ ಕೊಠಡಿ ಸಂಪೂರ್ಣ ಸ್ಯಾನಿಟೈಸ್ ವಾಡಿಸಿ ಸ್ವಚ್ಛಗೊಳಿಸಲಾಗುತ್ತದೆ. ಸಿ.ನಂಜಯ್ಯ ಡಿಡಿಪಿಐ, ತುಮಕೂರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net