ಪ್ರತಿಭಾವಂತರಿಗೆ ವಿದ್ಯಾರ್ಥಿ ವೇತನ

Published on

ಬಳ್ಳಾರಿ ; ಪ್ರಥಮ ಪಿಯು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಎಸ್‌ಡಿಎಫ್‌ದಿಂದ ವಿದ್ಯಾರ್ಥಿ ವೇತನ ನೀಡಲಾಗುವುದು ಎಂದು ಸರೋಜಿನಿ ದಾಮೋದರನ್ ಪ್ರತಿಷ್ಠಾನದ ಕಾರ್ಯಕ್ರಮ ಸಂಯೋಜಕ ಜೆಸ್ಟಿನ್ ಟಾಮ್ ಹೇಳಿದರು.

ನಗರದ ಖಾಸಗಿ ಹೋಟೆಲ್‌ನಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಸರೋಜಿನಿ ದಾಮೋದರನ್ ಫೌಂಡೇಶನ್(ಎಸ್‌ಡಿಎಫ್) ರಾಜ್ಯದ ಆರ್ಥಿಕವಾಗಿ ಹಿಂದುಗಳಿದ ಕುಟುಂಬಗಳ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ನೀಡುತ್ತಿದೆ. ಪ್ರಥಮ ಪಿಯು ವಿದ್ಯಾದಾನ ವಿದ್ಯಾರ್ಥಿ ವೇತನವು ವಾರ್ಷಿಕ ಅದಾಯ ಎರಡು ಲಕ್ಷಕ್ಕಿಂತ ರೂ. ಕಡಿಮೆ ಹೊಂದಿರುವ ಆರ್ಥಿಕವಾಗಿ ಹಿಂದುಳಿದ ಕುಟುಂಬಗಳ ವಿದ್ಯಾರ್ಥಿಗಳಿಗಾಗಿ ಕರೆಯಲಾಗಿದೆ. ಅರ್ಹ ಅಭ್ಯರ್ಥಿಗಳು ಕಳೆದ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಯಶ್ವಸಿಯಾಗಿ ಉತ್ತೀರ್ಣರಾಗಿಬೇಕು. ಶೇ 90 ರಷ್ಟು ( ಅಂಗವಿಕಲ ಶೇ 75) ಅಥವಾ ಎಲ್ಲ ವಿಷಯಗಳಲ್ಲಿ ಎ ಪ್ಲಸ್ ಗ್ರೇಡ್ ಪಡೆದಿರಬೇಕು. ಆಯ್ಕೆಯಾದ ವಿದ್ಯಾರ್ಥಿಗಳಿಗೆ ಅವರ ಪಿಯು ಅಧ್ಯಯನ ಅವಧಿಯಲ್ಲಿ ವರ್ಷಕ್ಕೆ ಹತ್ತು ಸಾವಿರ ರೂ. ಹಾಗೂ ನಂತರ ಪದವಿಯನ್ನು ಮುಂದುವರೆಸಲು ವರ್ಷಕ್ಕೆ ಹದಿನೈದು ರಿಂದ 75 ಸಾವಿರ ರೂ. ವರೆಗೆ ವಿದ್ಯಾರ್ಥಿ ವೇತನ ನೀಡಲಾಗುವುದು ಎಂದರು.

ಆಸಕ್ತರು ‘ ವಿದ್ಯಾಧನ್’ ಅಥವಾ ಮೊಬೈಲ್ ನಲ್ಲಿ ಫ್ಲೇ ಸ್ಟೋರ್‌ನಲ್ಲಿ ‘ ಎಸ್‌ಡಿಎಫ್ ವಿದ್ಯಾ ’ ಭೇಟಿ ನೀಡಿ ಅರ್ಜಿಗಳನ್ನು ಆನ್‌ಲೈನ್‌ನಲ್ಲಿ ಸಲ್ಲಿಸಬಹುದು. ವಿದ್ಯಾರ್ಥಿ ವೇತನ ಅರ್ಜಿಗಳು ಜು 08ರೊಳಗಾಗಿ ಸಲ್ಲಿಸಲು ಅವಕಾಶವಿದೆ. ಮಾಹಿತಿಗೆ 8068333500ಗೆ ಸಂಪರ್ಕಿಸಬಹುದು ಎಂದರು. ಸಂಚಾಲಕರಾದ ಪ್ರಭುದೇವ ಕಪ್ಪಗಲ್ಲು, ವೆಂಕಟೇಶ ಬಡಿಗೇರ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net