ಗಂಗೊಳ್ಳಿ ಸಹಕಾರಿ ಬ್ಯಾಂಕ್ ಸದಸ್ಯರಿಗೆ ಶೇ.10 ಡಿವಿಡೆಂಡ್

mahasabhe
ಗಂಗೊಳ್ಳಿ ಸೇವಾ ಸಹಕಾರಿ ಬ್ಯಾಂಕ್‌ನ 2023-24ನೇ ಸಾಲಿನ ಮಹಾಸಭೆಯಲ್ಲಿ ಸಂಘದ ಅಧ್ಯಕ್ಷ ಆನಂದ ಬಿಲ್ಲವ ಮಾತನಾಡಿದರು.
Published on

ವಿಜಯವಾಣಿ ಸುದ್ದಿಜಾಲ ಗಂಗೊಳ್ಳಿ

ಇಲ್ಲಿನ ಸೇವಾ ಸಹಕಾರಿ ಬ್ಯಾಂಕ್‌ನ 2023-24ನೇ ಸಾಲಿನ ಮಹಾಸಭೆ ಶೀ ರಾಮ ಮಂದಿರದಲ್ಲಿ ಶುಕ್ರವಾರ ನಡೆಯಿತು. ಅಧ್ಯಕ್ಷ ಆನಂದ ಬಿಲ್ಲವ ಅಧ್ಯಕ್ಷತೆ ವಹಿಸಿ, ವರ್ಷದಲ್ಲಿ 13,291 ಸದಸ್ಯರೊಂದಿಗೆ 1.72 ಕೋಟಿ ರೂ. ಬಂಡವಾಳ ಹೊಂದಿದೆ. ವರ್ಷಾಂತ್ಯಕ್ಕೆ 37.04 ಕೋಟಿ ರೂ.ಗೂ ಮಿಕ್ಕಿ ಠೇವಣಿ ಹೊಂದಿದ್ದು, ಹೊರಬಾಕಿ ಸಾಲ 1.53 ಕೋಟಿ ರೂ. ಇದೆ. 19.12 ಕೋಟಿ ರೂ.ಗಳನ್ನು ವಿವಿಧ ಸಂಘ, ಬ್ಯಾಂಕ್‌ಗಳಲ್ಲಿ ಹೂಡಿಕೆ ಮಾಡಲಾಗಿದೆ. ವರ್ಷಾಂತ್ಯಕ್ಕೆ ಸಂಘವು 42.65 ಲಕ್ಷ ರೂ. ನಿವ್ವಳ ಲಾಭ ಗಳಿಸಿದ್ದು, ಸದಸ್ಯರಿಗೆ ಶೇ.10 ಪಾಲು ಡಿವಿಡೆಂಡ್ ನೀಡಲು ನಿರ್ಧರಿಸಲಾಗಿದೆ ಎಂದರು.

ಸಂಘದ ವ್ಯಾಪ್ತಿಯ ಶಾಲೆಗಳಲ್ಲಿ ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ವಿತರಿಸಲಾಯಿತು. ಸಂಘದ ನಿರ್ದೇಶಕರಾದ ಶ್ರೀನಿವಾಸ ಜತ್ತನ್ ಪೂಜಾರಿ, ಹರೀಶ ಮೇಸ್ತ, ಕೆ.ಮಾಧವ ಖಾರ್ವಿ, ಜಿ.ಗೋಪಾಲ ನಾಯ್ಕ, ಪ್ರೇಮಾ ಪೂಜಾರಿ, ಯಮುನಾ, ಚಂದ್ರಮತಿ ಡಿ.ಹೆಗ್ಡೆ, ನಾಗರಾಜ ಎಂ, ಲಕ್ಷ್ಮಣ ಉಪಸ್ಥಿತರಿದ್ದರು.

ಹಿರಿಯ ಗುಮಾಸ್ತ ಮಾಧವ ಖಾರ್ವಿ ಪ್ರಾರ್ಥಿಸಿದರು. ಉಪಾಧ್ಯಕ್ಷ ವಾಸುದೇವ ಶೇರುಗಾರ್ ಸ್ವಾಗತಿಸಿದರು. ತಲ್ಲೂರು ಶಾಖಾ ವ್ಯವಸ್ಥಾಪಕ ರಾಜ್‌ಗೋಪಾಲ ಪೂಜಾರಿ ವಂದಿಸಿದರು. ಸಂಘದ ಪ್ರಧಾನ ವ್ಯವಸ್ಥಾಪಕ ದಯಾನಂದ ಗಾಣಿಗ 2024-2025ನೇ ಸಾಲಿನ ಆಯ-ವ್ಯಯ ಅಂದಾಜು ಬಜೆಟ್ ಹಾಗೂ 2023-24ನೇ ಸಾಲಿನ ಲಾಭಾಂಶ ವಿಂಗಡನೆ ಮಂಡಿಸಿ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net