

ವಿಜಯವಾಣಿ ಸುದ್ದಿಜಾಲ ಧಾರವಾಡ
ನಗರದ ಬೇಂದ್ರೆ ವಿಜ್ಞಾನ ಹಾಗೂ ವಾಣಿಜ್ಯ ಪದವಿ ಪೂರ್ವ ಕಾಲೇಜಿನಲ್ಲಿ ಏ. 20ರಂದು ಬೆಳಗ್ಗೆ 11 ಗಂಟೆಗೆ ಬೇಂದ್ರೆ ಅನ್ವೇಷಣಾ ವಿದ್ಯಾರ್ಥಿ ವೇತನ ಪ್ರವೇಶ ಪರೀಕ್ಷೆ ಏರ್ಪಡಿಸಲಾಗಿದೆ.
10ನೇ ತರಗತಿಯ ವಿಜ್ಞಾನ, ಇಂಗ್ಲಿಷ್ ಹಾಗೂ ಗಣಿತ ಪಠ್ಯದ ಪ್ರವೇಶ ಪರೀಕ್ಷೆ ನಡೆಯಲಿದ್ದು, ಕನ್ನಡ ಹಾಗೂ ಆಂಗ್ಲ ಮಾಧ್ಯಮದ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಬಹುದು. 60 ಅಂಕಗಳ ಪರೀಕ್ಷೆಯಲ್ಲಿ 60 ಅಂಕ ಪಡೆದವರಿಗೆ ಪ್ರಥಮ ಪಿಯುಸಿಗೆ ಉಚಿತ ಪ್ರವೇಶ, 50 ರಿಂದ 59 ಅಂಕ ಪಡೆದವರಿಗೆ ಶೇ. 50ರಷ್ಟು ರಿಯಾಯಿತಿ ಹಾಗೂ 40 ರಿಂದ 49 ಅಂಕ ಪಡೆದವರಿಗೆ ಶೇ. 25ರಷ್ಟು ರಿಯಾಯಿತಿ ನೀಡಲಾಗುವುದು. ಹೆಚ್ಚಿನ ಮಾಹಿತಿಗೆ ಕಾಲೇಜು ಸಂಪರ್ಕಿಸಬಹುದು ಎಂದು ಪಾಟೀಲ ಪ್ರತಿಷ್ಠಾನ ಟ್ರಸ್ಟ್ ಅಧ್ಯಕ್ಷ ಪ್ರಕಾಶಗೌಡ ಬೆದವಟ್ಟಿ ತಿಳಿಸಿದ್ದಾರೆ.