ವಿದ್ಯಾರ್ಥಿವೇತನ ಸದುಪಯೋವಾಗಲಿ : ಜೆಸಿಐ ವಲಯ ತರಬೇತುದಾರ ಸಂದೀಪ್ ಸಾಲ್ಯಾನ್ ಆಶಯ

Published on

ಬಂಟ್ವಾಳ: ಸ್ವಾತಂತ್ರ್ಯ ಹೋರಾಟಗಾರ ಡಾ.ಅಮ್ಮೆಂಬಳ ಬಾಳಪ್ಪರ ದೂರದೃಷ್ಟಿಯ ಫಲವಾಗಿ ಸವಾಜಸೇವಾ ಸಹಕಾರಿ ಬ್ಯಾಂಕ್ ಸ್ಥಾಪನೆಯಾಗಿದೆ. ಡಾ.ಬಾಳಪ್ಪ ಅವರ ಆಶಯದಂತೆ ಸಂ ನಿರಂತರವಾಗಿ ವಿದ್ಯಾರ್ಥಿವೇತನವನ್ನು ನೀಡುತ್ತಿದೆ. ಆಡಳಿತ ಮಂಡಳಿ, ಸಿಬ್ಬಂದಿಯ ಶ್ರಮ, ಗ್ರಾಹಕರ ಸಹಕಾರದಿಂದಾಗಿ ಸಂ ಲಾಭದಾಯಕವಾಗಿ ನಡೆಯುತ್ತಿದ್ದು, ಅದರ ಒಂದಂಶವನ್ನು ವಿದ್ಯಾರ್ಥಿ ವೇತನವಾಗಿ ನೀಡುತ್ತಿದ್ದು ವಿದ್ಯಾರ್ಥಿಗಳು ಈ ಮೊತ್ತವನ್ನು ವಿದ್ಯಾಭ್ಯಾಸಕ್ಕೆ ಸದುಪಯೋಗ ಪಡಿಸಬೇಕೆಂದು ಜೆಸಿಐ ವಲಯ ತರಬೇತುದಾರ ಸಂದೀಪ್ ಸಾಲ್ಯಾನ್ ಹೇಳಿದರು.

ಬಂಟ್ವಾಳ ಸವಾಜಸೇವಾ ಸಹಕಾರಿ ಸಂದ ವತಿಯಿಂದ ಸಂದ ಸಭಾಂಗಣದಲ್ಲಿ ಭಾನುವಾರ ನಡೆದ 2024-25ನೇ ಸಾಲಿನ ವಿದ್ಯಾರ್ಥಿ ವೇತನ ವಿತರಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ವಾತನಾಡಿದರು.

ಕೆಐಸಿಎಂ ಮೂಡುಬಿದಿರೆಯ ಪ್ರಥಮ ದರ್ಜೆ ಸಹಾಯಕ ಹೊನ್ನಪ್ಪ ಮುಖ್ಯ ಅತಿಥಿಯಾಗಿದ್ದರು. 160 ಸ್ನಾತಕ್ಕೋತರ ವಿದ್ಯಾರ್ಥಿಗಳಿಗೆ 6.88 ಲಕ್ಷ ರೂ. ವಿದ್ಯಾರ್ಥಿವೇತನ ವಿತರಿಸಲಾಯಿತು. ಲಕ್ಷ್ಮೀ ಅಮೂಲ್ಯ ಸ್ವಸಹಾಯ ಸಂದ ಸದಸ್ಯೆ ದೇವಕಿ ಅನಾರೋಗ್ಯದಿಂದ ಮೃತಪಟ್ಟಿದ್ದು, ಅವರ ವಾರಸುದಾರರಿಗೆ 25 ಸಾವಿರ ರೂ.ಆರ್ಥಿಕ ನೆರವಿನ ಚೆಕ್ ವಿತರಿಸಲಾಯಿತು. 2023-24ನೇ ಸಾಲಿನ ಸಹಕಾರಿ ಶಿಕ್ಷಣ ನಿಧಿ ಚೆಕ್ಕನ್ನು ಕೆಐಸಿಎಂ ಮೂಡಬಿದಿರೆಯ ಪ್ರಥಮದರ್ಜೆ ಸಹಾಯಕ ಹೊನ್ನಪ್ಪ ಅವರ ಮೂಲಕ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಲಕ್ಕೆ ಹಸ್ತಾಂತರಿಸಲಾಯಿತು. ಕುಕ್ಕಾಜೆ ಶಾಖೆ ವ್ಯವಸ್ಥಾಪಕಿ ಕಮಲಾ ಸ್ವಾಗತಿಸಿದರು. ಪ್ರಧಾನ ವ್ಯವಸ್ಥಾಪಕ ಭೋಜ ಮೂಲ್ಯ ಪ್ರಸ್ತಾವಿಸಿದರು. ಸಹಾಯಕ ಪ್ರಧಾನ ವ್ಯವಸ್ಥಾಪಕ ಮೋಹನ್ ಎಂ.ಕೆ. ನಿರೂಪಿಸಿದರು. ವಿಟ್ಲ ಶಾಖೆ ವ್ಯವಸ್ಥಾಪಕ ಸುಂದರ ಮೂಲ್ಯ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net