

ಧಾರವಾಡ: ಕೋವಿಡ್ ಸಾಂಕ್ರಾಮಿಕ ರೋಗಕ್ಕೆ ಬಹಳಷ್ಟು ಮಕ್ಕಳು ಪಾಲಕರನ್ನು ಕಳೆದುಕೊಂಡು ಕಷ್ಟ ಅನುಭವಿಸುತ್ತಿದ್ದಾರೆ. ಅಂತಹ ಮಕ್ಕಳನ್ನು ಬೆಳೆಸುವ ಜವಾಬ್ದಾರಿ ಸರ್ಕಾರದ್ದು ಅಷ್ಟೆ ಅಲ್ಲ, ನಮ್ಮೆಲ್ಲರ ಕರ್ತವ್ಯ. ಮತ್ತೊಬ್ಬರಿಗೆ ನೆರವಾಗುವ ಹೃದಯ ಶ್ರೀಮಂತಿಕೆ ಇರುವ ಜನರ ಅಗತ್ಯವಿದೆ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಽಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಽÃಶ ಪರುಶರಾಮ ದೊಡ್ಡಮನಿ ಹೇಳಿದರು.
ನಗರದ ರಾಜ್ಯ ಸರ್ಕಾರಿ ನೌಕರರ ಸಭಾಭವನದಲ್ಲಿ ಶನಿವಾರ ಆಯೋಜಿಸಿದ್ದ ಕೋವಿಡ್‌ನಿಂದ ತಂದೆ ಅಥವಾ ತಾಯಿಯನ್ನು ಕಳೆದುಕೊಂಡು ಏಕಪೋಷಕರಾದ ಮಕ್ಕಳಿಗೆ ಶಾಲಾ ಶುಲ್ಕ ವಿತರಣಾ ಸಮಾರಂಭ ಹಾಗೂ ಮಕ್ಕಳಿಗೆ ಕಾನೂನಿನ ಅರಿವು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ನೀಡಲಾಗುತ್ತಿದೆ. ಉಚಿತ ಸಮವಸ್ತç, ಪುಸ್ತಕ, ಶೂ, ಸೈಕಲ್, ಹಾಲು, ಬಿಸಿಊಟ ಕೊಡುತ್ತಾರೆ. ಆದ್ದರಿಂದ ಪಾಲಕರು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಯಲ್ಲಿ ಓದಿಸಬೇಕು ಎಂದರು.
ಅಖಿಲ ಭಾರತ ಪ್ರಾಥಮಿಕ ಶಾಲಾ ಶಿಕ್ಷಕರ ಪೇಡರೇಶನ್ ಕಾರ್ಯಾಧ್ಯಕ್ಷ ಬಸವರಾಜ ಗುರಿಕಾರ ಮಾತನಾಡಿ, ಪೋಷಕರನ್ನು ಕಳೆದುಕೊಂಡಿದ್ದೇವೆ ಎಂದು ಕೊರಗಬೇಡಿ. ನಿಮ್ಮ ಜೊತೆ ನಾವೆಲ್ಲರೂ ಇದ್ದೇವೆ. ಶಿಕ್ಷಣ ಎಂಬುದು ಶಕ್ತಿ. ವಿವಿಧ ಹುದ್ದೆಗಳಲ್ಲಿ ಕಾರ್ಯ ನಿರ್ವಹಿಸುವಾಗ ಸ್ವಾರ್ಥವಿಲ್ಲದ ಕಾಯಕ ಮಾಡಬೇಕು ಎಂದರು.
ಏಕಪೋಷಕತ್ವದ ೯೮ ಮಕ್ಕಳಿಗೆ ಶಾಲಾ ಶುಲ್ಕ ವಿತರಿಸಲಾಯಿತು.
ಜಿಲ್ಲಾ ಮಕ್ಕಳ ರಕ್ಷಣಾಽಕಾರಿ ನೀತಾ ವಾಡಕರ ಅಧ್ಯಕ್ಷತೆ ವಹಿಸಿದ್ದರು. ಕರ್ನಾಟಕ ಕಲಾ ಮಹಾವಿದ್ಯಾಲಯದ ನಿವೃತ್ತ ಪ್ರಾಚಾರ್ಯ ಎನ್.ಎ. ಚಚಡಿ, ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷೆ ರಾಜೇಶ್ವರಿ ಸಾಲಗಟ್ಟಿ, ಬೆಂಗಳೂರು ಎ.ಐ.ಎಫ್.ಟಿ. ಮಾರ್ಗದರ್ಶಕರಾದ ರವೀಂದ್ರ ಎನ್., ರವೀಂದ್ರ ಜೋಶಿ, ಪ್ರಕಾಶ ಹಳಿಯಾಳ ಉಪಸ್ಥಿತರಿದ್ದರು.