ಏಕಮುಖಿ ಚಿಂತನೆಯಿಂದ ಸಮಾಜಕ್ಕೆ ಹಾನಿ

Vidya Poshak 1
Published on

ಸುಗುಣೇಂದ್ರ ತೀರ್ಥ ಶ್ರೀಪಾದರ ಆಶೀರ್ವಚನ

ವಿನಮ್ರ ಸಹಾಯಧನ ವಿತರಣಾ ಸಮಾರಂಭ

ವಿಜಯವಾಣಿ ಸುದ್ದಿಜಾಲ ಉಡುಪಿ

ವಿದ್ಯಾಭ್ಯಾಸಕ್ಕೆ ಹಣದ ಸಹಾಯವಷ್ಟೇ ಬೇಕಾಗಿಲ್ಲ. ಸಂಸ್ಕಾರ, ಸ್ವಚ್ಛ ಮನಸ್ಸು ಮತ್ತು ಸರಿಯಾದ ದೃಷ್ಟಿಕೋನದ ಅಗತ್ಯತೆಯಿದೆ. ಡಾಕ್ಟರ್​, ಇಂಜಿನಿಯರ್​ ಆಗಬೇಕೆನ್ನುವುದು ಮಾತ್ರ ಇಂದಿನ ವಿದ್ಯಾರ್ಥಿಗಳ ಎರಡೇ ಗುರಿಯಾಗಿದೆ. ಮೂರನೇಯದಾಗಿ ಸ್ವಂತ ಚಿಂತನೆ ಕಳೆದುಕೊಂಡಿದ್ದಾರೆ. ಎಲ್ಲರೂ ಒಂದೇ ದಾರಿಯಲ್ಲಿ ಸಾಗಿದರೆ ಉಳಿದ ಮಾರ್ಗಗಳೆಲ್ಲ ತನ್ನಿಂದ ತಾನೇ ಮುಚ್ಚಲ್ಪಡುತ್ತದೆ. ಏಕಮುಖಿ ಚಿಂತನೆಯಿಂದ ಸಮಾಜದ ಸಮತೋಲನಕ್ಕೆ ಘಾಸಿಯಾಗುತ್ತದೆ ಎಂದು ಪರ್ಯಾಯ ಪುತ್ತಿಗೆ ಮಠದ ಸುಗುಣೇಂದ್ರ ತೀರ್ಥ ಶ್ರೀಪಾದರು ನುಡಿದರು.

ಉಡುಪಿ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಉಡುಪಿ ಯಕ್ಷಗಾನ ಕಲಾರಂಗದ ಅಂಗಸಂಸ್ಥೆ ವಿದ್ಯಾಪೋಷಕ್​ನ 21ನೇ ವಾರ್ಷಿಕೋತ್ಸವದ ನಿಮಿತ್ತ ಹಿಂದುಳಿದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಭಾನುವಾರ (ಅ.5)ರಂದು ಆಯೋಜಿಸಿದ್ದ ವಿನಮ್ರ ಸಹಾಯಧನ ವಿತರಣಾ ಸಮಾರಂಭ ಉದ್ಘಾಟಿಸಿ ಆಶೀರ್ವಚನ ನೀಡಿದರು.

ಶುಲ್ಕದಲ್ಲಿ ರಿಯಾಯಿತಿ ಭರವಸೆ

H-S-Ballal
ಮಾಹೆಯ ಸಹಕುಲಾಧಿಪತಿ ಡಾ. ಎಚ್​.ಎಸ್​. ಬಲ್ಲಾಳ ಮಾತನಾಡಿ, ಮಾಹೆ ಮತ್ತು ಅಕಾಡೆಮಿಕ್​ ಆಪ್​ ಜನರಲ್​ ಎಜುಕೇಶನ್​ ಸಂಸ್ಥೆಗಳಲ್ಲಿ ಕಲಿಯುತ್ತಿರುವ ವಿದ್ಯಾಪೋಷಕ್​ನ ಎಲ್ಲ ವಿದ್ಯಾರ್ಥಿಗಳಿಗೆ ಪ್ರವೇಶ ಶುಲ್ಕದಲ್ಲಿ ರಿಯಾಯಿತಿ ನೀಡಲಾಗುವುದು. ಅಲ್ಲದೆ, ಮಣಿಪಾಲ ಹೆಲ್ತ್​ ಕಾರ್ಡ್​ನಲ್ಲೂ ಸಹ 50 ಸಾವಿರ ರೂ.ವರೆಗೆ ರಿಯಾಯಿತಿ ಕೊಡುವ ವ್ಯವಸ್ಥೆ ಮಾಡಲಾಗುವುದು. ಗ್ರಾಮೀಣ ಭಾಗದಲ್ಲಿರುವ ಹೆಣ್ಣು ಮಕ್ಕಳು ಶಿಕ್ಷಣದ ಮೂಲಕ ಮುಖ್ಯವಾಹಿನಿಗೆ ಬಂದಾಗ ಮಾತ್ರ ದೇಶ ಸಂಪೂರ್ಣ ಅಭಿವೃದ್ಧಿಯಾಗಲು ಸಾಧ್ಯ ಎಂದರು.

ಅಂಬಲಪಾಡಿ ದೇವಳದ ಧರ್ಮದರ್ಶಿ ಡಾ. ನಿ.ಬೀ. ವಿಜಯ ಬಲ್ಲಾಳ ಶುಭಾಶಂಸನೆ ಗೈದರು.

Vidya Poshak 3
ಒಎನ್​ಜಿಸಿ ಮುಂಬೈನ ನಿವೃತ್ತ ಸಿಜಿಎಂ ಬನ್ನಾಡಿ ನಾರಾಯಣ ಆಚಾರ್​, ಆದರ್ಶ ಆಸ್ಪತ್ರೆಯ ಡಾ. ಜಿ.ಎಸ್​. ಚಂದ್ರಶೇಖರ, ಕುಂದಾಪುರ ಶಾಸಕ ಕಿರಣಕುಮಾರ್​ ಕೊಡ್ಗಿ, ಬೈಂದೂರು ಶಾಸಕ ಗುರುರಾಜ ಗಂಟಿಹೊಳೆ, ಕಾಪು ಶಾಸಕ ಗುರ್ಮೆ ಸುರೇಶ ಶೆಟ್ಟಿ, ಮಂಗಳೂರಿನ ಡಾ. ಜೆ.ಎನ್​. ಭಟ್​, ಉಡುಪಿಯ ಡಾ. ಪಿ.ಎಸ್​. ಗುರುಮೂರ್ತಿ, ಪಿ.ಸುರೇಶ ನಾಯಕ, ಹರಿಯಪ್ಪ ಕೋಟ್ಯಾನ್​, ಡಾ. ಎಂ.ಆರ್​. ಹೆಗಡೆ, ಯೋಗೀಶ ಚಂದ್ರಾಧರ, ಉದ್ಯಮಿಗಳಾದ ಯು.ವಿಶ್ವನಾಥ ಶೆಣೈ,ವಿ.ಜಿ. ಶೆಟ್ಟಿ, ಆರ್ಥಿಕ ತಜ್ಞ ರಾಮ ಕೆ. ಶಿರೂರು, ಪಿ.ಸದಾನಂದ ಶೆಣೈ, ಲಕ್ಷ್ಮಣ ಬಿ. ಅಮೀನ್​, ಸಂತೋಷ ಎಂ. ಶೆಟ್ಟಿ, ಸಂಸ್ಥೆಯ ಅಧ್ಯಕ್ಷ ಎಂ.ಗಂಗಾಧರ ರಾವ್​ ಉಪಸ್ಥಿತರಿದ್ದರು.

ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಸಾಧನೆ ಕುರಿತು ಹುಬ್ಬಳ್ಳಿ ಮೈಲೈಫ್​ನ ಸಂಸ್ಥಾಪಕ ಪ್ರವೀಣ ವಿ. ಗುಡಿ ಪ್ರೇರಣಾತ್ಮಕ ಭಾಷಣ ಮಾಡಿದರು. ಯು.ಎಸ್​. ರಾಜಗೋಪಾಲ ಆಚಾರ್ಯರು ಪ್ರತಿಜ್ಞಾ ವಾಕ್ಯ ಬೋಧಿಸಿದರು. ಶ್ರೀಗಳಿಗೆ ಕಾರ್ಯಕಾರಿ ಸಮಿತಿಯ ಹಿರಿಯ ಸದಸ್ಯ ಭುವನಪ್ರಸಾದ ಹೆಗ್ಡೆ ಫಲ ಸಮರ್ಪಿಸಿದರು.

ವಿದ್ಯಾಪೋಷಕ್​ ವಿದ್ಯಾರ್ಥಿ ನಾಗೇಂದ್ರ ಆರ್​. ಭಟ್​ ಪ್ರಾರ್ಥಿಸಿದರು. ಸಂಸ್ಥೆಯ ಉಪಾಧ್ಯಕ್ಷ ವಿ.ಜಿ. ಶೆಟ್ಟಿ ಸ್ವಾಗತಿಸಿದರು. ಸಂಸ್ಥೆಯ ಕಾರ್ಯದರ್ಶಿ ಮುರಳಿ ಕಡೆಕಾರ್​ ಪ್ರಾಸ್ತಾವಿಕವಾಗಿ ಮಾತನಾಡಿ, ದಾನಿಗಳ ಸಹಕಾರದಿಂದ ಸಂಸ್ಥೆ ಬೆಳೆದು ಬಂದ ರೀತಿ ವಿವರಿಸಿದರು. ಸಂಸ್ಥೆಯ ಸಹ ಕಾರ್ಯದರ್ಶಿ ನಾರಾಯಣ ಎಂ. ಹೆಗಡೆ ಕಾರ್ಯಕ್ರಮ ನಿರೂಪಿಸಿದರು. ಗಣೇಶ ಎಳ್ಳೂರು ಹಾಗೂ ಪ್ರೊ. ಕೆ.ಸದಾಶಿವ ರಾವ್​ ವಂದಿಸಿದರು.

ವಿದ್ಯಾಪೋಷಕ್​ನ 1,234 ವಿದ್ಯಾರ್ಥಿಗಳಿಗೆ ನೆರವು

Vidya Poshak 2
ಮಧ್ಯಾಹ್ನ ನಡೆದ ಸಮಾರೋಪ ಸಮಾರಂಭದಲ್ಲಿ ವಿದ್ಯಾಪೋಷಕ್​ ವಿದ್ಯಾರ್ಥಿಗಳು ಹಾಗೂ ಯಕ್ಷಗಾನ ಕಲಾವಿದರ ಮಕ್ಕಳು ಸೇರಿ ಒಟ್ಟು 1,234 ವಿದ್ಯಾರ್ಥಿಗಳಿಗೆ 1,40,73,675 ರೂ. ಸಹಾಯಧನ, 23 ಮನೆಗಳಿಗೆ 1 ಕೋಟಿ 40 ಲಕ್ಷ ರೂ. ಹಾಗೂ 10 ವಿದ್ಯಾರ್ಥಿಗಳಿಗೆ ಲ್ಯಾಪ್​ಟಾಪ್​ ವಿತರಿಸಲಾಯಿತು. ಪುತ್ತಿಗೆ ಕಿರಿಯ ಯತಿ ಸುಶ್ರೀಂದ್ರ ತೀರ್ಥ ಶ್ರೀಪಾದರು ಅನುಗ್ರಹ ಸಂದೇಶ ನೀಡಿದರು. ಗಾಂಧಿ ಆಸ್ಪತ್ರೆಯ ಆಡಳಿತ ನಿರ್ದೇಶಕ ಡಾ. ಹರಿಶ್ಚಂದ್ರ, ಡಿಆರ್​ಎಂ ಇನ್​ಫೋಸಿಸ್​ ಮಂಗಳೂರಿನ ಉಪಾಧ್ಯಕ್ಷ ವಾಸುದೇವ ಕಾಮತ, ಶ್ರೀಪತಿ ಭಟ್​, ಆನಂದ ಪಿ.ಸುವರ್ಣ, ಅರುಣಕುಮಾರ್​ ಶೆಟ್ಟಿ, ಅಲೆವೂರು ರಘುಪತಿ ಭಟ್​, ಆನಂದ ಕುಂದರ್​, ಉದಯಕುಮಾರ್​ ಶೆಟ್ಟಿ ಮುನಿಯಾಲು, ಹರೀಶ್​ ಆರ್​., ಸುಗ್ಗಿ ಸುಧಾಕರ ಶೆಟ್ಟಿ, ಗಿರೀಶ ಭಟ್​, ಅಶೋಕ ನಾಯಕ್​ ಇತರರು ಉಪಸ್ಥಿತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net