

ಬೆಳ್ತಂಗಡಿ: ವಿದುಷಿ ವಿದ್ಯಾಲಕ್ಷ್ಮೀ ಚಾರಿಟೆಬಲ್ ಟ್ರಸ್ಟ್ ವತಿಯಿಂದ ವಿದ್ಯಾರ್ಥಿವೇತನ ವಿತರಣಾ ಸಮಾರಂಭ ಅಳದಂಗಡಿ ಸ್ವರಾಜ್ ಸಭಾಭವನದಲ್ಲಿ ನಡೆಯಿತು.
ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಇಂಜಿನಿಯರಿಂಗ್, ಡಿಪ್ಲೊಮಾ ಪ್ರವೇಶ ಪಡೆದ ಬೆಳ್ತಂಗಡಿ ತಾಲೂಕು ಮೂಲದ ವಿದ್ಯಾರ್ಥಿಗಳಿಗೆ 6 ಲಕ್ಷದ 15 ಸಾವಿರ ವಿತರಿಸಿದರು. ವಿದ್ಯಾಲಕ್ಷ್ಮೀ ಅವರ ತಂದೆ ಶ್ರೀಧರ್ ಪೂಜಾರಿ, ಸತ್ಯದೇವತೆ ಆಡಳಿತದಾರ ಶಿವಪ್ರಸಾದ್ ಅಜಿಲ, ವೈದ್ಯರಾದ ಡಾ.ಎನ್.ಎಂ.ತುಳುಪುಲೆ, ಡಾ.ಹರಿಪ್ರಸಾದ್ ಸುವರ್ಣ, ಪ್ರಗತಿಪರ ಕೃಷಿಕ ಎಂ.ಗಂಗಾಧರ್ ಮಿತ್ತಮಾರ್, ಸುಲ್ಕೇರಿ ಮೊಗ್ರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಅಧ್ಯಕ್ಷ ಸುಧೀರ್ ಆರ್.ಸುವರ್ಣ, ಸುಜಿತ್ ಮರೋಳಿ, ರೋಷನ್ ಸಾಲ್ಯಾನ್, ಶಿವಪ್ರಸಾದ್ ಉಪಸ್ಥಿತರಿದ್ದರು. ಆಮಂತ್ರಣ ಪ್ರತಿಷ್ಠಾನದ ವಿಜಯ ಕುಮಾರ್ ಜೈನ್ ಕಾರ್ಯಕ್ರಮ ನಿರೂಪಿಸಿದರು.