ರೋಟರಿ ಕ್ಲಬ್​ನಿಂದ ವಿದ್ಯಾರ್ಥಿವೇತನ ವಿತರಣೆ

Bel_Rotary
Published on

ಬೆಳ್ತಂಗಡಿ: ಬೆಳ್ತಂಗಡಿ ರೋಟರಿ ಕ್ಲಬ್​, ಬೆಂಗಳೂರು ಇಂದಿರಾನಗರ ರೋಟರಿ ಕ್ಲಬ್​ ಮತ್ತು ರೋಟರಿ ಸೇವಾ ಟ್ರಸ್ಟ್​ ಸಹಯೋಗದೊಂದಿಗೆ ತಾಲೂಕಿನ 258 ವಿದ್ಯಾರ್ಥಿಗಳಿಗೆ 10,32,000 ರೂ.ಮೊತ್ತದ ವಿದ್ಯಾರ್ಥಿವೇತನ ವಿತರಣಾ ಸಮಾರಂಭ ಬೆಳ್ತ ಂಗಡಿಯ ರೋಟರಿ ಸಭಾಭವನದಲ್ಲಿ ಶನಿವಾರ ನಡೆಯಿತು.

ತಾಲೂಕಿನ ಸರ್ಕಾರಿ ಪದವಿಪೂರ್ವ ಕಾಲೇಜುಗಳಲ್ಲಿ ಕಲಿಯುತ್ತಿರುವ ಶೇ.85ಕ್ಕಿಂತ ಅಧಿಕ ಅಂಕ ಗಳಿಸಿರುವ, ಆರ್ಥಿಕವಾಗಿ ಹಿಂದುಳಿದಿರುವ ಪ್ರತಿಭಾವಂತ ವಿದ್ಯಾರ್ಥಿ&ವಿದ್ಯಾರ್ಥಿನಿಯರು ಇದರ ಪ್ರಯೋಜನ ಪಡೆದುಕೊಂಡರು.

ಬೆಳ್ತಂಗಡಿ ರೋಟರಿ ಕ್ಲಬ್​ ಅಧ್ಯಕ್ಷ ಪೂರನ್​ ವರ್ಮ ಅಧ್ಯಕ್ಷತೆ ವಹಿಸಿದ್ದರು. ರೋಟರಿ ಕ್ಲಬ್​ ಇಂದಿರಾನಗರ ಅಧ್ಯೆ ಸುಪ್ರಿಯಾ ಖಾಂದಾರಿ, ಕಾರ್ಯದರ್ಶಿ ನರಸಿಂಹನ್​ ಕಣ್ಣನ್​, ರೋಟರಿ ಜಿಲ್ಲಾ ಕಾರ್ಯದರ್ಶಿ ರಿತೇಶ್​ ಬಾಳಿಗ, ಸಹಾಯಕ ಗವರ್ನರ್​ ಮಹಮ್ಮದ್​ ವಳವೂರು, ಮಾಜಿ ಕಾರ್ಯದರ್ಶಿ ಸುರೇಶ್​, ಇಂದಿರಾ ನಗರ ರೋಟರಿ ಕ್ಲಬ್​ ವಿದ್ಯಾರ್ಥಿ ವೇತನ ಸಂಚಾಲಕ ರಾಜ ಕೌರ, ಜಗದೀಶ್​ ಮುಗುಳಿ, ಶ್ರೀಧರ ಪಡುವೆಟನ್ನಾಯ, ರೋಟರಿ ವಲಯ ಸೇನಾನಿ ಮನೋರಮ ಭಟ್​, ಬೆಳ್ತಂಗಡಿ ರೋಟರಿ ಕ್ಲಬ್​ ಕಾರ್ಯದರ್ಶಿ ಸಂದೇಶ್​ ಕುಮಾರ್​ ರಾವ್​, ಬೆಂಗಳೂರು ಇಂದಿರಾ ನಗರ ರೋಟರಿ ಕ್ಲಬ್​ ಮತ್ತು ಬೆಳ್ತಂಗಡಿ ರೋಟರಿ ಕ್ಲಬ್​ ಪದಾಧಿಕಾರಿಗಳು, ಸದಸ್ಯರು, ವಿದ್ಯಾರ್ಥಿಗಳು, ಉಪನ್ಯಾಸಕರು ಉಪಸ್ಥಿತರಿದ್ದರು.

ಬೆಳ್ತಂಗಡಿ ರೋಟರಿ ಕ್ಲಬ್​ ಮಾಜಿ ಅಧ್ಯಕ್ಷ ವಕೀಲ ಬಿ.ಕೆ.ಧನಂಜಯ ರಾವ್​ ಪ್ರಸ್ತಾವನೆಯೊಂದಿಗೆ ಸ್ವಾಗತಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net