ಅಲಬನೂರಿನ ಸೃಜನ್‌ಗೆ ಸ್ಕಾಲರ್‌ಶಿಪ್ ಪ್ರಶಸ್ತಿ

Alabanur Srujan
ಸೃಜನ್ ಹಿರೇಮಠ
Published on

ಸಿಂಧನೂರು: ನವದೆಹಲಿಯ ಸೆಂಟ್ರಲ್ ಕೌನ್ಸಿಲ್ ಫಾರ್ ರಿಸರ್ಚ್ ಇನ್ ಹೋಮಿಯೋಪಥಿ ಸ್ಥಾಪಿಸಿದ ಪ್ರತಿಷ್ಠಿತ ಅಲ್ಪಾವಧಿಯ ಸ್ಟೂಡೆಂಟ್‌ಶಿಪ್ ಇನ್ ಹೋಮಿಯೋಪಥಿ ಸ್ಕಾಲರ್‌ಶಿಪ್ ಪ್ರಶಸ್ತಿಗೆ ತಾಲೂಕಿನ ಅಲಬನೂರು ಗ್ರಾಮದ ಸೃಜನ್ ಹಿರೇಮಠ ಆಯ್ಕೆಯಾಗಿದ್ದಾರೆ.

ಸೃಜನ್ ಅವರು ಬೆಳಗಾವಿಯ ಎ.ಎಂ.ಶೇಖ್ ಹೋಮಿಯೋಪಥಿ ವೈದ್ಯಕೀಯ ಕಾಲೇಜ್ ವಿದ್ಯಾರ್ಥಿಯಾಗಿದ್ದು, ‘40-70 ವರ್ಷ ವಯಸ್ಸಿನ ಟೈಪ್-ಎಲ್ ಮಧುಮೇಹಿಗಳಲ್ಲಿ ಹೆಪ್ಪುಗಟ್ಟಿದ ಭುಜದಲ್ಲಿ ನೋವಿನ ತೀವ್ರತೆ ಮೇಲೆ ಪೂರ್ವನಿರ್ಧರಿತ ಹೋಮಿಯೋಪಥಿ ಔಷಧಗಳ ಪರಿಣಾಮ’ ಎಂಬ ಶೀರ್ಷಿಕೆಯ ವೀಕ್ಷಣಾ ಅಧ್ಯಯನಕ್ಕಾಗಿ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಇವರಿಗೆ ಡಾ.ಅಲೋಕ್ ಕಟ್ಕೋಲ್ ಮಾರ್ಗದರ್ಶನ ನೀಡಿದ್ದರು. ಇತ್ತೀಚೆಗೆ ಗುಜರಾತ್‌ನ ಗಾಂಧಿನಗರದಲ್ಲಿ ಏರ್ಪಡಿಸಿದ್ದ ವಿಶ್ವ ಹೋಮಿಯೋಪಥಿ ದಿನಾಚರಣೆಯಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net