

ಮೈಸೂರು: ವೇದಶಾಸ್ತ್ರ ಪೋಷಿಣೀ ಸಭಾ ವತಿಯಿಂದ ಬುಧವಾರ ನಗರದ ನಾದಬ್ರಹ್ಮ ಸಂಗೀತ ಸಭಾದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ವಿದ್ವಾಂಸರನ್ನು ಸನ್ಮಾನಿಸಿ ಗೌರವಿಸಲಾಯಿತು.
ಕೃಷ್ಣಯಜುರ್ವೇದ ವಿದ್ವಾಂಸರಾದ ಪುತ್ತೂರಿನ ಪಳ್ಳತ್ತಡ್ಕ ಶಂಕರನಾರಾಯಣ ಭಟ್ಟ, ಅಲಂಕಾರಶಾಸ್ತ್ರ ವಿದ್ವಾಂಸರಾ ಬೆಂಗಳೂರಿನ ಕೆ.ರಾಜಗೋಪಾಲಾಚಾರ್ಯ, ವ್ಯಾಕರಣ-ಅಲಂಕಾರ-ಅದ್ವೈತ ವೇದಾಂತಶಾಸ್ತ್ರ ವಿದ್ವಾಂಸರಾದ ಶೃಂಗೇರಿಯ ಜಿ.ಮಹಾಬಲೇಶ್ವರ ಭಟ್ಟ ಹಾಗೂ ಧರ್ಮಶಾಸ್ತ್ರ ಮತ್ತು ಅಲಂಕಾರಶಾಸ್ತ್ರ ವಿದುಷಿ ಮೈಸೂರಿನ ದಿನಮಣಿ ಶ್ರೀನಿವಾಸಮೂರ್ತಿ ಅವರನ್ನು ಸನ್ಮಾನಿಸಲಾಯಿತು.
ನಿವೃತ್ತ ಐಎಎಸ್ ಅಧಿಕಾರಿ ಎ.ರಾಮಸ್ವಾಮಿ, ವೇದಶಾಸ್ತ್ರ ಪೋಷಿಣೀ ಸಭಾದ ಅಧ್ಯಕ್ಷ ವಿದ್ವಾನ್ ಪ್ರೊ.ಬಿ.ಎನ್.ನಾಗರಾಜ ಭಟ್ಟ, ಗೌರವ ಕಾರ್ಯದರ್ಶಿ ವಿದ್ವಾನ್ ಎ.ಎಂ. ಚಂದ್ರಶೇಖರ್ ಇತರರಿದ್ದರು.