ಶಾಂತಾರಾಮ ಸಿದ್ದಿ ಅಧ್ಯಕ್ಷತೆಯಲ್ಲಿ ಪರಿಶಿಷ್ಟ ಪಂಗಡದವರ ಸಭೆ

21 ylp 06 (sabhe)
Published on

ಯಲ್ಲಾಪುರ: ಪರಿಶಿಷ್ಟ ಪಂಗಡದವರ ಸಮಸ್ಯೆಗಳು ಹಾಗೂ ಅವರಿಗೆ ಸರ್ಕಾರದಿಂದ ಸಿಗುವ ಸೌಲಭ್ಯಗಳ ಕುರಿತು ವಿಧಾನ ಪರಿಷತ್ ಸದಸ್ಯ ಶಾಂತಾರಾಮ ಸಿದ್ದಿ ಅವರ ಅಧ್ಯಕ್ಷತೆಯಲ್ಲಿ ಪಟ್ಟಣದ ತಾಪಂ ಸಭಾಭವನದಲ್ಲಿ ಸಭೆ ನಡೆಯಿತು.

ಸಮಸ್ಯೆಗಳ ಬಗ್ಗೆ ಗಮನಕ್ಕೆ ತರಲು ಕರೆ ಮಾಡಿದರೆ ಅಧಿಕಾರಿಗಳು ಕರೆ ಸ್ವೀಕರಿಸುತ್ತಿಲ್ಲ ಎಂದು ಮನ್ವೆಲ್ ಸಿದ್ದಿ ದೂರಿದರು. ‘ನಿಮಗೆ 32 ಬಾರಿ ಕರೆ ಮಾಡಿದರೂ ಸ್ವೀಕರಿಸಿಲ್ಲ’ ಎಂದು ಸಭೆಯಲ್ಲಿ ಉಪಸ್ಥಿತರಿದ್ದ ಜಿಲ್ಲಾ ಸಮಾಜ ಕಲ್ಯಾಣ ಅಧಿಕಾರಿ ಉಮೇಶ ಅವರನ್ನು ತರಾಟೆಗೆ ತೆಗೆದುಕೊಂಡರು.

ಕರೊನಾದ ನಂತರ ಕೆಳಾಸೆಗೆ ಬಸ್ ಓಡಾಟ ನಿಂತಿದೆ. ವಿದ್ಯಾರ್ಥಿಗಳು ನಿತ್ಯ ಶಾಲೆಗೆ 6 ಕಿಮೀ ನಡೆದು ಬರಬೇಕು. ರಸ್ತೆಯೂ ಹದಗೆಟ್ಟಿದ್ದು, ದುರಸ್ತಿಗೆ ಕ್ರಮಕೈಗೊಂಡಿಲ್ಲ ಎಂದು ಕೆಳಾಸೆ ಭಾಗದ ಸಿದ್ದಿ ಸಮುದಾಯದವರು ಆಕ್ರೋಶ ವ್ಯಕ್ತಪಡಿಸಿದರು.

ಎಸ್‌ಟಿ ಸಮುದಾಯದವರಿಗಾಗಿ ಸರ್ಕಾರದಿಂದ ನೀಡುವ ಸಮುದಾಯ ಭವನ ಹೆಸರಿಗೆ ಮಾತ್ರ ಮಂಜೂರಿಯಾಗಿದ್ದು, ಸಮುದಾಯದವರ ಬಳಕೆಗೆ ಸಿಗುತ್ತಿಲ್ಲ ಎಂದು ಕಿರವತ್ತಿಯ ಕಲ್ಲಪ್ಪ ಹೋಳಿ ದೂರಿದರು.

ಸಭೆಯಲ್ಲಿ ಅರಣ್ಯ ಅತಿಕ್ರಮಣ, ವಸತಿ ಯೋಜನೆ ಮನೆ ಮಂಜೂರಾತಿ ಸೇರಿದಂತೆ ವಿವಿಧ ಸಮಸ್ಯೆಗಳ ಕುರಿತು ಚರ್ಚೆ ನಡೆಯಿತು.

ತಾಪಂ ಇಒ ರಾಜೇಶ ಧನವಾಡಕರ್, ಅರಣ್ಯ, ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net