

ಚಿತ್ರದುರ್ಗ: ಇತರೆ ಸಮುದಾಯಗಳಿಗೆ ಅನ್ಯಾಯವಾಗದಂತೆ,ಮಡಿವಾಳ ಸಮಾಜವನ್ನು ಪರಿಶಿಷ್ಟ ಜಾತಿಗೆ ಸೇರಿಸಲು ಸಂವಿಧಾನದ ಚೌಕಟ್ಟಿನಲ್ಲಿ ಪರಿಶೀಲಿಸುವುದಾಗಿ ಮುಖ್ಯಮಂತ್ರಿಬಸವರಾಜ ಬೊಮ್ಮಾಯಿ ಹೇಳಿದರು. ಮಡಿವಾಳ ಮಠದ 14ನೇ ವಾರ್ಷಿಕೋತ್ಸವ,ಪೀಠಾಧೀಪತಿ ಡಾ.ಶ್ರೀ ಬಸವ ಮಾಚಿದೇವ ಸ್ವಾಮೀಜಿ ಅವರ 24ನೇ ಜಂಗಮದೀಕ್ಷೆ ಹಾಗೂ 39ನೇ ಜನ್ಮದಿನದ ಅಂಗವಾಗಿ ನಗರದ ಶ್ರೀ ಮಡಿವಾಳ ಮಾಚಿದೇವ ಗುರುಪೀಠದಲ್ಲಿ ಆಯೋಜಿಸಿರುವ 2 ದಿನಗಳ ಕಾಯಕ ಜನೋತ್ಸವಕ್ಕೆ ಗುರುವಾರ ಚಾಲನೆ ನೀಡಿ ಮಾತನಾಡಿದರು.
ಪರಿಶಿಷ್ಟ ಜಾತಿಗೆ ಸಮುದಾಯವನ್ನು ಸೇರಿಸ ಬೇಕೆಂಬ ಕಳಕಳಿ ನನಗಿದೆ. ಬೇಡಿಕೆಯನ್ನು ಕಾನೂನಾತ್ಮಕವಾಗಿ ಪರಿಶೀಲಿಸಿ ನ್ಯಾಯ ಸಮ್ಮತ ತೀರ್ಮಾನ ತೆಗೆದುಕೊಳ್ಳಲಾಗುವುದು. ಅನ್ನಪೂರ್ಣಮ್ಮ ಸಮಿತಿಯ ಕುಲಶಾಸ್ತ್ರ ಅಧ್ಯಯನದ ವರದಿ ಸಲ್ಲಿಕೆಯಾಗಿ 8 ವರ್ಷ ಗಳಾದರೂ ನೀವ್ಯಾರು ಕೇಳಲಿಲ್ಲವೆಂದು ಗರಂ ಆದ ಸಿಎಂ,ನಿಮ್ಮಿಂದ ಸನ್ಮಾನ ಮಾಡಿಸಿಕೊಂಡವರು ಬೇಡಿಕೆಗಳಿಗೆ ಸ್ಪಂದಿಸಿಲ್ಲವೆಂದು ಕಾಂ ಗ್ರೆಸ್ ಧುರೀಣರನ್ನು ಕೆಣಕಿದರು.
ಬಿ.ಎಸ್.ಯಡಿಯೂರಪ್ಪ ಅವರು ಸಮಿತಿ ನೇಮಿಸಿದರು. ಸಮುದಾಯವನ್ನು ಗುರುತಿಸಿ,ರಾಜಕೀಯ ಸ್ಥಾನಮಾನ ಕಲ್ಪಿಸಿದರು. ಹಲವು ಬೇಡಿಕೆಗಳಿಗೆ ಸ್ಪಂದಿಸಿದ್ದರು. ರಾಜ್ಯದ ಸಣ್ಣ,ಸಣ್ಣ ಸಮುದಾಯಗಳಿಗೆ ಸಾಮಾಜಿಕ ನ್ಯಾಯ ನೀಡುವ ಕುರಿತು ಯಡಿಯೂರಪ್ಪ ಅವರು ನನ್ನೊಂದಿಗೆ ಚರ್ಚಿಸಿದ್ದಾರೆ. ಬಿಜೆಪಿ ಹೊರತು ಪಡಿಸಿ ಇನ್ಯಾವುದೇ ಪಕ್ಷಗಳಿಂದ ಸಾಮಾಜಿಕ ನ್ಯಾಯ ಕೊಡಲಾಗದು.
ಈ ಬಾರಿಯ ಬಜೆಟ್‌ನಲ್ಲಿ ರಾಜ್ಯಮಡಿವಾಳ ಮಾಚಿದೇವ ಅಭಿವೃದ್ಧಿ ನಿಗಮಕ್ಕೆ ಹೆಚ್ಚಿನ ಅನುದಾನ,ರಾಜ್ಯದೆಲ್ಲ ನಗರ,ಪಟ್ಟಣಗಳ ಲ್ಲಿ ರುವ ದೋಬಿಘಾಟ್‌ಗಳಲ್ಲಿ ಆಧುನಿಕ ಯಂತ್ರೋಪಕರಣಗಳ ಅಳವಡಿಕೆಗೆ ವಿಶೇಷ ಅನುದಾನವನ್ನು ಬಜೆಟ್‌ನಲ್ಲಿ ಇಡಲಾಗುವುದು. ಬಹುರಾಷ್ಟ್ರೀಯ ಕಂಪನಿಗಳು ಈಗ ಲಾಂಡ್ರಿ ಉದ್ಯಮಕ್ಕೆ ಕಾಲಿಟ್ಟಿವೆ.
ಯಂತ್ರೋಪಕರಣಗಳ ಮೂಲಕ ವೃತ್ತಿಯಲ್ಲಿ ಸುಧಾರಣೆ ಕಂಡುಕೊಳ್ಳ ಬೇಕು. ತಮ್ಮ ಮಕ್ಕಳು ಕೂಡ ಐಎಎಸ್,ಐಪಿಎಸ್ ಅಧಿಕಾರಿ ಗಳಾಗಬೇಕು. ಮೆಡಿಕಲ್,ಇಂಜಿನಿಯರಿಂಗ್ ಓದ ಬೇಕು,ಈ ನಿಟ್ಟಿನಲ್ಲಿ ಶ್ರೀಗಳು ಸಮಾಜದಲ್ಲಿ ಜಾಗೃತಿ ಮೂಡಿಸಬೇಕು. ಕಾಯಕ ಯೋಜನೆಯ ಪ್ರಯೋಜನ ಪಡೆದುಕೊಳ್ಳ ಬೇಕೆಂದರು
ಮಾಚಿದೇವ ಶ್ರೀ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು,ಪ್ರಶಸ್ತಿಯಿಂದಾಗಿ ಸಮಾಜಮುಖಿ ಕೆಲಸಗಳಿಗೆ ಹೆಚ್ಚಿನ ಶಕ್ತಿ ಸಿಕ್ಕಿದೆ. ನಾನು ಡಿಸಿಎಂ,ಸಿಎಂ ಆಗಿದ್ದಾಗ ಶಕ್ತಿ ಮೀರಿ ಹಲವು ಸಮುದಾಯಗಳ ಅಭಿವೃದ್ಧಿಗೆ ಶ್ರಮಿಸಿದ್ದೇನೆ.
ರಾಜ್ಯದ ವಿವಿಧ ಮಠಗಳಿಗೆ ಸಾವಿರಾರು ಕೋಟಿ ರೂ.ಅನುದಾನ ನೀಡಿದ್ದೇನೆ. ಎಲ್ಲ ಸಮುದಾಯಗಳ ಏಳಿಗೆಗೆ ದುಡಿಯಲು ಭ ಗವಂತ ನನಗೆ ಇನ್ನಷ್ಟು ಶಕ್ತಿ ನೀಡಲಿ. ರಾಜಕೀಯ ಸ್ಥಾನಮಾನ ಅಪೇಕ್ಷಿಸದೆ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆ. ಅಧಿಕಾರ ತ್ಯಜಿಸಿದ ದಿನದಿಂದ ಈವರೆಗೆ ಒಂದು ದಿನವೂ ಮನೆಯಲ್ಲಿರದೆ ಪಕ್ಷದ ಬಲವರ್ಧನೆಗಾಗಿ ಶ್ರಮಿಸುತ್ತಿದ್ದೇನೆ.
ಮಡಿವಾಳ ಸಮುದಾಯವನ್ನು ಪರಿಶಿಷ್ಟ ಜಾತಿಗೆ ಸೇರಿಸಲು ವಿಶೇಷ ಗಮನ ಹರಿಸಬೇಕು,ಅಭಿವೃದ್ಧಿ ನಿಗಮದ ಅನುದಾನ ಹೆಚ್ಚಿಸ ಬೇಕು ಹಾಗೂ ರಾಜಕೀಯ ಪ್ರಾತಿನಿಧ್ಯ ಕೊಡ ಬೇಕೆಂದ ಅವರು,ಮುಖ್ಯಮಂತ್ರಿ ಬೇಡಿಕೆಗಳನ್ನು ಈಡೇರಿಸುತ್ತಾರೆಂಬ ವಿಶ್ವಾಸ ನನಗೆ ಇದೆ.
ಪ್ರಶಸ್ತಿ ನೀಡಿ ಗೌರವಿಸಿರುವುದಕ್ಕಾಗಿ ನನ್ನ ಬದುಕಿನ ಕೊನೆ ಉಸಿರು ಇರುವವರೆಗೂ ನಾನು ಋಣಿಯಾಗಿರುತ್ತೇನೆ. ಮೊದಲಿಂದಲೂ ಮಡಿವಾಳ ಸಮಾಜ ಬಿಜೆಪಿ ಜತೆ ಇದೆ. ಬರುವಂಥ ಚುನಾವಣೆಯಲ್ಲೂ ಬಿಜೆಪಿ ಬೆಂಬಲಿಸುವ ಮೂಲಕ ತಮ್ಮ ಸೇವೆಗೆ ಅವಕಾಶ ಮಾಡಿ ಕೊಡಬೇಕೆಂದರು.
ಮಡಿವಾಳ ಸಮುದಾಯವನ್ನು ಪರಿಶಿಷ್ಟ ಜಾತಿ ಪಟ್ಟಿಗೆ ಸೇರಿಸ ಬೇಕೆಂದು ಶ್ರೀ ಡಾ.ಬಸವ ಮಡಿವಾಳ ಮಾಚಿದೇವ ಸ್ವಾಮೀಜಿ ಮ ನವಿ ಮಾಡಿದರು. ಅಭಿವೃದ್ಧಿ ನಿಗಮದ ಅನುದಾನವನ್ನು 500 ಕೋಟಿ ರೂ.ಗೆ ಹೆಚ್ಚಿಸಬೇಕು. ಕುಲಕಸುಬಿನವರಿಗಾಗಿ ಉಚಿತ ವಿ ದ್ಯುತ್ ಕೊಡ ಬೇಕು. ಮಠಕ್ಕೆ ಮಂಜೂರಾದ ಅನುದಾನವನ್ನು ಹಿಂಪಡೆಯಿರಿ ಆದರೆ ಸಮುದಾಯದ ಬೇಡಿಕೆಗಳನ್ನು ಈಡೇರಿಸಿ ಎಂದು ಮನವಿ ಮಾಡಿದರು.
ಯಡಿಯೂರಪ್ಪ ಅವರು ನಮ್ಮ ಈ ಎಲ್ಲ ಬೆಳವಣಿಗೆಗೆ ಕಾರಣರಾಗಿದ್ದಾರೆ. ಅವರು ಕೊಟ್ಟಿದ್ದ 50 ಲಕ್ಷ ರೂ.ಅನುದಾನ ಶ್ರೀ ಮಠದ ಅಭಿವೃದ್ಧಿಗೆ ನಾಂದಿಯಾಯಿತು. ಪ್ರಶಸ್ತಿ ಪ್ರದಾನ ಮಾಡಿ ಅವರ ಋಣ ತೀರಿಸಲು ಮುಂದಾಗಿದ್ದೇವೆ ಎಂದರು.
ಮೈಸೂರು ಪೇಂಟ್ಸ್ ಮತ್ತು ವಾರ್ನಿಷ್ ಅಧ್ಯಕ್ಷ ರಘುಕೌಟಿಲ್ಯ,ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ,ಶ್ರೀ ನಿರಂಜನಾನಂ ದಪುರಿ ಸ್ವಾಮಿಜಿ,ಡಾ.ಶ್ರೀಶಾಂತವೀರ ಸ್ವಾಮೀಜಿ ಇತರರು ಮಾತನಾಡಿದರು. ಮಾಚಿದೇವ ಮಹಾದ್ವಾರವನ್ನು ಸಿಎಂ ಉದ್ಘಾಟಿಸಿದರು. ಮಠದ ನೂತನ ಕಟ್ಟಡಕ್ಕೆ ಭೂಮಿ ನೆರವೇರಿಸಲಾಯಿತು. ಸಾಧಕರಿಗೆ ವಿವಿಧ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಯಿತು. ದಾನಿಗಳನ್ನು ಗೌರವಿಸಲಾಯಿತು.
ಶ್ರೀ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ,ಶ್ರೀ ಹಡಪದ ಅಪ್ಪಣ್ಣ ಸ್ವಾಮೀಜಿ,ಶ್ರೀ ಈಶ್ವರಾನಂದಪುರಿ ಸ್ವಾಮೀಜಿ,ಶ್ರೀ ಪುರುಷೋತ್ತ ಮಾ ನಂದಪುರಿ ಸ್ವಾಮೀಜಿ ಮತ್ತಿತರ ಮಠಾಧೀಶರು,ರಾಜ್ಯಖನಿಜ ನಿಗಮದ ಮಾಜಿ ಅಧ್ಯಕ್ಷ ಎಸ್.ಲಿಂಗಮೂರ್ತಿ,ಕರ್ನಾಟಕ ಮಾಚಿದೇವ ಅ ಭಿವೃದ್ಧಿ ನಿಗಮದ ಅಧ್ಯಕ್ಷ ಡಾ.ರಾಜು ತಲ್ಲೂರ, ಶಾಸಕ ರಾದ ಜಿ.ಎಚ್.ತಿಪ್ಪಾರೆಡ್ಡಿ,ಎಂ.ಚಂದ್ರಪ್ಪ.ಕೆ.ಪೂರ್ಣಿಮಾ ಶ್ರೀನಿವಾಸ್,ಅರುಣ್ ಪೂಜಾರ್,ಶ್ರೀ ಮಠದ ಕಾರ‌್ಯದರ್ಶಿ ಡಾ.ಸಂಗಮೇಶ ಕಲಹಾಳ,ಮಡಿವಾಳ ಸಮಾಜದ ಜಿಲ್ಲಾಧ್ಯಕ್ಷ ರಾಮಜ್ಜ ಮೊದಲಾದ ಸಮುದಾಯ ದ ಪ್ರಮುಖರು,ಗಣ್ಯರಿದ್ದರು.
(ಸಿಟಿಡಿ 5 ಕಾಯಕ ಜನೋತ್ಸವ ಬಿಎಸ್‌ವೈ)
ಚಿತ್ರದುರ್ಗದಲ್ಲಿ ಗುರುವಾರ ಏರ್ಪಡಿಸಿದ್ದ ಕಾಯಕ ಜನೋತ್ಸವದಲ್ಲಿ ಮಾಜಿ ಸಿಎಂ ಯಡಿಯೂರಪ್ಪ ಅವರಿಗೆ ಶ್ರೀ ಮಾಚಿದೇವ ಪ್ರ ಶಸ್ತಿಯನ್ನು ಪ್ರಧಾನ ಮಾಡಿ ಗೌರವಿಸಲಾಯಿತು. ಸಿಎಂ ಬಸವರಾಜ ಬೊಮ್ಮಾಯಿ,ಸಚಿವ ಗೋವಿಂದ ಕಾರಜೋಳ,ಶಾಸಕ ಜಿ.ಎಚ್.ತಿಪ್ಪಾರೆಡ್ಡಿ,ಶ್ರೀಬಸವ ಮಾಚಿದೇವ ಸ್ವಾಮೀಜಿ ಇತರರು ಇದ್ದರು.
------
(ಸಿಟಿಡಿ 5 ಕಾಯಕ ಜನೋತ್ಸವ ಸಿಎಂ)
ಚಿತ್ರದುರ್ಗದಲ್ಲಿ ಗುರುವಾರ ಕಾಯಕ ಜನೋತ್ಸವವನ್ನು ಸಿಎಂ ಬಸವರಾಜ ಬೊಮ್ಮಾಯಿ ಉದ್ಘಾಟಿಸಿದರು. ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ,ಸಚಿವ ಗೋವಿಂದ ಕಾರಜೋಳ,ಶಾಸಕ ಜಿ.ಎಚ್.ತಿಪ್ಪಾರೆಡ್ಡಿ,ಶ್ರೀಬಸವ ಮಾಚಿದೇವ ಸ್ವಾಮೀಜಿ ಮತ್ತಿತರರು ಇದ್ದರು.
----
--