ಪರಿಶಿಷ್ಟ ಪಂಗಡಕ್ಕೂ ಒಳ ಮೀಸಲು ಕಲ್ಪಿಸಿ

11 KAMPLI 01
ಕಂಪ್ಲಿಯ ಆದಿವಾಸಿ ಬುಡಕಟ್ಟು ಸಮುದಾಯಗಳ ಪ್ರಮುಖರು ತಹಸೀಲ್ದಾರ್ ಜೂಗಲ ಮಂಜುನಾಯಕಗೆ ಮನವಿ ಸಲ್ಲಿಸಿದರು. ಪ್ರಮುಖರಾದ ಎಚ್.ಪಿ.ಶಿಕಾರಿರಾಮು, ಜಿ.ಮಾಧವರಾವ್, ಎಸ್.ಜಾನಕಿ, ಎಂ.ಗಾಳಿಕುಮಾರ್, ಸಣ್ಣ ಹುಲುಗಪ್ಪ ಇತರರಿದ್ದರು.
Published on

ಕಂಪ್ಲಿ: ಪಾರಂಪರಿಕ ಅರಣ್ಯ ಹಕ್ಕು ಕಾಯ್ದೆ ಸಂರಕ್ಷಿಸಬೇಕು ಎಂಬುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ಆದಿವಾಸಿ ರಕ್ಷಣಾ ಪರಿಷತ್ ಪದಾಧಿಕಾರಿಗಳು ತಹಸೀಲ್ದಾರ್ ಜೂಗಲ ಮಂಜುನಾಯಕಗೆ ಸೋಮವಾರ ಮನವಿ ಸಲ್ಲಿಸಿದರು.

ಪರಿಷತ್ ರಾಜ್ಯ ಸಂಘಟನಾ ಕಾರ್ಯದರ್ಶಿ ಎಚ್.ಪಿ.ಶಿಕಾರಿರಾಮು ಮಾತನಾಡಿ, ಕರ್ನಾಟಕ ಆದಿವಾಸಿ ಅಭಿವೃದ್ಧಿ ನಿಗಮವನ್ನು ಕರ್ನಾಟಕ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅಲೆಮಾರಿ ಅಭಿವೃದ್ಧಿ ನಿಗಮದಿಂದ ಪ್ರತ್ಯೇಕಿಸಿ ಸ್ಥಾಪಿಸಬೇಕು. ಜೇನು ಕುರುಬ, ಕೊರಗ ಸಮುದಾಯಗಳನ್ನು ಅದಿಮ ಬುಡಕಟ್ಟಿಗೆ ಸೇರಿಸಿ ಅದಿಮ ಬುಡಕಟ್ಟಿನ ಸ್ಥಾನಮಾನ ಕಲ್ಪಿಸಲು ರಾಜ್ಯ ಸರ್ಕಾರ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಬೇಕು ಎಂದು ಆಗ್ರಹಿಸಿದರು.

ಪರಿಶಿಷ್ಟ ಜಾತಿಯ ಒಳ ಮೀಸಲಾತಿ ಆಯೋಗದಂತೆ ಪರಿಶಿಷ್ಟ ಪಂಗಡಕ್ಕೂ ಆಯೋಗ ರಚಿಸಿ ಸಮೀಕ್ಷೆ ಕೈಗೊಂಡು ಸೂಕ್ತ ಒಳ ಮೀಸಲಾತಿ ಕಲ್ಪಿಸಬೇಕು. ಸರ್ಕಾರದಿಂದಲೇ ಆ.9ರಂದು ವಿಶ್ವ ಆದಿವಾಸಿ ದಿನಾಚರಣೆ ಆಚರಿಸಬೇಕಿದೆ. ತಾಲೂಕು ಮಟ್ಟದಲ್ಲಿ ಆದಿವಾಸಿ ಭವನಗಳನ್ನು ನಿರ್ಮಿಸಬೇಕು ಎಂದು ಒತ್ತಾಯಿಸಿದರು.

ಪ್ರಮುಖರಾದ ಜಿ.ಮಾಧವರಾವ್, ಎಸ್.ಜಾನಕಿ, ಎಂ.ಗಾಳಿಕುಮಾರ್, ಸಣ್ಣ ಹುಲುಗಪ್ಪ, ಹರಿಕೃಷ್ಣ, ಜೆ.ಮಾರೆಪ್ಪ, ಆರ್.ಶಿವು, ಎಚ್.ಪಿ.ರಾಮು, ಎಚ್.ಪಿ.ಬಾಲಚಂದ್ರ, ಶಿಕಾರಿಬಾಬು, ರಾವುಲ್ ನಾಗಪ್ಪ, ಮಾದೇವಿ, ದುರ್ಗಿ, ನೀಲಮ್ಮ, ಸುಶೀಲಮ್ಮ, ಗೀತಾ, ಗಂಗಮ್ಮ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net