ವಂದೇ ಭಾರತ್ ಸಂಚಾರದ ವೇಳಾಪಟ್ಟಿ ಪರಿಷ್ಕರಣೆ

rail
Published on

ಮಂಗಳೂರು: ತಿರುವನಂತಪುರಂ ಸೆಂಟ್ರಲ್-ಮಂಗಳೂರು ಸೆಂಟ್ರಲ್ ನಡುವಿನ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು (ನಂಬರ್ 20632) ಸಂಚಾರದ ವೇಳಾಪಟ್ಟಿ ಮೇ. 13ರಿಂದ ಪರಿಷ್ಕರಣೆಗೊಂಡಿದೆ. ಎರ್ನಾಕುಲಂ ಜಂಕ್ಷನ್‌ನಿಂದ ಸಂಜೆ 6.35ರ ಬದಲು 6.42ಕ್ಕೆ ತಲುಪಲಿದೆ. ತೃಶೂರ್‌ಗೆ ರಾತ್ರಿ 7.40ರ ಬದಲು 7.56, ಶೋರ್ನೂರ್ ಜಂಕ್ಷನ್‌ಗೆ ರಾತ್ರಿ 8.15ರ ಬದಲು 8.30, ತಿರೂರ್‌ಗೆ ರಾತ್ರಿ 8.52ರ ಬದಲು 9.02, ಕೋಯಿಕ್ಕೋಡ್‌ಗೆ ರಾತ್ರಿ 9.23ರ ಬದಲು 9.32, ಕಣ್ಣೂರಿಗೆ ರಾತ್ರಿ 10.24ರ ಬದಲು 10.36, ಕಾಸರಗೋಡಿಗೆ ರಾತ್ರಿ 11.45ರ ಬದಲು 11.46ಕ್ಕೆ ಈ ರೈಲು ತಲುಪಲಿದೆ. ಉಳಿದಂತೆ ಬೇರೆ ನಿಲ್ದಾಣಗಳನ್ನು ತಲುಪುವ ವೇಳಾಪಟ್ಟಿಯಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಫಾಲ್ಘಾಟ್ ರೈಲ್ವೆ ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net