ನ.8ರಂದು ಉದ್ಯೋಗಕ್ಕೆ ನೇರ ಸಂದರ್ಶನ: ನಗರದಲ್ಲಿರುವ ಕಚೇರಿಯಲ್ಲಿ ಆಯೋಜನೆ

Schedule direct interview Mandya
Published on

ಮಂಡ್ಯ: ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ಹಾಗೂ ವಿವಿಧ ಸಂಸ್ಥೆಗಳ ಸಹಯೋಗದಲ್ಲಿ ಖಾಲಿ ಇರುವ ಹುದ್ದೆ ನೇಮಕಾತಿ ಮಾಡಿಕೊಳ್ಳಲು ನ.8ರಂದು ನಗರದಲ್ಲಿ ನೇರ ಸಂದರ್ಶನ ಆಯೋಜಿಸಲಾಗಿದೆ.

ಕೃಷ್ಣ ಡ್ರಗ್ ಆ್ಯಂಡ್ ಕೆಮಿಕಲ್ಸ್ ಸಂಸ್ಥೆಯಲ್ಲಿ ಮೂರು ಡೆಲಿವರಿ ಎಕ್ಸಿಕ್ಯೂಟಿವ್ ಹುದ್ದೆ ಖಾಲಿ ಇದ್ದು, ಪುರುಷ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳಲಾಗುತ್ತಿದೆ. ಮಾಸಿಕ 8 ರಿಂದ 9 ಸಾವಿರ ರೂ ವೇತನದ ಜತೆಗೆ ದ್ವಿಚಕ್ರ ವಾಹನ ನೀಡಲಾಗುವುದು. ಪಿಯುಸಿ ವಿದ್ಯಾರ್ಥಿತೆ ಹೊಂದಿರುವ 18 ರಿಂದ 28 ವರ್ಷದೊಳಗಿನವರನ್ನು ಆಯ್ಕೆ ಮಾಡಿಕೊಳ್ಳಲಾಗುತ್ತಿದೆ. ಚೈತನ್ಯ ಇಂಡಿಯಾ ಫಿನ್ ಕ್ರೆಡಿಟ್ ಪ್ರೈ. ಲಿ. ನಲ್ಲಿ 70 ಫೀಲ್ಡ್ ಆಫೀಸರ್ ಹುದ್ದೆಗಳಿವೆ. ಮಾಸಿಕ 14,570 ರೂ ಜತೆಗೆ ಪೆಟ್ರೋಲ್, ಇನ್ಸೆಂಟಿವ್, ವಿಮೆ ಸೌಲಭ್ಯವಿದೆ. ಪಿಯುಸಿ, ಐಟಿಐ, ಡಿಪ್ಲೊಮೋ ಅಥವಾ ಯಾವುದೇ ಪದವಿ ವಿದ್ಯಾರ್ಹತೆ ಹೊಂದಿರುವ 18 ರಿಂದ 28 ವರ್ಷದೊಳಗಿನವರನ್ನು ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ.

ಸ್ವತಂತ್ರ ಮೈಕ್ರೋ ಫೈನಾನ್ಸ್‌ನಲ್ಲಿ ಖಾಲಿ ಇರುವ 20 ಫೀಲ್ಡ್ ಆಫೀಸರ್ ಹುದ್ದೆಗೆ ಎಸ್‌ಎಸ್‌ಎಲ್‌ಸಿ, ಐಟಿಐ ಹಾಗೂ ಯಾವುದೇ ಪದವಿ ವಿದ್ಯಾರ್ಹತೆ ಹೊಂದಿರುವ 18 ರಿಂದ 30 ವರ್ಷದೊಳಗಿನವರನ್ನು ಆಯ್ಕೆ ಮಾಡಿಕೊಳ್ಳಲಾಗುತ್ತಿದೆ. ಮಾಸಿಕ 14,500 ರೂ ವೇತನದ ಜತೆಗೆ ಪೆಟ್ರೋಲ್, ಇನ್ಸೆಂಟಿವ್, ವಿಮೆ ಸೌಲಭ್ಯ ನೀಡಲಾಗುತ್ತಿದೆ. ಇನ್ನು ಸಾಯಿ ಇನ್ಶಿಟ್ಯೂಟ್ ಆಫ್ ಫಯರ್ ಆ್ಯಂಡ್ ಸೇಫ್ಟಿ ಮ್ಯಾನೇಜ್‌ಮೆಂಟ್ ಸಂಸ್ಥೆಯಲ್ಲಿ 15 ಫೀಲ್ಡ್ ಆಫೀಸರ್ ಹುದ್ದೆಗಳಿವೆ. ಮಾಸಿಕ 15 ರಿಂದ 20 ಸಾವಿರ ರೂ ವೇತನದ ಜತೆಗೆ ಇಎಸ್‌ಐ, ಪಿಎಫ್ ಸೌಲಭ್ಯವಿರಲಿದೆ. ಐಟಿಐ ವ್ಯಾಸಂಗ ಮಾಡಿರುವ 18ರಿಂದ 30 ವರ್ಷದೊಳಗಿನವರನ್ನು ನೇಮಕ ಮಾಡಿಕೊಳ್ಳಲಾಗುತ್ತಿದೆ. ಆಸಕ್ತರು ಬೆಳಗ್ಗೆ 10ಗಂಟೆಗೆ ನಗರದ ಆರ್‌ಟಿಒ ಕಚೇರಿ ಎದುರಿನ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯಲ್ಲಿ ಆಯೋಜಿಸಿರುವ ನೇರ ಸಂದರ್ಶನಕ್ಕೆ ತಮ್ಮ ಸ್ವವಿವರೊಂದಿಗೆ ಭಾಗವಹಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net