ವಿಕಲಚೇತನ ಶಿವಾನಂದರಿಗೆ ಎಸ್‌ಸಿಡಿಸಿಸಿ ಬ್ಯಾಂಕ್‌ನಿಂದ ಆರ್ಥಿಕ ನೆರವು

mng-9june-scdcc
Published on



ಮಂಗಳೂರು : ಕೆಎಎಸ್ ಪರೀಕ್ಷೆ ಬರೆಯಲಿರುವ ಗದಗ ಜಿಲ್ಲೆಯ ಶಿವಾನಂದ .ಇ.ಸುಂಕದ ಅವರಿಗೆ ಎಸ್‌ಸಿಡಿಸಿಸಿ ಬ್ಯಾಂಕ್‌ನಿಂದ ಹಾಗೂ ಡಾ.ಎಂ.ಎನ್.ರಾಜೇಂದ್ರಕುಮಾರ್ ಅವರಿಂದ ಆರ್ಥಿಕ ನೆರವು ಸೋಮವಾರ ವಿತರಿಸಲಾಯಿತು.
ಗದಗ ಜಿಲ್ಲೆಯ ನರಗುಂದ ತಾಲೂಕಿನವರಾದ ಶಿವಾನಂದ ಇ ಸುಂಕದ ಶೇ. 80ರಷ್ಟು ವಿಕಲಚೇತನರಾಗಿದ್ದು ಬಿಕಾಂ
ಪದವೀಧರಾಗಿದ್ದಾರೆ. ಕೆಎಎಸ್ ಪರೀಕ್ಷೆ ಬರೆಯುವ ಮಹಾದಾಸೆ ಇಟ್ಟುಕೊಂಡಿರುವ ಶಿವಾನಂದ ಇ ಸುಂಕದ ಅವರು ಗದಗದಿಂದ ಮಂಗಳೂರಿಗೆ ಬಂದು ರಾಜೇಂದ್ರ ಕುಮಾರ್ ಅವರನ್ನು ಭೇಟಿಯಾದರು. ಶಿವಾನಂದ ಅವರ ಮನವಿಗೆ ಸ್ಪಂದಿಸಿದ ರಾಜೇಂದ್ರ ಕುಮಾರ್ ಆರ್ಥಿಕ ನೆರವು ನೀಡಿ ಮುಂದಿನ ಭವಿಷ್ಯ ಕ್ಕೆ ಶುಭಕೋರಿದರು.
ಬ್ಯಾಂಕಿನ ನಿರ್ದೇಶಕರಾದ ಶಶಿಕುಮಾರ್ ರೈ ಬಾಲ್ಯೊಟ್ಟು, ಮಾಜಿ ನಿರ್ದೇಶಕ ರಾಜು ಪೂಜಾರಿ, ಬ್ಯಾಂಕಿನ
ಮುಖ್ಯಕಾರ್ಯನಿರ್ವಹಣಾಧಿಕಾರಿ ಕೆ. ಗೋಪಾಲಕೃಷ್ಣ ಭಟ್, ಉದ್ಯಮಿ ಇನಾಯತ್ ಆಲಿ, ಜಯಪ್ರಕಾಶ್ ತುಂಬೆ, ಸತೀಶ್. ಜಿ. ಎಸ್, . ಅಂಪಾರು ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಪ್ರದೀಪ್ ಶೆಟ್ಟಿ, ದಿವಾಕರ್ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net