

ಮಂಗಳೂರು : ಸಹಕಾರಿ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ (ಎಸ್‌ಸಿಡಿಸಿಸಿ) 2023-24ನೇ ಸಾಲಿನಲ್ಲಿ ಸಾಧಿಸಿದ ಸಮಗ್ರ ಸಾಧನೆಗೆ ಲೀಡ್ ಬ್ಯಾಂಕ್ ಪ್ರಶಸ್ತಿಗೆ ಪಾತ್ರವಾಗಿದೆ.
ಪ್ರತೀ ವರ್ಷದಂತೆ 2023-24ನೇ ಸಾಲಿನಲ್ಲಿ ಠೇವಣಿ ಸಂಗ್ರಹಣೆ ಮತ್ತು ಸಾಲ ನೀಡಿಕೆಯಲ್ಲಿ ಗಮನಾರ್ಹ ಸಾಧನೆಗೈದಿರುವ ಬ್ಯಾಂಕ್, ಮುಖ್ಯವಾಗಿ ಕೃಷಿ ಸಾಲ ಮತ್ತು ಆದ್ಯತಾ ವಲಯ ಸಾಲ ನೀಡಿಕೆಯಲ್ಲೂ ಮಹತ್ತರ ಪ್ರಗತಿ ಸಾಧಿಸಿದೆ. ರಾಷ್ಟ್ರೀಕೃತ ಬ್ಯಾಂಕ್‌ಗಳ ಪೈಪೋಟಿಯ ನಡುವೆಯೂ ಎಸ್‌ಸಿಡಿಸಿಸಿ ಬ್ಯಾಂಕಿನ ಈ ಮಹತ್ತರವಾದ ಸಾಧನೆಯನ್ನು ದಕ್ಷಿಣ ಕನ್ನಡ ಲೀಡ್ ಬ್ಯಾಂಕ್ ಗುರುತಿಸಿದೆ.
ಮೇ 24ರಂದು ದಕ್ಷಿಣ ಕನ್ನಡ ಲೀಡ್ ಬ್ಯಾಂಕ್ ನೇತೃತ್ವದಲ್ಲಿ ನಡೆದ 2023-24ನೇ 4ನೇ ತ್ರೈಮಾಸಿಕ ಬ್ಲಾಕ್ ಲೆವೆಲ್ ಬ್ಯಾಂಕರ್ಸ್ ಕಮಿಟಿ
ಸಭೆಯಲ್ಲಿ ಠೇವಣಿ ಸಂಗ್ರಹಣೆ ಮತ್ತು ಸಾಲ ನೀಡಿಕೆ ಅನುಪಾತದಲ್ಲಿ ತೃತೀಯ ಪ್ರಶಸ್ತಿ ನೀಡಿ ಗೌರವಿಸಿದೆ.
,,,,,,,,,,,,,,,,,,,,,,,,,,,,,,,,,,,,