ಅ.13ರಂದು ಎಸಿಡಿಸಿಸಿ ಬ್ಯಾಂಕ್ ಗುತ್ತಿಗಾರು ಶಾಖೆಯ ಸ್ಥಳಾಂತರ

scdcc
Published on


ಮಂಗಳೂರು : ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ (ಎಸ್‌ಸಿಡಿಸಿಸಿ)ನ ಸುಳ್ಯ ತಾಲೂಕು ಗುತ್ತಿಗಾರು ಶಾಖೆಯನ್ನು ಈಗ ಇರುವ ಕಟ್ಟಡದಿಂದ ಗುತ್ತಿಗಾರು ಮುಖ್ಯರಸ್ತೆಯಲ್ಲಿರುವ ರಾಘವೇಂದ್ರ ಕಾಂಪ್ಲೆಕ್ಸ್‌ನ ಪ್ರಥಮ ಅಂತಸ್ತಿಗೆ ಸ್ಥಳಾಂತರಿಸಲಾಗುವುದು. ಈ ಸ್ಥಳಾಂತರ ಸಮಾರಂಭ ಹಾಗೂ ಹೊಸ ಎಟಿಎಂ ಕೇಂದ್ರದ ಉದ್ಘಾಟನೆ ಅ.13ರಂದು ಬೆಳಗ್ಗೆ 11ಕ್ಕೆ ನೆರವೇರಲಿದೆ.
ಬ್ಯಾಂಕಿನ ಅಧ್ಯಕ್ಷ ಹಾಗೂ ರಾಜ್ಯ ಸಹಕಾರ ಮಾರಾಟ ಮಹಾಮಂಡಳದ ಅಧ್ಯಕ್ಷ ಡಾ.ಎಂ.ಎನ್.ರಾಜೇಂದ್ರ ಕುಮಾರ್ ಅವರು ದೀಪ ಪ್ರಜ್ವಲನೆ ಮಾಡಲಿರುವರು. ಬ್ಯಾಂಕಿನ 16ನೇ ಎಟಿಎಂ ಕೇಂದ್ರವನ್ನು ಗುತ್ತಿಗಾರು ಶಾಖೆಯಲ್ಲಿ ಶಾಸಕಿ ಭಾಗೀರಥಿ ಮುರುಳ್ಯ ಉದ್ಘಾಟಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಗುತ್ತಿಗಾರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸುಮಿತ್ರ ಮೂಕಮಲೆ, ಗುತ್ತಿಗಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಜಯಪ್ರಕಾಶ್ ಮೊಗ್ರ , ಗುತ್ತಿಗಾರು ಮಾಜಿ ಮಂಡಲ ಪ್ರಧಾನ ಮುಳಿಯ ತಿಮ್ಮಪ್ಪಯ್ಯ, ಗುತ್ತಿಗಾರು ರಬ್ಬರ್ ಬೆಳೆಗಾರರ ಮಾರಾಟ ಮತ್ತು ಸಂಸ್ಕರಣಾ ಸಹಕಾರ ಸಂಘದ ಅಧ್ಯಕ್ಷ ನಿತ್ಯಾನಂದ ಮುಂಡೋಡಿ ಹಾಗೂ ಕಟ್ಟಡ ಮಾಲೀಕ ಅನಿಲ್ ಕುಮಾರ್
ಭಾಗವಹಿಸಲಿದ್ದಾರೆ.
ಗ್ರಾಹಕರಿಗೆ ಉನ್ನತ ಸೇವೆಯನ್ನು ನೀಡುವುದರೊಂದಿಗೆ ಜನಮನ್ನಣೆ ಪಡೆದಿರುವ ಈ ಶಾಖೆ ಸಂಪೂರ್ಣ ಗಣಕೀಕೃತಗೊಂಡು, ಏಕಗವಾಕ್ಷಿ. ಕೋರ್ ಬ್ಯಾಂಕಿಂಗ್ , ಆರ್‌ಟಿಜಿಎಸ್ ಮತ್ತು ನೆಫ್ಟ್ ಸೌಲಭ್ಯಗಳೊಂದಿಗೆ ಕಾರ್ಯಾರಂಭಗೊಳ್ಳಲಿದೆ ಎಂದು ಬ್ಯಾಂಕಿನ ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net