ನಾಳೆ ಅಲ್ಲಲ್ಲಿ ವಿದ್ಯುತ್ ನಿಲುಗಡೆ

mescom
Published on

ಮಂಗಳೂರು: ಮೆಸ್ಕಾಂ ವ್ಯಾಪ್ತಿಯ 110/11 ಕೆವಿ ಬೈಕಂಪಾಡಿ ವಿದ್ಯುತ್ ವಿತರಣಾ ಕೇಂದ್ರದಿಂದ ಹೊರಡುವ 11 ಕೆವಿ ಟೆಲಿಫೋನ್ ಎಕ್ಸ್ ಚೇಂಜ್, ಜೋಕಟ್ಟೆ, ಪ್ಲಾಮಾ ಬೋರ್ಡ್, ಮಲಬಾರ್ ಆಕ್ಸಿಜನ್ ಫೀಡರ್ ಗಳಲ್ಲಿ ತುರ್ತು ನಿರ್ವಹಣಾ ಕಾಮಗಾರಿಯನ್ನು ಹಮ್ಮಿಕೊಂಡಿರುವುದರಿಂದ ಅ.10ರ ಬೆಳಗ್ಗೆ 10 ರಿಂದ ಸಂಜೆ 4 ಗಂಟೆಯವರೆಗೆ ಕುಡುಂಬೂರು, ಅಂಗರಗುಂಡಿ, ಎ.ಪಿ.ಎಂ.ಸಿ, ಏರ್ ಟೆಲ್, ಪ್ರೈಮಸಿ, ಜಿ.ಟಿ.ಟಿ.ಸಿ, ಟೆಲಿಫೋನ್ ಎಕ್ಸ್ ಚೇಂಜ್, ಬಿ.ಪಿ.ಸಿ.ಎಲ್ ಗ್ಯಾಸ್, ಕಲ್ಬಾವಿ ಕ್ಯಾಶ್ಯೂ, ಆಶೀರ್ವಾದ ಪ್ಲಾಸ್ಟಿಕ್, ಮಲಬಾರ್ ಆಕ್ಸಿಜನ್, ಬ್ರೈಟ್ ಪ್ಯಾಕೇಜ್, ಸೋಮಯಾಜಿ ಸಿರಾಮಿಕ್ಸ್, ಪ್ಲಾಮಾ ಪ್ಲಾಸ್ಟಿಕ್, ಅರುಣ ಮಸಾಲ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ನಿಲುಗಡೆ ಮಾಡಲಾಗುತ್ತದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net