ಮಂಗಳೂರು: ಮೆಸ್ಕಾಂ 110/33/11 ಕೆವಿ ಕುಲಶೇಖರ ಉಪಕೇಂದ್ರದಿಂದ ಹೊರಡುವ 11ಕೆವಿ ಅಡ್ಯಾರ್ ಫೀಡರ್ ಮತ್ತು 11ಕೆವಿ ಕಣ್ಣೂರು ಫೀಡರ್‌ನಲ್ಲಿ ಮುಂಗಾರು ಪೂರ್ವ ನಿರ್ವಹಣೆ ಕಾಮಗಾರಿ ಹಾಗೂ ತುರ್ತು ನಿರ್ವಹಣೆ ಕಾಮಗಾರಿಗಳನ್ನು ಹಮ್ಮಿಕೊಂಡಿರುವುದರಿಂದ ಮೇ.2ರಂದು ಬೆಳಿಗ್ಗೆ 10 ರಿಂದ ಸಂಜೆ 5 ಗಂಟೆಯವರೆಗೆ ಅಡ್ಯಾರ್, ಅಡ್ಯಾರ್ ಕಟ್ಟೆ, ಅಡ್ಯಾರ್ ಪದವು, ವಳಚ್ಚಿಲ್, ವಳಚ್ಚಿಲ್ ಪದವು, ಅರ್ಕುಳ, ಮೇರೆಮಜಲು, ಮೇರ್ಲಪದವು, ತುಪ್ಪೆಕಲ್ಲು ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ನಿಲುಗಡೆ ಮಾಡಲಾಗುತ್ತದೆ ಎಂದು ಮೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಿದೆ.