

ಮಂಗಳೂರು: ಕರಾವಳಿಯಲ್ಲಿ ಶುಕ್ರವಾರ ಮೋಡ ಮಿಶ್ರಿತ ಹವಾಮಾನ ಕಂಡುಬಂದಿದ್ದು, ಅಲ್ಲಲ್ಲಿ ಸಾಧಾರಣ ಮಳೆಯಾಗಿದೆ. ಇಡೀ ದಿನ ಬೀಸಿಲು ಸಹಿತ ಮೋಡ, ಅಲ್ಲಲ್ಲಿ ತುಂತುರು ಹನಿ ಕಂಡುಬಂದಿದ್ದು, ದಿನಪೂರ್ತಿ ಬಿಸಿ ವಾತಾವರಣ ಕಂಡುಬಂದಿದೆ.
ಬೆಳಗ್ಗೆ ಉತ್ತಮ ಬಿಸಿಲು ಕಂಡುಬಂದಿದ್ದು, ಮಧ್ಯಾಹ್ನ ಬಂಟ್ವಾಳ, ಮಾಣಿ, ಉಪ್ಪಿನಂಗಡಿ ಸುತ್ತಮುತ್ತ ಮಳೆಯಾಗಿದೆ. ಹವಾಮಾನ ಇಲಾಖೆ ಪ್ರಕಾರ ಅ.19ಮತ್ತು 20 ರಂದು ಕರಾವಳಿಯಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ ಎಂದು ತಿಳಿಸಿದೆ.
ದ.ಕ.ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ಬೆಳಗ್ಗೆ ಮೋಡ ಕವಿದಿದ್ದು, ಸುಳ್ಯ ತಾಲೂಕಿನ ಕೆಲವು ಭಾಗಗಳಲ್ಲಿ ಮಳೆಯಾಗಿದೆ. ಇದನ್ನು ಹೊರತುಪಡಿಸಿದರೆ ಇಡೀ ದಿನ ಮೋಡ ಮುಸುಕಿದ ವಾತಾವರಣ ಇದ್ದು, ತುಂತುರು ಹನಿದಿದೆ. ಸಂಜೆ ವೇಳೆ ಮಂಗಳೂರು, ಬಂಟ್ವಾಳ ಸೇರಿದಂತೆ ಹಲವಡೆ ಸಂಜೆ ಗುಡುಗು ಸಹಿತ ಹನಿ ಮಳೆಯಾಗಿದೆ.