

ಮಡಿಕೇರಿ:
ದಕ್ಷಿಣ ಕೊರಿಯಾದಲ್ಲಿ ಈಚೆಗೆ ನಡೆದ 20ನೇ ಏಷ್ಯನ್ ರೋಲರ್ ಸ್ಕೇಟಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಜಿಲ್ಲೆಯ ಕಲ್ಪನಾ ಕುಟ್ಟಪ್ಪ ಎರಡು ಕಂಚಿನ ಪದಕ ಗಳಿಸಿದ್ದಾರೆ. ದಕ್ಷಿಣ ಕೊರಿಯಾದ ಜೆಟಿಯಾನ್ ನಗರದಲ್ಲಿ 10 ದಿನಗಳ ಕಾಲ ನಡೆದ ಸ್ಪರ್ಧೆಯಲ್ಲಿ ಭಾರತದ ಒಟ್ಟು 23 ಸ್ಪರ್ಧಿಗಳು ಭಾಗವಹಿಸಿದ್ದು ಕಲ್ಪನಾ ಕುಟ್ಟಪ್ಪ ಎರಡು ಕಂಚಿನ ಪದಕಗಳನ್ನು ಗಳಿಸುವುದರೊಂದಿಗೆ ಭಾರತಕ್ಕೆ ಒಟ್ಟು 16 ಪದಕಗಳು ಲಭ್ಯವಾಗಿವೆ ಎಂದು ತಂಡದ ಕೋಚ್ ಶ್ರೀಪಾದ್ ಶಿಂಧೆ ತಿಳಿಸಿದ್ದಾರೆ.
ಕಲ್ಪನಾ ಕುಟ್ಟಪ್ಪ ರೋಲರ್ ಸ್ಕೇಟಿಂಗ್ ಸ್ಪರ್ಧೆಯಲ್ಲಿ ರಾಷ್ಟ್ರ, ಅಂತರಾಷ್ಟ್ರೀಯ ಮಟ್ಟದಲ್ಲಿ ಇದುವರೆಗೆ 20ಕ್ಕೂ ಅಧಿಕ ಪದಕಗಳನ್ನು ಗಳಿಸಿದ್ದು 2023ರಲ್ಲಿ ಚೀನಾದಲ್ಲಿ ನಡೆದ ಏಷ್ಯನ್ ರೋಲರ್ ಸ್ಕೇಟಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಒಂದು ಕಂಚಿನ ಪದಕ ಗಳಿಸಿದ್ದರು.
ಕುಶಾಲನಗರ ಮಾದಾಪಟ್ಟಣ ಗ್ರಾಮದ ಮುಕ್ಕಾಟಿರ ಸ್ವಾತಿ ರವಿ ಕುಟ್ಟಪ್ಪ ದಂಪತಿ ಪುತ್ರಿಯಾದ ಕಲ್ಪನಾ ಕುಟ್ಟಪ್ಪ ಪ್ರಸಕ್ತ ಚೆನ್ನೆöÊನ ಡಬ್ಲ್ಯೂ ಸಿ ಸಿ ವುಮೆನ್ಸ್ ಕ್ರಿಶ್ಚಿಯನ್ ಕಾಲೇಜ್ ನಲ್ಲಿ ದ್ವಿತೀಯ ವರ್ಷದ ಪದವಿ ವ್ಯಾಸಂಗ ಮಾಡುತ್ತಿದ್ದಾರೆ. ಈ ವರ್ಷದ ಸೆಪ್ಟೆಂಬರ್ ತಿಂಗಳಲ್ಲಿ ಚೀನಾದಲ್ಲಿ ನಡೆಯುವ ವಿಶ್ವ ರೋಲರ್ ಸ್ಕೇಟಿಂಗ್ ಚಾಂಪಿಯನ್‌ಶಿಪ್‌ಗೂ ಕಲ್ಪನಾ ಆಯ್ಕೆಯಾಗಿದ್ದಾರೆ.