ಪಿಗ್ಮಿ ಕಲೆಕ್ಷನ್ ಸಾಫ್ಟ್ ವೇರ್ ದುರ್ಬಳಕೆ: ಸಹಕಾರಿ ಸಚಿವ ರಾಜಣ್ಣ ಕ್ರಮಕ್ಕೆ ಸೂಚನೆ

IMG-20230731-WA0045.jpg
Published on

ಬೆಳಗಾವಿ : ಠೇವಣಿ ಏಜೆಂಟ್‌ಗಳಿಂದ ಪಿಗ್ಮಿ ಕಲೆಕ್ಷನ್‌ಗಳಲ್ಲಿ ಈಗಾಗಲೇ ಅನೇಕ ಅವ್ಯವಹಾರ ಪ್ರಕರಣಗಳು ಬೆಳಕಿಗೆ ಬಂದಿವೆ. ಸಾಫ್ಟ್‌ವೇರ್ ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ. ಇಂತಹ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿ ಹಣ ದುರ್ಬಳಕೆಯಾಗದಂತೆ ಮುನ್ನೆಚ್ಚರಿಕೆ ಕ್ರಮ ವಹಿಸಬೇಕು ಎಂದು ಸಹಕಾರಿ ಸಚಿವ ಕೆ.ಎನ್.ರಾಜಣ್ಣ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
 

ಬಾಗಲಕೋಟೆ, ಬೆಳಗಾವಿ, ವಿಜಯಪುರ, ಧಾರವಾಡ, ಗದಗ, ಹಾವೇರಿ ಉತ್ತರ ಕನ್ನಡ ಜಿಲ್ಲೆಗಳ ಡಿಸಿಸಿ ಬ್ಯಾಂಕ್ ವ್ಯಾಪ್ತಿಯಲ್ಲಿ ಕೆಲವು ಹಣ ದುರುಪಯೋಗ ವಂಚನೆ ಪ್ರಕರಣಗಳು ದಾಖಲಾಗಿದ್ದು, ತಪ್ಪಿತಸ್ಥರ ವಿರುದ್ದ ಕ್ರಮ ಕೈಗಳಲಾಗಿದೆ. ಪ್ರಕರಣಗಳು ಸಿಬಿಐ ಹಂತದಲ್ಲಿ ತನಿಖೆ ನಡೆಯುತ್ತಿವೆ ಎಂದು ಸಹಕಾರ ಸಂಘಗಳ ನಿಬಂಧಕರು ಡಾ. ಕೆ. ರಾಜೇಂದ್ರ ವಿವರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net