ಪರಿಶಿಷ್ಟ ಮೀಸಲು ಜಾರಿಗೆ ಆಗ್ರಹ

SC, ST, Reservation, demand,
Published on

ಚಳ್ಳಕೆರೆ: ಎಸ್‌ಸಿ- ಎಸ್‌ಟಿ ಮೀಸಲಿಗಾಗಿ 150 ದಿನಗಳಿಂದ ಧರಣಿ ನಡೆಸುತ್ತಿರುವ ಶ್ರೀ ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದ ಸ್ವಾಮೀಜಿ ಅವರ ಹೋರಾಟ ಬೆಂಬಲಿಸಿ ತಾಲೂಕಿನ ಪ್ರಗತಿಪರ ಭಾರತೀಯ ಮುಸ್ಲಿಂ ಭಾವೈಕ್ಯ ಸಮಾಜದ ಮುಖಂಡರು ಸೋಮವಾರ ಗ್ರೇಡ್-2 ತಹಸೀಲ್ದಾರ್ ಜಿ.ಎನ್. ಸಂಧ್ಯಾ ಅವರಿಗೆ ಮನವಿ ಸಲ್ಲಿಸಿದರು.

ಮುಖಂಡ ಎಸ್.ಎಚ್. ಸೈಯದ್ ಮಾತನಾಡಿ, ವಾಲ್ಮೀಕಿ ಶ್ರೀಗಳ ಹೋರಾಟವನ್ನು ಸರ್ಕಾರ ನಿರ್ಲಕ್ಷಿಸಿದೆ. ಕೂಡಲೇ ಸ್ಪಂದಿಸಿ ಮೀಸಲು ಪ್ರಸ್ತಾವನೆ ಪರಿಗಣಿಸಬೇಕು. ಸಂವಿಧಾನಬದ್ಧ ಮತ್ತು ಜನಸಂಖ್ಯೆಗೆ ಅನುಗುಣವಾಗಿ ಮೀಸಲು ಕೊಡಬೇಕಿದೆ. ನಾಗಮೋಹನ್‌ದಾಸ್ ವರದಿ ಪ್ರಕಾರ ಮೀಸಲು ಜಾರಿಗೊಳಿಸಬೇಕು ಎಂದು ಆಗ್ರಹಿಸಿದರು.

ಮುಖಂಡರಾದ ಎಂ.ದಾದಾಪೀರ್, ಎಸ್. ಮುಜೀಬುರ್, ಎಸ್.ಟಿ. ಜುಬೇರ್, ಫರೀದ್ ಖಾನ್, ಸೈಯದ್ ಅಜ್ಮತ್ ಉಲ್ಲ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net