

ಕೊಪ್ಪಳ: ದಲಿತರ ಮೇಲಿನ ದೌರ್ಜನ್ಯ ಖಂಡಿಸಿ ದಲಿತ ಪರ, ಪ್ರಗತಿಪರ ಸಂಟನೆಗಳ ನೇತೃತ್ವದಲ್ಲಿ ಮಂಗಳವಾರ ನಗರದಲ್ಲಿ ಬೃಹರತ್ ಪ್ರತಿಭಟನಾ ಜಾಥಾ ನಡೆಯಿತು. ಸಾವಿರಾರು ಜನರು ಭಾಗಿಯಾಗಿ ಬೆಂಬಲ ನೀಡಿದರು.
ಡಿಸಿ ಕಚೇರಿ ಮುಂಭಾಗದಲ್ಲಿ ಹೋರಾಟಗಾರರು ಜಾಥಾಗೆ ಚಾಲನೆ ನೀಡಿದರು. ಹೋರಾಟಗಾರ ಅಂಬಣ್ಣ ಆರೋಲಿಕರ್ ಮಾತನಾಡಿ, ರಾಜ್ಯದ್ಯಂತ ವಿವಿಧೆಡೆ ನಡೆವ ದಲಿತರ ದೌರ್ಜನ್ಯ ಯಶಸ್ವಿಯಾಗಿ ತಡೆಯುವಲ್ಲಿ ಆಡಳಿತ ವಿಲವಾಗಿದೆ. ದಬ್ಬಾಳಿಕೆ ಮಾಡುವವರಿಗೆ ಕಾನೂನು ಭಯ ಇಲ್ಲದಾಗಿದೆ. ಪರಿಣಾಮ ಹಿಂದಿಗಿಂತಲೂ ಇಂದು ದೌರ್ಜನ್ಯಗಳ ಪ್ರಮಾಣ ಹೆಚ್ಚಾಗಿದೆ. ಕಾನೂನು ಕಟ್ಟುನಿಟ್ಟಾಗಿ ಜಾರಿಗೊಳಿಸುವ ಜರೂರಿದೆ. ಅಧಿಕಾರಿಗಳು ಯಾವುದೇ ಒತ್ತಡಗಳಿಗೆ ಮಣಿಯದೇ ಕಾನೂನು ಪಾಲಿಸಿದಲ್ಲಿ ದಬ್ಬಾಳಿಕೆ ತಡೆಯಬಹುದೆಂದು ಅಭಿಪ್ರಾಯಪಟ್ಟರು.
ಸಾಹಿತಿ ಅಲ್ಲಮ ಪ್ರಭು ಬೆಟ್ಟದೂರು ಮಾತನಾಡಿ, ದೌರ್ಜನ್ಯ ನಡೆದಾಗ ಜಿಲ್ಲಾಮಟ್ಟದ ಅಧಿಕಾರಿಗಳು ಆ ಗ್ರಾಮಕ್ಕೆ ಭೇಟಿ ನೀಡಿ ಕೂಲಂಕುಷವಾಗಿ ಪರಿಶೀಲಿಸಬೇಕು. ಟನೆಗೆ ಕಾರಣರಾದವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಮತ್ತೊಮ್ಮೆ ಅಂಥ ಟನೆಗಳು ನಡೆಯದಂತೆ ತಡೆಗಟ್ಟಬೇಕು ಎಂದರು.
ಡಿಸಿ ಕಚೇರಿಯಿಂದ ಕುಕನೂರು ತಾಲೂಕಿನ ಭಾನಾಪುರವರೆಗೆ ಜಾಥಾ ಸಾಗಿತು. ಸೆ.18ರಂದು ಸಂಗನಾಳಗೆ ತೆರಳಲಿದೆ. ಪ್ರಮುಖರಾದ ಟಿ.ರತ್ನಾಕರ್, ಶುಕ್ರಜ ತಾಲ್ಕೇರಿ, ಬಸವರಾಜ ಸೂಳಿಭಾವಿ, ಮುತ್ತು ಬಿಳಿಯಲಿ, ಶ್ರೀಪಾದ ಭಟ್, ಶಶಿಕಲಾ ಮಠ, ಸಲೀಮಾ ಜಾನ, ಜನಾರ್ದನ, ಎಂ.ಆರ್.ಬೇರಿ, ಗೌರಿ ಗೋನಾಳ, ಮರಿಯಮ್ಮ, ಆನಂದ ಶಿಂಗಾಡಿ, ಖಾಸಿಂ ಸರ್ದಾರ, ಡಿ.ಎಂ. ಬಡಿಗೇರ್, ಡಿ.ಎಚ್.ಪೂಜಾರ, ನಜೀರ್ ಮೂಲಿಮನಿ, ಬಸವರಾಜ ಶೀಲವಂತರ, ಮುತ್ತು ಹಾಲಕೇರಿ ಇತರರಿದ್ದರು.