ಎಸ್ಸಿ, ಎಸ್ಟಿಗಳ ರಕ್ಷಣೆಗೆ ವಿಶೇಷ ಗಸ್ತು : ಚಿಕ್ಕನಾಯಕನಹಳ್ಳಿ ಸಿಪಿಐ ವೀಣಾ

22 c n halli police photo
Published on

ಚಿಕ್ಕನಾಯಕನಹಳ್ಳಿ: ಕರೊನಾದಿಂದಾಗಿ ಎಸ್‌ಸಿ, ಎಸ್‌ಟಿ ಕುಂದುಕೊರತೆ ಸಭೆ ಮಾಡಲು ಸಾಧ್ಯವಾಗಿರಲಿಲ್ಲ. ಇನ್ನು ಮುಂದೆ ಎಸ್‌ಸಿ, ಎಸ್‌ಟಿ ಸಮುದಾಯದ ರಕ್ಷಣೆ ಹಾಗೂ ಹಳ್ಳಿಗಳಲ್ಲಿ ವಿಶೇಷ ಗಸ್ತು ನಡೆಸಲಾಗುವುದು ಎಂದು ಆರಕ್ಷಕ ವೃತ್ತನಿರೀಕ್ಷಕ ಎಸ್.ಎಂ.ವೀಣಾ ತಿಳಿಸಿದರು.

ಪಟ್ಟಣದ ಆರಕ್ಷಕ ಉಪನಿರೀಕ್ಷಕರ ಠಾಣೆಯ ಆವರಣದಲ್ಲಿ ಗುರುವಾರ ಎಸ್‌ಸಿ, ಎಸ್‌ಟಿ ಕುಂದುಕೊರತೆ ಸಭೆಯಲ್ಲಿ ಮಾತನಾಡಿದ ಅವರು, ನಿಮ್ಮ ರಕ್ಷಣೆಯೇ ಆದ್ಯತೆ., ಸಮಾಜದಲ್ಲಿ ದೌರ್ಜನ್ಯ ಹಾಗೂ ಅನ್ಯಾಯಗಳಿಗೆ ರಕ್ಷಣೆ ನೀಡಲಾಗುವುದು. ಕರೊನಾ ಬಗ್ಗೆ ಸರ್ಕಾರದ ಸೂಚನೆಗಳನ್ನು ಪಾಲಿಸಿ ಕಾಲನಿಗಳಲ್ಲಿ ಅರಿವು ಮೂಡಿಸುವ ಕೆಲಸ ಮಾಡಲಾಗುವುದು ಎಂದರು. ಮಾದಿಗ ದಂಡೋರದ ರಾಜ್ಯ ಕಾರ್ಯದರ್ಶಿ ಬೇವಿನಹಳ್ಳಿ ಚನ್ನಬಸವಯ್ಯ ಮಾತನಾಡಿ, ಸಮಾಜದಲ್ಲಿ ಎಲ್ಲ ವರ್ಗದವರು ಒಂದೇ ಎಂಬ ಭಾವನೆ ಮೂಡಿಸುವಲ್ಲಿ ಗ್ರಾಮಗಳ ಎಸ್‌ಸಿ, ಎಸ್‌ಟಿ ಕಾಲನಿಗಳಲ್ಲಿ ಸಭೆಗಳನ್ನು ಮಾಡುವ ಮೂಲಕ ದಲಿತರ ಮೇಲಿನ ದೌರ್ಜನ್ಯ ತಡೆಯಬೇಕು ಎಂದರು.

ದಲಿತ ಸಂಘಟನೆ ಮುಖಂಡ ಸಿ.ಎಸ್.ಮಲ್ಲಿಕಾರ್ಜುನ್ ಮಾತನಾಡಿ, ಕರೊನಾದಿಂದಾಗಿ ಕೂಲಿ ಕೆಲಸ ಸಿಗುತ್ತಿಲ್ಲ. ಮೈಕ್ರೋಪೈನಾನ್ಸ್ ಕಂಪನಿಗಳಿಂದ ಸಾಲಪಡೆದ ಮಹಿಳಾ ಸಂಘದವರ ಮೇಲೆ ದಬ್ಬಾಳಿಕೆ ನಡೆಸಿ ಬಡ್ಡಿ ಜತೆಗೆ ಚಕ್ರಬಡ್ಡಿಯನ್ನು ಹಾಕುತ್ತಿದ್ದಾರೆ. ಬಡ್ಡಿ ಕಡಿಮೆ ಮಾಡುವಂತೆ ಮಾಡಿ ಎಂದು ಒತ್ತಾಯಿಸಿದರು. ಇದಕ್ಕೆ ಉತ್ತರಿಸಿದ ಸಿಪಿಐ ಎಸ್.ಎಂ.ವೀಣಾ, ತೊಂದರೆ ನೀಡುತ್ತಿರುವ

ಮೈಕ್ರೋಫೈನಾನ್ಸ್‌ಗಳ ವಿರುದ್ಧ ದೂರು ನೀಡಿದರೆ ಕ್ರಮಕೈಗೊಳ್ಳುತ್ತೇವೆ ಎಂದರು.

ಎಸ್‌ಐ ಹರೀಶ್, ದಲಿತ ಮುಖಂಡರಾದ ಸಿ.ಎಸ್.ಲಿಂಗದೇವರು, ಜೆ.ಸಿ.ಪುರ ಗೋವಿಂದರಾಜು, ಡಿಎಸ್4 ಸಂಘಟನೆ ಅಧ್ಯಕ್ಷ ಚಂದ್ರಶೇಖರ್‌ಚಿಕ್ಕರಾಂಪುರ, ಹಂದನಕೆರೆ ನಾಗರಾಜು, ದುಗಡಿಹಳ್ಳಿಬಸವರಾಜು, ಮಾದಿಗದಂಡೋರದ ತಾಲೂಕು ಅಧ್ಯಕ್ಷ ಬೆಳಗಿಹಳ್ಳಿರಾಜು ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net