

ಕೊಪ್ಪಳ: ದಲಿತರ ಮೇಲಿನ ದೌರ್ಜನ್ಯ ಖಂಡಿಸಿ ಸೆ.17ರಂದು ಕೊಪ್ಪಳ ಜಿಲ್ಲಾಡಳಿತ ಕಚೇರಿಯಿಂದ ಸಂಗನಾಳವರೆಗೆ ಸಂಗನಾಳ ಚಲೋ ಹಮ್ಮಿಕೊಂಡಿದ್ದು, ಸೆ.18ರಂದು ಸಂಗನಾಳದಲ್ಲಿ ಸೌಹಾರ್ದ ಸಮಾವೇಶ ನಡೆಸಲಾಗುವುದೆಂದು ಜಿಲ್ಲಾ ದಲಿತ, ದಮನಿತರ ದೌರ್ಜನ್ಯಗಳ ವಿರೋಧಿ ಒಕ್ಕೂಟದ ಬಸವರಾಜ ಸೂಳಿಭಾವಿ ತಿಳಿಸಿದರು.
ಕೊಪ್ಪಳದಲ್ಲಿ ಎಸ್ಸಿ, ಎಸ್ಟಿಗಳ ಮೇಲೆ ಅತಿಹೆಚ್ಚು ದೌರ್ಜನ್ಯ ನಡೆಯುತ್ತಿದೆ. 2021ರಲ್ಲಿ 50, 2022ರಲ್ಲಿ 60 ದೌರ್ಜನ್ಯ ಪ್ರಕರಣಗಳಾಗಿವೆ. ಕನಿಷ್ಠ ವಾರಕ್ಕೆ ಒಂದಾದರೂ ಪ್ರಕರಣ ನಡೆದಿರುತ್ತವೆ. ಸೂಕ್ತ ರಕ್ಷಣೆ ಇಲ್ಲ. ಕಾನೂನು, ಸುವ್ಯವಸ್ಥೆ ಹಾಳಾಗಿದೆ. ಅದನ್ನು ತಡೆಯುವಲ್ಲಿ ಸರ್ಕಾರ, ಜಿಲ್ಲಾಡಳಿತ ಸಂಪೂರ್ಣ ವಿಲವಾಗಿದೆ. ನಮ್ಮನ್ನು ಆಳುವವರು ರಾಜಕೀಯ ಕಾರಣಕ್ಕಾಗಿ ದೌರ್ಜನ್ಯ ನಡೆಸುವವರ ಪರವಾಗಿದ್ದಾರೆ. ಎಲ್ಲ ಪಕ್ಷದವರೂ ಇದಕ್ಕೆ ಹೊರತಲ್ಲ. ಇದನ್ನು ನಮ್ಮ ಸಂಟನೆ ತೀವ್ರವಾಗಿ ಖಂಡಿಸುತ್ತದೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಕೊಪ್ಪಳವನ್ನು ದಲಿತ, ದಮನಿತರ ದೌರ್ಜನ್ಯ ಪೀಡಿತ ಜಿಲ್ಲೆಯಾಗಿ ಘೋಷಿಸಬೇಕು. ಕಲ್ಯಾಣ ಕರ್ನಾಟಕ ಹೆಸರಿನ ಬದಲು ಹೈದ್ರಾಬಾದ್ ಕರ್ನಾಟಕವೆಂದು ಮರು ನಾಮಕರಣ ಮಾಡಿ. ಅಸ್ಪ-----ೃಶ್ಯತೆ ನಿವಾರಣೆಗೆ ಶಾಶ್ವತ ಪರಿಹಾರವಾಗಿ ಕಾನೂನು ತಿದ್ದುಪಡಿ ಮಾಡಬೇಕು. ದೌರ್ಜನ್ಯ ಪ್ರಕರಣಗಳ ವಿಚಾರಣೆಗೆ ಪ್ರತ್ಯೇಕ ನ್ಯಾಯಾಲಯಗಳಾಗಬೇಕು. ದೌರ್ಜನ್ಯ ಪ್ರಕರಣಗಳಲ್ಲಿ ಜಿಲ್ಲಾಧಿಕಾರಿ, ಎಸ್ಪಿಯನ್ನು ನೇರ ಹೊಣೆಗಾರರನ್ನಾಗಿಸಬೇಕು. ಪ್ರತಿ ದೂರು ದಾಖಲು ಪದ್ಧತಿ ಕೈ ಬಿಡಬೇಕು. ಭೂರಹಿತ ದಲಿತರಿಗೆ ಭೂಮಿ ನೀಡಬೇಕೆ ಎಂಬುದು ನಮ್ಮ ಹಕ್ಕೊತ್ತಾಯ. ಅನೇಕ ಹೋರಾಟಗಾರರು ಸಮಾವೇಶಕ್ಕೆ ಆಗಮಿಸಲಿದ್ದಾರೆ ಎಂದರು.
ಪ್ರಮುಖರಾದ ಸಂಜಯದಾಸ, ರಾಮಲಿಂಗಶಾಸ್ತ್ರಿ, ಕಾಶಪ್ಪ, ಪಾಮಣ್ಣ, ವೆಂಕಟೇಶ, ರತ್ನಾಕರ, ಅಲ್ಲಮಪ್ರಭು ಬೆಟ್ಟದೂರು, ಡಿ.ಎಚ್.ಪೂಜಾರ, ಬಸವರಾಜ ಶೀಲವಂತರ ಇತರರಿದ್ದರು.