

ಚಳ್ಳಕೆರೆ: ಮಾದಿಗ ಸಮುದಾಯ ಇತರ ಜಾತಿ-ಧರ್ಮದ ಜತೆ ಪ್ರೀತಿ ವಿಶ್ವಾಸ ಹೆಚ್ಚು ಗಳಿಸುವ ಮೂಲಕ ಸೌಹಾರ್ದ ಜೀವನಕ್ಕೆ ಮದರಿ ಆಗಬೇಕು ಎಂದು ಅಬಕಾರಿ ಸಚಿವ ಆರ್.ಬಿ.ತಿಮ್ಮಾಪುರ್ ಸಲಹೆ ನೀಡಿದರು.
ಚಳ್ಳಕೆರೆ ತಾಲೂಕು ಮಾದಿಗ ನೌಕರರ ಸಾಂಸ್ಕೃತಿಕ ಸಂಘ ನಗರದ ಅನಂತನಾಥ ಜೈನಭವನದಲ್ಲಿ ಭಾನುವಾರ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಮತ್ತು ನಿವೃತ್ತ ನೌಕರರ ಸನ್ಮಾನ ಸಮಾರಂಭದಲ್ಲಿ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಮಾತನಾಡಿದರು.
ಸಮುದಾಯದಲ್ಲಿನ ಕಲೆ ಮತ್ತು ಸಂಸ್ಕೃತಿಯನ್ನು ಮೈಗೂಡಿಸಿಕೊಳ್ಳಬೇಕು. ವೈಯಕ್ತಿಕ ಲಾಭಕ್ಕಾಗಿ, ಮತ್ತೊಬ್ಬರ ಪಿತೂರಿಗೆ ಸಮುದಾಯಕ್ಕೆ ಸಂವಿಧಾನ ಕಲ್ಪಿಸಿರುವ ಕಾಯಿದೆ, ಕಾನೂನುಗಳನ್ನು ದುರುಪಯೋಗ ಮಾಡಿಕೊಳ್ಳಬಾರದು ಎಂದು ಕಿವಿಮಾತು ಹೇಳಿದರು.