ಪರಿಶಿಷ್ಟ ಜಾತಿ ಸಮೀಕ್ಷೆ ಪೂರ್ಣ ಮಹತ್ವದ ಅಂಶ ಬಹಿರಂಗ

Sc Servay
Published on

ಕಾರವಾರ: ಪರಿಶಿಷ್ಟ ಜಾತಿಯ ಒಳ ಮೀಸಲಾತಿ ಜಾರಿ ಸಂಬAಧ ನ್ಯಾ.ನಾಗಮೋಹನದಾಸ್ ಸಮಿತಿಯ ಸೂಚನೆಯಂತೆ ನಡೆದ ಪರಿಶಿಷ್ಟ ಜಾತಿಗಳ ಕುಟುಂಬದ ಸಾಮಾಜಿಕ, ಆರ್ಥಿಕ ಸಮೀಕ್ಷೆಯಲ್ಲಿ ಜಿಲ್ಲೆಯಲ್ಲಿ ಶೇ. 100.32 ರಷ್ಟು ಗುರಿ ಸಾಧಿಸಲಾಗಿದೆ. ಜಿಲ್ಲೆಯಲ್ಲಿ 2011 ಜನಗಣತಿಯಂತೆ ಪ.ಜಾತಿಯ 26,617 ಕುಟುಂಬಗಳಿವೆ ಎಂದು ಅಂದಾಜಿಸಲಾಗಿದ್ದು, ಅವುಗಳ ಭೇಟಿ ನೀಡುವ ಗುರಿ ಹೊಂದಲಾಗಿತ್ತು. ಮೇ 27ಕ್ಕೆ ಮನೆಗಳ ಭೇಟಿ ಪೂರ್ಣಗೊಂಡಿದ್ದು, 28,964 ಪ.ಜಾತಿಯ ಮನೆಗಳನ್ನು ಗುರುತಿಸಿ ಸಮೀಕ್ಷೆ ನಡೆಸಲಾಗಿದೆ. ಮನೆ ಗಣತಿಯಲ್ಲಿ ಶೇ.108.82 ಸಾಧನೆ ಆಗಿದೆ. 1,16,781 ಪರಿಶಿಷ್ಟ ಜಾತಿಯ ಜನಸಂಖ್ಯೆ ಜಿಲ್ಲೆಯಲ್ಲಿದೆ ಎಂದು ಅಂದಾಜಿಸಲಾಗಿತ್ತು. ಆದರೆ, 1,17,156 ಪ.ಜಾತಿಯ ಜನರನ್ನು ಸಮೀಕ್ಷೆಗೆ ಒಳಪಡಿಸಿದ್ದು ಶೇ.100.32 ಸಾಧನೆ ಮಾಡಲಾಗಿದೆ. ಮೇ 30 ರಿಂದ ಜೂನ್ 1 ರವರೆಗೆ ಶಿಬಿರಗಳನ್ನು ಮರು ನಿಗದಿ ಮಾಡಲಾಗಿದೆ. ಅಲ್ಲಿ, ಪ್ರತಿ ಗ್ರಾಮ ಹಂತದಲ್ಲಿ ಸಭೆಗಳನ್ನು ಮಾಡಿ, ಪರಿಶಿಷ್ಟ ಜಾತಿಯ ಜನಸಂಖ್ಯೆಯನ್ನು ಖಚಿತ ಮಾಡಿಕೊಳ್ಳಲಾಗುವುದು. ಈ ದತ್ತಾಂಶ ಆಧರಿಸಿ, ಒಳ ಮೀಸಲಾತಿ ನಿಗದಿ ಮಾಡಲು ಸರ್ಕಾರಕ್ಕೆ ಅನುಕೂಲವಾಗಲಿದೆ. ಜಿಲ್ಲೆಯಲ್ಲಿ ಈ ಸಮೀಕ್ಷೆಗಾಗಿ 1,445 ಗಣತಿದಾರರು, 156 ಕಾಯ್ದಿರಿಸಿದ ಗಣತಿದಾರರು, 144 ಮೇಲ್ವಿಚಾರಕರು ಮತ್ತು 19 ಕಾಯ್ದಿರಿಸಿದ ಮೇಲ್ವಿಚಾರಕರನ್ನು ನೇಮಕ ಮಾಡಲಾಗಿತ್ತು. ಇವರಿಗೆ ಅಗತ್ಯ ತರಬೇತಿ ನೀಡಲು 4 ಜಿಲ್ಲಾ ಮಾಸ್ಟರ್ ಟ್ರೇನ್‌ನರ್, 57 ತಾಲೂಕು ಮಾಸ್ಟರ್ ಟ್ರೇನರ್‌ಗಳನ್ನು ನಿಯೋಜಿಸಿದ್ದು, ಸಮೀಕ್ಷೆ ಸಂದರ್ಭದಲ್ಲಿ ಕಂಡು ಬರುವ ತಾಂತ್ರಿಕ ಸಮಸ್ಯೆಗಳನ್ನು ಬಗೆಹರಿಸಲು ಒಬ್ಬ ತಾಂತ್ರಿಕ ಸಮಾಲೋಚಕರನ್ನು ನೇಮಿಸಲಾಗಿತ್ತು.

ಯಾವ ಕ್ಷೇತ್ರದಲ್ಲಿ ಎಷ್ಟು ಎಸ್‌ಸಿ ಜನಸಂಖ್ಯೆ

ವಿಧಾನಸಭಾ ಕ್ಷೇತ್ರ          ಪರಿಶಿಷ್ಟ ಜಾತಿ ಕುಟುಂಬಗಳ ಸಂಖ್ಯೆ                  ಪರಿಶಿಷ್ಟ ಜಾತಿಯ ಜನಸಂಖ್ಯೆ

  1. ಹಳಿಯಾಳ                                          5,369                                                         20,462
  2. ಕಾರವಾರ                                           3,576                                                         14,039
  3. ಕುಮಟಾ                                             3,310                                                         13,095
  4. ಭಟ್ಕಳ                                                4,398                                                         20,195
  5. ಶಿರಸಿ                                                  4,640                                                        19,020
  6. ಯಲ್ಲಾಪುರ                                          7,671                                                         30,345 ಒಟ್ಟು                                                28,964                                                      1,17,156

ಸಮೀಕ್ಷಾ ಪ್ರಶ್ನಾವಳಿಯಲ್ಲಿ 42 ಪ್ರಶ್ನೆಗಳಿದ್ದು, ಪ.ಜಾತಿಯ ವ್ಯಕ್ತಿಗಳ ಕೌಟುಂಬಿಕ, ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಮತ್ತು ಔದ್ಯೋಗಿಕ ವಿಷಯಗಳನ್ನು ಒಳಗೊಂಡಿದೆ. ಜಿಲ್ಲೆಯ ಯಾವುದೇ ಪ.ಜಾತಿಯ ಕುಟುಂಬ ಈ ಸಮೀಕ್ಷೆಯಿಂದ ವಂಚಿತವಾಗದಂತೆ ಎಚ್ಚರ ವಹಿಸಲಾಗುವುದು. ಗಣತಿದಾರರು ರಜೆ ದಿನಗಳಲ್ಲಿಯು ಕೂಡಾ ಉತ್ತಮವಾಗಿ ಕಾರ್ಯನಿರ್ವಹಿಸಿದ್ದಾರೆ. ವೈ.ಕೆ.ಉಮೇಶ್ ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net