ಎಸ್ಸಿಗೆ ಕಾಟಿಕ್ ಸಮುದಾಯ ಸೇರಿಸಲು ಆಗ್ರಹ: ಹೊಸಪೇಟೆಯಲ್ಲಿ ಶಿರಸ್ತೇದಾರ್‌ಗೆ ಮುಖಂಡರ ಮನವಿ

Hospet Katik Community Appeal fo SC
ಹೊಸಪೇಟೆಯಲ್ಲಿ ತಾಲೂಕು ಕಚೇರಿ ಶಿರಸ್ತೇದಾರ್ ಶ್ರೀಧರಗೆ ಕಾಟಿಕ್ ಸಮುದಾಯದ ಮುಖಂಡರು ಶನಿವಾರ ಮನವಿ ಸಲ್ಲಿಸಿದರು.
Published on

ಹೊಸಪೇಟೆ: ಪರಿಶಿಷ್ಟ ಜಾತಿಗೆ ಸಮುದಾಯ ಸೇರಿಸಬೇಕೆಂದು ಆಗ್ರಹಿಸಿ ನಗರದ ಸೂರ್ಯವಂಶ ಕ್ಷತ್ರೀಯ ಕಾಟಿಕ್ ಸಮುದಾಯದ ಮುಖಂಡರು ಶನಿವಾರ ತಾಲೂಕು ಕಚೇರಿ ಶಿರಸ್ತೇದಾರ್ ಶ್ರೀಧರಗೆ ಮನವಿ ಸಲ್ಲಿಸಿದರು.

ಸಮುದಾಯದ ಅಧ್ಯಕ್ಷ ಕೆ.ಗೋಪಾಲರಾವ್ ಮಾತನಾಡಿ, ಕುವೆಂಪು ವಿಶ್ವವಿದ್ಯಾಲಯದ ಪ್ರೊ.ಎಂ.ಗುರುಲಿಂಗಯ್ಯನವರು ಕುಲಶಾಸ್ತ್ರೀಯ ಅಧ್ಯಯನ ನಡೆಸಿ ಸರ್ಕಾರಕ್ಕೆ ಸಲ್ಲಿಸಿರುವ ವರದಿಯನ್ನು ಯಥಾವತ್ತಾಗಿ ಜಾರಿಗೊಳಿಸಬೇಕು. ಸೂರ್ಯವಂಶ ಕ್ಷತ್ರೀಯ ಕಲಾಲ, ಕಾಟಿಕ್, ಕಟುಕ್, ಸೇರೆಗಾರ, ಅರೇ ಕಾಟಿಕಲು, ಕಲಾಲ ಕಾಟಿಕ್, ಕಸಾಬ, ಕಸಾಯಿ, ಮರಾಠಿ ಹೆಸರುಗಳಿಂದ ಗುರುತಿಸಲಾಗುತ್ತಿದೆ. ಕುಲಕಸುಬು ಮಾಂಸ ಮಾರಾಟ ಮಾಡುತ್ತಿದ್ದು, ಅಶುಚಿತ, ಅಸ್ಪರ್ಶ ಬದುಕು ಸಾಗಿಸುತ್ತಿದ್ದೇವೆ. ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಹಾಗೂ ರಾಜಕೀಯವಾಗಿ ಹಿಂದುಳಿದಿದ್ದೇವೆ. ದೇಶದ 13 ರಾಜ್ಯಗಳಲ್ಲಿ ಮತ್ತು ಕೇಂದ್ರಾಡಳಿತ ರಾಜ್ಯವೊಂದರಲ್ಲಿ ಸಮುದಾಯವನ್ನು ಎಸ್ಸಿ ಪಟ್ಟಿಗೆ ಸೇರಿಸಲಾಗಿದೆ.

ಕೇಂದ್ರ ಸರ್ಕಾರಕ್ಕೆ ರಾಜ್ಯ ಸರ್ಕಾರ ಶಿಫಾರಸು ಕಳಿಸಿ, ಸಾಮಾಜಿಕ ನ್ಯಾಯ ಹಾಗೂ ಸೌಲಭ್ಯ ಕಲ್ಪಿಸಬೇಕು ಎಂದು ಆಗ್ರಹಿಸಿದರು. ಮುಖಂಡರಾದ ತಾಯಪ್ಪ ಕಲಾಲ್, ಜಾನಕಿರಾಮ್, ಚಂದ್ರಮೋಹನ, ನಾಗೇಶ, ರಾಮಚಂದ್ರರಾವ್, ತಾರಾನಾಥ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net