

ಚಿತ್ರದುರ್ಗ: ರಾಜ್ಯದ 224 ವಿಧಾನಸಭಾ ಕ್ಷೇತ್ರಗಳ ಪೈಕಿ 173 ಕ್ಷೇತ್ರಗಳ ಚುನಾವಣಾ ಫಲಿತಾಂಶದಲ್ಲಿ ಪರಿಶಿಷ್ಟ ಜಾತಿ,ಪರಿಶಿಷ್ಟ ಪಂಗಡದ ಸಮು ದಾಯಗಳ ಪಾತ್ರ ನಿರ್ಣಾಯಕವಾಗಿರಲಿದೆ ಎಂದು ಮಾಜಿ ಡಿಸಿಎಂ ಡಾ.ಜಿ.ಪರಮೇಶ್ವರ ಹೇಳಿದರು. ಪಕ್ಷದ ಜಿಲ್ಲಾ ಕಚೇರಿಯಲ್ಲಿ ಶುಕ್ರ ವಾರ ಚಿತ್ರದುರ್ಗದಲ್ಲಿ ಕಾಂಗ್ರೆಸ್ ಏಕತಾ ಸಮಾವೇಶದ ಅಂಗವಾಗಿ ಚಿತ್ರದುರ್ಗ ವಿಧಾನಸಭಾ ಕ್ಷೇತ್ರ ನಗರ ಮತ್ತು ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್ ಕಾರ‌್ಯಕರ್ತರ ಸಭೆಯಲ್ಲಿ ಮಾತನಾಡಿ,ಹಿಂದಿದ್ದ ಬ್ರಿಟಿಷರ ಒಡೆದಾಳುವ ನೀತಿಯನ್ನು ಈಗ ಬಿಜೆಪಿ ಪಾಲಿಸುತ್ತಿದೆ. ಇದನ್ನು ಪರಿ ಶಿಷ್ಟ ಜಾತಿ,ಪಂಗಡದವರಿಗೆ ತಿಳಿಸುವ ಉದ್ದೇಶದಿಂದ ದುರ್ಗದಲ್ಲಿ ಜ.8ರಂದು ರಾಜ್ಯಮಟ್ಟದ ಎಸ್‌ಸಿ,ಎಸ್‌ಟಿ ಏಕತಾ ಸಮಾವೇಶ ಆ ಯೋಜಿಸಲಾಗಿದೆ. ಇದನ್ನು ಯಶಸ್ವಿಗೊಳಿಸ ಬೇಕೆಂದು ಕಾರ‌್ಯಕರ್ತರಿಗೆ ಮನವಿ ಮಾಡಿದರು.
ಮಾಜಿ ಸಚಿವ ಶಿವರಾಜ್ ತಂಗಡಗಿ ಮಾತನಾಡಿ,ಈ ಸಮಾವೇಶ ವಿಧಾನಸಭಾ ಚುನಾವಣೆ ದಿಕ್ಸೂಚಿಯಾಗಬೇಕು. ಚಿತ್ರದುರ್ಗದಿಂ ದ ರಣಕಹಳೆ ಮೊಳಗಿಸಬೇಕಿದೆ ಎಂದರು. ಮಾಜಿ ಸಂಸದ ಬಿ.ಎನ್.ಚಂದ್ರಪ್ಪ ಮಾತನಾಡಿ,ಈ ಸಮಾವೇಶ ಬಿಜೆಪಿಯ ನಡುಕಕ್ಕೆ ಕಾರಣ ವಾಗಬೇಕೆಂದರು.
ಮಾಜಿ ಸಚಿವ ಕೆ.ಶಿವಮೂರ್ತಿನಾಯ್ಕ,ವಿಧಾನಪರಿಷತ್ ಸದಸ್ಯ ಮಾಜಿ ಸದಸ್ಯ ರಘುಆಚಾರ್,ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಂ.ಕೆ. ತಾ ಜ್‌ಪೀರ್,ಹನುಮಲಿ ಷಣ್ಮುಖಪ್ಪ,ರಾಮಪ್ಪ ನೇರ್ಲಗುಂಟೆ,ಬಿ.ಯೋಗೇಶ್‌ಬಾಬು,ಒ.ಶಂಕರ್,ಹಾಲಸ್ವಾಮಿ,ಡಾ.ಬಿ.ತಿಪ್ಪೇಸ್ವಾಮಿ.ಅಂಜಿನಪ್ಪ,ಲಕ್ಷ್ಮೀ ಕಾಂತ್ ಇತರರು ಇದ್ದರು.