ಕಲಬುರಗಿ ಎಸ್‌ಬಿಆರ್ ಶಾಲೆ ವಿದ್ಯಾರ್ಥಿಗಳ ಸಾಧನೆ : ತಾಲೂಕು ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆ

IMG-20230819-WA0058
Published on


ವಿಜಯವಾಣಿ ಸುದ್ದಿಜಾಲ ಕಲಬುರಗಿ
ನಗರದ ಶರಣಬಸವೇಶ್ವರ ವಸತಿ ಪಬ್ಲಿಕ್ ಶಾಲೆಯ ವಿದ್ಯಾರ್ಥಿಗಳು ಹೋಬಳಿ ಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಿ ಉತ್ತಮ ಸಾಧನೆ ಮಾಡಿ ತಾಲೂಕು ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾರೆ.
ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ನಗರದ ಚಂದ್ರಶೇಖರ ಪಾಟೀಲ್ ಕ್ರೀಡಾಂಗಣದಲ್ಲಿ ಇತ್ತೀಚಿಗೆ ಹೋಬಳಿ ಮಟ್ಟದ ಕ್ರೀಡಾಕೂಟ ಆಯೋಜಿಸಲಾಗಿತ್ತು.
ಆಯ್ಕೆಯಾದ ತಂಡಗಳು
ಥ್ರೊಬಾಲ್ ಮತ್ತು ವಾಲಿಬಾಲ್ ಬಾಲಕರ ತಂಡ,  ಕಬ್ಬಡ್ಡಿ ಮತ್ತು ಥ್ರೊಬಾಲ್ ಬಾಲಕಿಯರ ತಂಡ, ಚಕ್ರ ಎಸೆತ ೪)(೧೦೦ ಮಿ.ರಿಲೆ ಬಾಲಕಿಯರ ತಂಡ,  ೬೦೦ ಮೀ. ಓಟದಲ್ಲಿ ಬಾಲಕರ ತಂಡ ಸಾಧನೆ ಮಾಡಿವೆ.
ಸಂಸ್ಥೆಯ ಅಧ್ಯಕ್ಷ ಪೂಜ್ಯ ಡಾ.ಶರಣಬಸವಪ್ಪ ಅಪ್ಪ, ಮಾತೋಶ್ರೀ ಡಾ.ದಾಕ್ಷಾಯಿಣಿ ಅವ್ವಾಜಿ ಹಾಗೂ ಮಹಾದಾಸೋಹ ೯ನೇ ಪೀಠಾಧಿಪತಿ ಪೂಜ್ಯ ದೊಡ್ಡಪ್ಪ ಅಪ್ಪ ಹರ್ಷ ವ್ಯಕ್ತಪಡಿಸಿದ್ದಾರೆ. ಶಾಲೆಯ ಪ್ರಾಚಾರ್ಯಎನ್.ಎಸ್. ದೇವರಕಲ್ ಕ್ರೀಡಾಪಟುಗಳನ್ನು ಅಭಿನಂದಿಸಿದ್ದಾರೆ. ಶಾಲೆಯ ಮೇಲ್ವಿಚಾರಕಿ ಶಾರದಾ ರಾಂಪೂರೆ, ಶಂಭುಲಿAಗ ದಿಗ್ಗಾಂವ್, ನಿರ್ಮಲಾ ಹುಲಿ ಹಾಗೂ ದೈಹಿಕ ಶಿಕ್ಷಕರು ಹರ್ಷ ವ್ಯಕ್ತಪಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net