

ಅರಕಲಗೂಡು: ಭಾರತೀಯ ಸ್ಟೇಟ್ ಬ್ಯಾಂಕ್(ಎಸ್‌ಬಿಐ) ವತಿಯಿಂದ ತಾಲೂಕಿನ ನಿಲವಾಗಿಲು ಗ್ರಾಮದಲ್ಲಿ ಮಂಗಳವಾರ ‘ಅನ್ನದಾತ ಮಹೋತ್ಸವ’ ನಡೆಯಿತು.
ರೈತ ದಿನದ ಅಂಗವಾಗಿ ಎಸ್‌ಬಿಐ ವತಿಯಿಂದ ದೇಶಾದ್ಯಂತ ಡಿ.16 ರಿಂದ 23 ವರೆಗೆ ‘ಅನ್ನದಾತ ಮಹೋತ್ಸವ’ ಆಚರಿಸಲಾಗುತ್ತಿದ್ದು, ಬ್ಯಾಂಕ್‌ನ ಅರಕಲಗೂಡು ಶಾಖೆ ವತಿಯಿಂದ ನಿಲವಾಗಿಲು ಗ್ರಾಮದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ರೈತರು ಬ್ಯಾಂಕಿನ ಯೋಜನೆಗಳ ಬಗ್ಗೆ ಅಗತ್ಯ ಮಾಹಿತಿ ಪಡೆದರು.
ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಎಂ.ಎಸ್.ಯೋಗೇಶ್ ಮಾತನಾಡಿ, ಬ್ಯಾಂಕಿನ ಯೋಜನೆಗಳನ್ನು ಬಳಸಿಕೊಂಡು ಹೇಗೆ ಅಭಿವೃದ್ಧಿ ಹೊದಬಹುದು ಎಂದು ರೈತರಿಗೆ ತಿಳಿಸಿದರು. ಜತೆಗೆ ಕೇಂದ್ರ ಸರ್ಕಾರದ ಯೋಜನೆಗಳ ಬಗ್ಗೆಯೂ ಮಾಹಿತಿ ನೀಡಿದರು.
ಬ್ಯಾಂಕಿನ ಪ್ರಾದೇಶಿಕ ವ್ಯವಸ್ಥಾಪಕಿ ಅನುರಾಧಾ ಕಾರ್ಯಕ್ರಮ ಉದ್ಘಾಟಿಸಿದರು. ಶಾಖಾ ವ್ಯವಸ್ಥಾಪಕ ಎನ್.ಅನಿಲ್, ಆರ್‌ಎಂಆರ್‌ಯು ಪುಲಿಕೇಶಿ, ಪ್ರಗತಿಪರ ರೈತರಾದ ಕೃಷ್ಣೇಗೌಡ, ಶಿರಿನ್ ರಂಗಸ್ವಾಮಿ, ಲೋಕೇಶ್, ರಾಮನಾಥಪುರ ಶಂಕರ್ ಇತರರಿದ್ದರು.