ಡಿ.2ರಿಂದ ಎಸ್‌ಬಿಐ ಸಾಲ ಮೇಳ

mng-29nov-sbi
Published on




ಮಂಗಳೂರು : ಸ್ಟೇಟ್ ಬ್ಯಾಂಕ್ ಆ್ ಇಂಡಿಯಾ ಇದರ ವತಿಯಿಂದ ನಗರದ ಬೆಂದೂರ್‌ವೆಲ್‌ನ ಸೈಂಟ್ ಸೆಬಾಸ್ಟಿಯನ್ ಹಾಲ್‌ನಲ್ಲಿ ಡಿ.2 ಮತ್ತು 3ರಂದು ಬೆಳಗ್ಗೆ 10ರಿಂದ ರಾತ್ರಿ 10ರವರೆಗೆ ಎಸ್‌ಬಿಐ ಗೃಹ ಮತ್ತು ಕಾರು ಸಾಲ ಮೇಳ ನಡೆಯಲಿದೆ.
ದೇಶದ ಅತಿ ದೊಡ್ಡ ಬ್ಯಾಂಕ್ ಎನ್ನುವ ಹೆಗ್ಗಳಿಕೆ ಗಳಿಸಿರುವ ಭಾರತೀಯ ಸ್ಟೇಟ್ ಬ್ಯಾಂಕ್ ವಿಭಿನ್ನ ಗ್ರಾಹಕ ಸ್ನೇಹಿ ಸಾಲ ಸೌಲಭ್ಯಗಳನ್ನು
ಜನರಿಗೆ ಪರಿಚಯಿಸಿದೆ. ಇದೀಗ ಮಂಗಳೂರಿನ ಜನರ ಸ್ವಂತ ಮನೆ ಹಾಗೂ ಕಾರು ಖರೀದಿಸುವ ಕನಸು ನನಸಾಗಿಸಲು ಸಾಲ ಮೇಳ ಆಯೋಜಿಸಲಾಗಿದೆ. ಕನಿಷ್ಟ ಬಡ್ಡಿ ದರದಲ್ಲಿ ಸಾಲಸೌಲಭ್ಯ ಪಡೆಯಲು ಅತ್ಯುತ್ತಮ ಅವಕಾಶವೊಂದನ್ನು ರೂಪಿಸಿದೆ ಎಂದು ಎಸ್‌ಬಿಐ ಎಸ್‌ಬಿಐ ಪ್ರಾದೇಶಿಕ ವ್ಯವಸ್ಥಾಪಕ ಉದಯ ಕುಮಾರ್ ಬಿ.ವಿ.ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
40ಕ್ಕೂ ಹೆಚ್ಚಿನ ಬಿಲ್ಡರ್ಸ್‌ ಹಾಗೂ ಕಾರು ಡೀಲರ್ಸ್‌ಗಳು ಭಾಗವಹಿಸಲಿದ್ದಾರೆ. ಆನ್‌ಸ್ಪಾಟ್ ಬುಕ್ಕಿಂಗ್ ಮೇಲೆ ವಿಶೇಷ ಕೊಡುಗೆ, ಮೇಳದ ಅಂಗವಾಗಿ ಮಕ್ಕಳಿಗಾಗಿ ಸ್ಟಾಪ್ ಗೇಮ್ಸ್ ಮತ್ತು ಆಕರ್ಷಕ ಬಹುಮಾನ, ಪುಟಾಣಿಗಳಿಗಾಗಿ ಡಿ.3ರಂದು ಬೆಳಗ್ಗೆ 11ಕ್ಕೆ
ಚಿತ್ರಕಲಾ ಸ್ಪರ್ಧೆ ಆಯೋಜಿಸಲಾಗಿದೆ. ಗೃಹ ಸಾಲದ ಜೊತೆಗೆ ಕಾರು ಸಾಲ, ಚಿನ್ನದ ಸಾಲ, ಶೈಕ್ಷಣಿಕ ಸಾಲ, ಎಸ್‌ಎಮ್‌ಇ ಸಾಲ, ವೈಯಕ್ತಿಕ ಸಾಲ, ಪಿಂಚಣಿ ಸಾಲ ಇತ್ಯಾದಿ ಸಾಲ ಸೌಲಭ್ಯಗಳಿಗೆ ಇರುವ ಅರ್ಹತಾ ಮಾನದಂಡಗಳ ಬಗ್ಗೆ ಮಾಹಿತಿ ನೀಡಲಾಗುವುದು ಎಂದು ಅವರು ತಿಳಿಸಿದರು.
ಬ್ಯಾಂಕಿನ ಅಧಿಕಾರಿಗಳಾದ ಬಿನ್ನಿ ಜಾನ್ ಮ್ಯಾಥ್ಯೂ, ದಶರಥ ರಾಥೋಡ್ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net