

ಕೆ.ಎಂ.ದೊಡ್ಡಿ : ಇಲ್ಲಿನ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಶಾಖೆಯಲ್ಲಿ ಗ್ರಾಹಕರ ಮತ್ತು ರೈತರ ಸೌರ್ಹಾದಯುತ ಸಭೆ ಬುಧವಾರ ಜರುಗಿತು.
ಶಾಖಾ ವ್ಯವಸ್ಥಾಪಕಿ ಎಸ್. ತಾಯಮ್ಮಣಿ ಮಾತನಾಡಿ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ದೇಶದ ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಮುಂಚೂಣಿಯಲ್ಲಿದ್ದು,ಗ್ರಾಹಕರ ವಿಶ್ವಾಸಗಳಿಸಿದೆ. ಹಲವು ಬ್ಯಾಂಕ್‌ಗಳು ಸಹ ನಮ್ಮ ಬ್ಯಾಂಕ್ ಜತೆ ಒಪ್ಪಂದ ಮಾಡಿಕೊಂಡು ವ್ಯವಹಾರ ನಡೆಸುತ್ತಿರುವುದು ಬ್ಯಾಂಕ್‌ನ ಉತ್ತಮ ವ್ಯವಹಾರಕ್ಕೆ ಹಿಡಿದ ಕೈಗನ್ನಡಿ ಎಂದರು.
ಬ್ಯಾಂಕ್ ರೈತ ಮತ್ತು ಗ್ರಾಹಕರ ಸ್ನೇಹಿಯಾಗಿದ್ದು ರೈತರಿಗೆ ಕೃಷಿ, ಗೃಹ ಮತ್ತು ಇತರ ಸಾಲಗಳನ್ನು ನೀಡುತಿದೆ. ಮುದ್ರಾ ಯೋಜನೆ, ಪಿಎಂಇಜಿಬಿ, ವಾಹನ ಮತ್ತು ಚಿನ್ನಾಭರಣ ಸಾಲ ಸೇರಿದಂತೆ ವಿವಿಧ ಸಾಲಗಳನ್ನು ನೀಡುತ್ತ ಗ್ರಾಹಕರ ವಿಶ್ವಾಸಗಳಿಸಿದೆ ಎಂದು ವಿವರಿಸಿದರು.
ರೈತ ಮುಖಂಡ ಅಣ್ಣೂರು ಮಹೇಂದ್ರ ಮಾತನಾಡಿ, ರೈತರು ಆರ್ಥಿಕವಾಗಿ ಸಬಲರಾಗಲು ಬೆಳೆ ಸಾಲ ಮತ್ತು ವಿವಿಧ ಸಾಲಗಳನ್ನು ನೀಡುತ್ತಿದ್ದು, ಸಾಲ ಮಂಜೂರಿಗೆ ಕೆಲವು ನಿಯಮಗಳನ್ನು ಸಡಿಲಗೊಳಿಸುವ ಮೂಲಕ ರೈತರಿಗೆ ನೆರವಾಗಿ ಎಂದು ಕೋರಿದರು.
ಹೊಸ ವರ್ಷದ ಆರಂಭದಲ್ಲಿ ರೈತರಿಗೆ ವಿಶೇಷ ಯೋಜನೆಗಳನ್ನು ಬ್ಯಾಂಕ್‌ನ ಆಡಳಿತ ಮಂಡಳಿ ನೀಡುವ ಮೂಲಕ ರೈತ ಸ್ನೇಹಿ ಬ್ಯಾಂಕ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿ ಎಂದು ಸಲಹೆ ನೀಡಿದರು.
ಉಪ ಶಾಖಾ ವ್ಯವಸ್ಥಾಪಕ ಶಾಂತಿ, ಸಿಬ್ಬಂದಿ ಡಿ. ರಾಮ್ ಗೋಪಾಲ್, ಕೆ.ಶಿವು, ಬಿ.ಆರ್. ರಕ್ಷಿತಾ, ಎಂ. ಸಹನಾ, ನಂಜುಂಡಸ್ವಾಮಿ, ರೈತ ಮುಖಮಡರಾದ ಕೆ.ಪಿ.ದೊಡ್ಡಿ ಪುಟ್ಟಸ್ವಾಮಿ, ಕೆ.ಶೆಟ್ಟಹಳ್ಳಿ ಚಿಕ್ಕಮರೀಗೌಡ, ಮಣಿಗೆರೆ ರಾಮಣ್ಣ, ಕ್ಯಾತಘಟ್ಟ ಅಂದಾನಿ, ಬೊಪ್ಪಸಮುದ್ರ ಮಲ್ಲೇಶ್ ಸೇರಿದಂತೆ ಮತ್ತಿತರಿದ್ದರು.