ಭುವನೇಶ್ವರಿ ವಿಶೇಷ ಅಗತ್ಯವುಳ್ಳ ಮಕ್ಕಳ ಶಾಲೆಗೆ ನೀರು ಶುದ್ಧಿಕರಣ ಯಂತ್ರ ದೇಣಿಗೆ

03GDG02
Published on

ವಿಜಯವಾಣಿ ಸುದ್ದಿಜಾಲ ಗದಗ

ನಗರದ ಭುವನೇಶ್ವರಿ ವಿಶೇಷ ಅಗತ್ಯವುಳ್ಳ ಮಕ್ಕಳ ಶಾಲೆಗೆ ನಗರದ ಎಪಿಎಂಸಿಯಲ್ಲಿರುವ ಎಸ್​ಬಿಐ ಬ್ಯಾಂಕ ಸಿಬ್ಬಂದಿಗಳು ಶುಕ್ರವಾರ ನೀರು ಶುದ್ಧಿಕರಣ ಯಂತ್ರ ದೇಣಿಗೆ ನೀಡಿದರು.

ದೇಣಿಗೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಬ್ಯಾಂಕ್​ ಮ್ಯಾನೇಜರ್​ ಅರವಿಂದ ದಬೋಲೆ, ವಿಶೇಷ ಮಕ್ಕಳಿಗೆ ಸೂಕ್ತವಾದ ಅವಕಾಶಗಳನ್ನು ಕಲ್ಪಿಸಿ, ಅವರವರ ಸಾಮರ್ಥ್ಯಕ್ಕೆ ತಕ್ಕಂತೆ ತರಬೇತಿ ನೀಡಿ, ಸಮಾಜದ ಮುಖ್ಯವಾಹಿನಿಗೆ ತರುತ್ತಿರುವುದರೊಂದಿಗೆ ಸಂಸ್ಕಾರವನ್ನು ನೀಡುತ್ತಿರುವ ಸಂಸ್ಥೆಯ ಸೇವಾ ಕಾರ್ಯ ಶ್ಲಾನೀಯ. ಇಂದು ನಾವೆಲ್ಲರೂ ಸೇರಿ ಸಂಸ್ಥೆಗೆ ನೀರು ಶುದ್ಧಿಕರಣ ಯಂತ್ರವನ್ನು ದೇಣಿಗೆ ನೀಡಿದ್ದೇವೆ. ಆದರೆ ಈ ವಿಶೇಷ ಮಕ್ಕಳಿಗೆ ನಿಸ್ವಾರ್ಥವಾಗಿ ಸೇವೆಯನ್ನು ಮಾಡುತ್ತಿರುವವರಿಗೆ ಸಂಸ್ಥೆಯೂ ಎಂದಿಗೂ ಋಣಿ ಆಗಿರುತ್ತದೆ ಎಂದು ಹೇಳಿದರು.

ಬ್ಯಾಂಕ್​ ಸಿಬ್ಬಂದಿ ವಿಜಯಲಕ್ಷಿ$್ಮ ಅಂಗಡಿ ಮಾತನಾಡಿ, ದೇವರ ಸ್ವರೂಪಿಗಳಾದ ದಿವ್ಯಾಂಗ ವಿಶೇಷ ಚೇತನರ ಸೇವೆಯನ್ನು ಮಾಡುವುದರ ಮೂಲಕ ಸಮಾಜಕ್ಕೆ ಅತ್ಯಮೂಲ್ಯವಾದ ಕೊಡುಗೆ ಕೊಡುತ್ತಿರುವ ಸಂಸ್ಥೆಯ ಕಾರ್ಯ ಶ್ಲಾನೀಯ. ಅತ್ಯಂತ ಕಷ್ಟಕರವಾದ ಸೇವಾ ಕಾರ್ಯವನ್ನು ಈ ಸಂಸ್ಥೆಯು ಮಾಡುತ್ತಿದ್ದು, ವಿಶ್ವ ಕಲ್ಯಾಣ ಸಂಸ್ಥೆಯು ಸಮಾಜಕ್ಕೆ ಸಮರ್ಪಣಾ ಭಾವದಿಂದ ಸೇವಾ ಕಾರ್ಯಗಳನ್ನು ಮಾಡುತ್ತಿದೆ ಎಂದರು.

ಕಾರ್ಯಕ್ರಮದ ಅಧ್ಯತೆ ವಹಿಸಿ ಮಾತನಾಡಿ ಸಂಸ್ಥೆಯ ಅಧ್ಯ ಮಂಜುನಾಥ ಹದ್ದಣ್ಣವರವರ, ವಿಶೇಷ ಮಕ್ಕಳಿಗೆ ಸೂಕ್ತವಾದ ಅವಕಾಶಗಳನ್ನು ನೀಡಿ, ಸೂಪ್ತವಾದ ಕೌಶಲ್ಯಗಳನ್ನು ಹೊರತರುವ ಪ್ರಾಮಾಣಿಕ ಪ್ರಯತ್ನವನ್ನು ನಾಗರಿಕರು ಮಾಡಬೇಕಿದೆ. ಇಂದು ವಿಶೇಷ ಶಾಲೆಗೆ ವಿಶೇಷ ಮಕ್ಕಳು ಕೂಡಾ ಶುದ್ಧವಾದ ನೀರನ್ನು ಕುಡಿಯಬೇಕೆಂದು ನೀರು ಶುದ್ದಿಕರಣ ಯಂತ್ರವನ್ನು ಎಸ್​ಬಿಐ ಬ್ಯಾಂಕ ಸಿಬ್ಬಂದಿಗಳು ದೇಣಿಗೆ ನೀಡಿದ್ದಾರೆ. ದೇವರ ಸ್ವರೂಪಿಗಳಾದ ವಿಶೇಷ ಮಕ್ಕಳಿಗೆ ಮಹತ್ವ ರ್ಪೂಣವಾದ ಸೇವೆ ಮಾಡುವ ಎಲ್ಲರಿಗೂ ದೇವರು ಒಳ್ಳೆಯದನ್ನೇ ಮಾಡುತ್ತಾನೆ ಎಂದು ಹೇಳಿದರು.

ಕುಮಾರ ಲಮಾಣಿ, ಅರುಣ ಗೋವಿಂದ, ವ್ನಿಶ, ವಿವೇಕ ಜಿ, ಸಂದೀಪ ಕಟಗಿ, ರಾಮಾ ಕೋಟೇಶ್ವರ, ಅಮರೇಶ್ವರ ಕೆ. ಮಂಜುನಾಥ ಆಸಂಗಿ, ಶಂಕರಗೌಡ ಪಾಟೀಲ, ಶಾಂತಮ್ಮಾ ಹೂಗಾರ ಹಾಗೂ ವಿಶೇಷ ಮಕ್ಕಳು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net