

ವಿಜಯವಾಣಿ ಸುದ್ದಿಜಾಲ ಆನೇಕಲ್
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಆನೇಕಲ್ ಶಾಖೆಯಲ್ಲಿ ಚಲನ್‌ಗಳನ್ನು ಕನ್ನಡದಲ್ಲಿ ಮದ್ರಿಸಿರುವುದನ್ನು ಸ್ವಾಗತಿಸಿ ಕನ್ನಡ ಸಾಹಿತ್ಯ ಪರಿಷತ್ ಹಾಗೂ ಕನ್ನಡ ಪರ ಸಂಘಟನೆಗಳು ಬ್ಯಾಂಕಿನ ಎದುರು ವಿಜಯೋತ್ಸವ ಆಚರಿಸಿದವು.
ಕನ್ನಡದ ಶ್ರೇಷ್ಠತೆಯನ್ನು ಎಸ್‌ಬಿಐ ಶಾಖೆ ಎತ್ತಿ ಹಿಡಿದಿದೆ. ಹಲವು ಶಾಖೆಗಳಲ್ಲಿನ ಚಲನ್‌ಗಳು ಹಿಂದಿ ಹಾಗೂ ಇಂಗ್ಲಿಷ್‌ನಲ್ಲಿದ್ದ ಕಾರಣ ಹಲವರಿಗೆ ತೊಂದರೆಯಾಗಿತ್ತು ಎಂದು ಹಿರಿಯ ಪತ್ರಕರ್ತ ರವಿ ಶಾಸ್ತ್ರಿ ಹೇಳಿದರು.
ತಾಲೂಕು ಕಸಾಪ ಅಧ್ಯಕ್ಷ ಆದೂರು ಪ್ರಕಾಶ್ ಮಾತನಾಡಿ, ಹಿಂದಿ, ಇಂಗ್ಲಿಷ್ ಚಲನ್‌ಗಳಿಂದ ಉಂಟಾಗುತ್ತಿದ್ದ ಸಮಸ್ಯೆ ಬಗ್ಗೆ ಮನವರಿಕೆ ಮಾಡಿಕೊಟ್ಟ ಹಿನ್ನೆಲೆಯಲ್ಲಿ ಸಕಾರಾತ್ಮಕವಾಗಿ ಸ್ಪಂದಿಸಿ ಕನ್ನಡದಲ್ಲಿ ಮುದ್ರಿಸಿರುವುದು ಸಂತಸದ ವಿಚಾರ ಎಂದರು.
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಬ್ಯಾಂಕಿನ ವ್ಯವಸ್ಥಾಪಕ ಗೋಕುಲ್ ಮಾತನಾಡಿ, ಕಸಾಪ ಹಾಗೂ ಹಲವಾರು ಕನ್ನಡಪರ ಸಂಘಟನೆಗಳ ಮುಖಂಡರು ತಾಲೂಕು ಕಚೇರಿಯಲ್ಲಿ ತಹಸೀಲ್ದಾರರ ನೇತೃತ್ವದಲ್ಲಿ ಸಭೆ ಕರೆದು ಕನ್ನಡಕ್ಕೆ ಆದ್ಯತೆ ನೀಡಬೇಕು ಎಂದು ಮನವಿ ಮಾಡಿದ್ದರು. ಈ ಬಗ್ಗೆ ಚರ್ಚೆ ಮಾಡಿ ಶಾಖೆಯಲ್ಲಿ ಕನ್ನಡದಲ್ಲೇ ಚಲನ್‌ಗಳನ್ನು ಮುದ್ರಿಸಿ ನೀಡಲಾಗುತ್ತಿದೆ ಎಂದರು.
ವಿಜಯವಾಣಿ ವರದಿಗಾರ ನವೀನ್ ಚಂದ್ರ ಶೆಟ್ಟಿ, ಪತ್ರಕರ್ತರಾದ ಸೋಲೂರು ಮಂಜು, ಅಂಬರೀಶ್, ಬಿಎಸ್‌ಪಿ ಮುಖಂಡ ಯಲ್ಲಪ್ಪ, ಕನ್ನಡಪರ ಹೋರಾಟಗಾರರಾದ ದೇವರಾಜ್, ರಾಜಶೇಖರ್, ಟಿ.ನಾಗರಾಜ್, ಮಂಜುನಾಥ್ ರೆಡ್ಡಿ, ಚಿಕ್ಕ ಹಾಗಡೆ ಶ್ರೀನಿವಾಸ್, ಅರೇಹಳ್ಳಿ ಮಂಜು, ವಿಶ್ವನಾಥ್, ಚಂಪಕ ಧಾಮರಾಜು, ಸಮಂದೂರ್ ಮರಿಯಪ್ಪ, ಅಥಾವುಲ್ಲಾ, ಸುಬ್ರಮಣಿ, ಡೋಲ್ ಮಂಜು, ಚಿಕ್ಕಹಾಗಡೆ ಯಲ್ಲಪ್ಪ, ಕಸಾಪ ಪದಾಧಿಕಾರಿಗಳಾದ ಮಿಲಿಟರಿ ಕುಮಾರ್, ಅಪ್ಸರ್ ಆಲಿಖಾನ್, ಡಾ.ನಾಗರಾಜ್, ಚುಟುಕು ಶಂಕರ್, ವರದರಾಜು, ಬೀದಿಬದಿ ವ್ಯಾಪಾರಿಗಳ ಸಂಘದ ವೇಣುಗೋಪಾಲ್, ನಾರಾಯಣ್, ವಿಷ್ಣುವರ್ಧನ್, ರಾಮಚಂದ್ರ, ವರದರಾಜು, ತೆಲಗರಹಳ್ಳಿ ಮಂಜು, ಟಿಎಸ್ ಮುನಿರಾಜು, ಕನಮನಹಳ್ಳಿ ಕುಮಾರ್, ಮುರುಳಿ, ಹರೀಶ್ ಹಾಜರಿದ್ದರು.