ಶಹಾಬಾದ್​ ವಲಯದಲ್ಲಿ ಅಕ್ರಮ ಚಟುವಟಿಕೆಗೆ ಕಡಿವಾಣ: ಶಂಕರಗೌಡ ಪಾಟೀಲ್​

h12-Lxr6 Shankargouda Patil DYSP
Published on

ಚಿತ್ತಾಪುರ: ಶಹಾಬಾದ್ ವಲಯ ವ್ಯಾಪ್ತಿಯಲ್ಲಿ ಚಿತ್ತಾಪುರ, ವಾಡಿ, ಮಾಡಬೂಳ ಪೊಲೀಸ್ ಠಾಣೆಗಳಿದ್ದು, ಅಪರಾಧ ಚಟುವಟಿಕೆ ನಿಯಂತ್ರಣಕ್ಕೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ. ರಾತ್ರಿ ಗಸ್ತು ಹೆಚ್ಚಿಸುವ ಮೂಲಕ ಆಕ್ರಮ ಚಟವಟಿಕೆಗಳ ಮೇಲೆ ನಿಗಾ ವಹಿಸಬೇಕು ಎಂದು ಶಹಾಬಾದ್ ವಲಯ ಡಿವೈಎಸ್‌ಪಿ ಶಂಕರಗೌಡ ಪಾಟೀಲ್ ಸೂಚನೆ ನೀಡಿದರು.

ವಲಯ ವ್ಯಾಪ್ತಿಯಲ್ಲಿ ಜನೆವರಿಯಿಂದ ಇಲ್ಲಿವರೆಗೂ ಅಕ್ರಮ ಮರಳು ಸಾಗಣೆ-18, ಮಟ್ಕಾ- 28, ಜೂಜಾಟ-9 ಹಾಗೂ 11 ಕಳ್ಳತನದ ಪ್ರಕರಣಗಳು ದಾಖಲಾಗಿವೆ. ಅಕ್ರಮ ಮರಳು ಸಾಗಣೆ ಬಗ್ಗೆ ಚಿತ್ತಾಪುರದಲ್ಲಿ 14, ಮಾಡಬೂಳದಲ್ಲಿ 3, ಶಹಾಬಾದ್‌ನಲ್ಲಿ 1 ಪ್ರಕರಣ ದಾಖಲಾಗಿದ್ದು, ಸೂಕ್ತ ಕ್ರಮ ಕೈಗೊಳ್ಳಲಾಗುತ್ತಿದೆ. ಚಿತ್ತಾಪುರದ ವೆಂಕಟೇಶ, ಆಶ್ರಯ ಕಾಲನಿಯಲ್ಲಿ ನಡೆದಿರುವ ಮನೆ ಕಳ್ಳತನ ಹಾಗೂ ಅಫಜಲಪುರ ತಾಲೂಕಿನ ನಡೆದ ಮನೆ ಕಳ್ಳತನಕ್ಕೂ ಲಿಂಕ್ ಇದ್ದಂತಿದೆ. ಎರಡೂ ಪ್ರಕರಣಗಳ ಸಿಸಿ ಟಿವಿ ದೃಶ್ಯಾವಳಿಗಳು ಹೊಲಿಕೆ ಆಗುತ್ತಿದ್ದು, ಹೊರ ರಾಜ್ಯದ ಕಳ್ಳರಿಂದಲೇ ಕೃತ್ಯ ನಡೆದಿರುವ ಸಾಧ್ಯತೆ ಇದೆ. ಈ ಬಗ್ಗೆ ಸಮಗ್ರ ತನಿಖೆ ನಡೆಯುತ್ತಿದೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಸಿಪಿಐಗಳಾದ ಚಂದ್ರಶೇಖರ ತಿಗಡಿ (ಚಿತ್ತಾಪುರ), ಸಿಪಿಐ ಜಗದೇವಪ್ಪ ಪಾಳಾ (ಕಾಳಗಿ), ನಟರಾಜ ಲಾಡೆ (ಶಹಾಬಾದ್) ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net