ಮೊಬೈಲ್ ಗೀಳಿಗೆ ಹೇಳಿ ಗುಡ್‌ಬೈ

K HALLI DASARA KREEDE
Published on

ಕೊಂಡ್ಲಹಳ್ಳಿ: ಯುವಪೀಳಿಗೆ ಮೊಬೈಲ್ ಗೀಳಿನಿಂದ ಹೊರಬಂದರೆ ಜೀವನದಲ್ಲಿ ಸಾಧನೆ ಮಾಡಲು ಸುಲಭವಾಗಲಿದೆ ಎಂದು ತಾಪಂ ಮಾಜಿ ಸದಸ್ಯ ಟಿ.ರೇವಣ್ಣ ಹೇಳಿದರು.

ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಸದಾಶಿವ ಕ್ರೀಡಾ ಯುವಕರ ಸಂಘ, ಗ್ರಾಮಾಂತರ ಪ್ರೌಢಶಾಲೆ ಸಹಯೋಗದೊಂದಿಗೆ ಕೊಂಡ್ಲಹಳ್ಳಿ ಗ್ರಾಮಾಂತರ ಪ್ರೌಢಶಾಲೆಯಲ್ಲಿ ಶನಿವಾರ ಆಯೋಜಿಸಿದ್ದ ದಸರಾ ಕ್ರೀಡಾಕೂಟ ಉದ್ಘಾಟನೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ತೀರ್ಪುಗಾರರು ನೀಡುವ ತೀರ್ಪನ್ನು ಸ್ಪರ್ಧಿಗಳು ಗೌರವದಿಂದ ಸ್ವೀಕರಿಸಬೇಕು. ಘರ್ಷಣೆ, ವಿವಾದಗಳಿಗೆ ಅವಕಾಶ ನೀಡದೆ ಸೌಹಾರ್ದವಾಗಿ ಆಟದಲ್ಲಿ ಪಾಲ್ಗೊಳ್ಳಬೇಕು ಎಂದರು.

ಗ್ರಾಪಂ ಅಧ್ಯಕ್ಷೆ ಎಂ.ಎಲ್.ಪವಿತ್ರಾ ಉದ್ಘಾಟಿಸಿದರು. ದೈಹಿಕ ಶಿಕ್ಷಣ ಶಿಕ್ಷಕ ಸಂಘದ ತಾಲೂಕಾಧ್ಯಕ್ಷ ಆರ್.ಜಿ.ವೀರಪ್ಪ, ಟಿ.ವಿ.ವಿನಯ್‌ಕುಮಾರ್ ಮಾತನಾಡಿದರು.

ಶಾಲಾ ಸಮಿತಿ ನಿರ್ದೇಶಕ ಎಸ್.ಕರಿಯಣ್ಣ, ಉಪನ್ಯಾಸಕ ಎಸ್.ಟಿ.ನಟರಾಜ್, ವಕೀಲ ಎಚ್.ಸಿ.ಪ್ರದೀಪ್‌ಕುಮಾರ್, ಕೆ.ಪಿ.ಗಂಗಾಧರ್, ಕೆ.ಮಂಜುನಾಥ್, ಲಕ್ಷ್ಮಣ್, ಪ್ರಸನ್ನಕುಮಾರ್, ಸಂಪತ್, ಸುನಿತಾ, ಕೃಷ್ಣಮೂರ್ತಿ, ರವಿಕಿರಣ್, ಕರಿಬಸವ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net