ಸ್ಯಾಕ್ಸೋಫೋನ್​ ವಾದಕಿ ನೇಣು ಬಿಗಿದುಕೊಂಡು ಆತ್ಮಹತ್ಯೆ

Sujatha
Published on

ಮಂಗಳೂರು: ಸ್ಯಾಕ್ಸೋಫೋನ್ ವಾದಕಿಯೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಪ್ರಕರಣ ಬೆಳಕಿಗೆ ಬಂದಿದೆ. ದಕ್ಷಿಣಕನ್ನಡ ಜಿಲ್ಲೆಯಲ್ಲಿ ಈ ಪ್ರಕರಣ ನಡೆದಿದೆ.

ಮಂಗಳೂರಿನ ಶಕ್ತಿನಗರದ ಫ್ಲ್ಯಾಟ್​ವೊಂದರಲ್ಲಿ ವಾಸವಾಗಿದ್ದ ಸ್ಯಾಕ್ಸೋಫೋನ್​ ವಾದಕಿ ಸುಜಾತಾ ದೇವಾಡಿಗ (29) ಆತ್ಮಹತ್ಯೆ ಮಾಡಿಕೊಂಡವರು. ಪತಿ, ಮಗು ಜತೆಗಿದ್ದ ಇವರೊಂದಿಗೆ ತಂದೆ-ತಾಯಿ ಕೂಡ ವಾಸವಿದ್ದರು.

ನಿನ್ನೆ ತಲೆನೋವು ಎಂದು ಹೇಳಿ ತನ್ನ ಕೋಣೆಗೆ ಹೋಗಿದ್ದ ಇವರು ಎಷ್ಟು ಹೊತ್ತಾದರೂ ಹೊರಗಡೆಗೆ ಬಂದಿರಲಿಲ್ಲ. ಆಗ ಮನೆಯವರು ಒಳಗೆ ಹೋಗಿ ನೋಡಿದಾಗ ಆತ್ಮಹತ್ಯೆ ಮಾಡಿಕೊಂಡಿರುವುದು ಕಂಡುಬಂದಿದೆ.

ಕರೊನಾದ ಬಳಿಕ ಸರಿಯಾಗಿ ಕೆಲಸ ಇರಲಿಲ್ಲ, ಆರ್ಥಿಕ ಮುಗ್ಗಟ್ಟಿನಿಂದಲೂ ಬಳಲುತ್ತಿದ್ದ ಹಿನ್ನೆಲೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಅಂದಾಜಿಸಲಾಗಿದ್ದು, ನಿಖರ ಕಾರಣ ಕುರಿತು ಇನ್ನಷ್ಟೇ ಖಚಿತ ಮಾಹಿತಿ ಹೊರಬೀಳಬೇಕಿದೆ. ಇವರು ಮೂಲತಃ ಮುಲ್ಕಿಯವರಾಗಿದ್ದು, ಕಂಕನಾಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net