ಸಕ್ಷಮದಿಂದ ಅಂಗವಿಕಲರ ದಿನಾಚರಣೆ

Published on

ಹುಬ್ಬಳ್ಳಿ: ಸಕ್ಷಮ ಉತ್ತರ ಕರ್ನಾಟಕ ಪ್ರಾಂತ, ಮಜೇಥಿಯಾ ಫೌಂಡೇಷನ್ ಸಂಯುಕ್ತ ಆಶ್ರಯದಲ್ಲಿ ವಿಶ್ವ ಅಂಗವಿಕಲರ ದಿನಾಚರಣೆ ಕಾರ್ಯಕ್ರಮವನ್ನು ಇಲ್ಲಿಯ ಕೆಎಂಸಿಆರ್ ಐ ಸಭಾಂಗಣದಲ್ಲಿ ಡಿ. 9ರಂದು ಸಂಜೆ 4ಕ್ಕೆ ಏರ್ಪಡಿಸಲಾಗಿದೆ ಎಂದು ಸಕ್ಷಮ ಅಧ್ಯಕ್ಷ ಡಾ. ಸುನಿಲ ಗೋಖಲೆ ತಿಳಿಸಿದರು.

ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂಗವಿಕಲರ ಹಕ್ಕುಗಳ ರಕ್ಷಣೆ ಮತ್ತು ಅವರನ್ನು ಸಮಾಜದ ಮುಖ್ಯವಾಹಿನಿಗೆ ಕರೆದೊಯ್ಯುವ ಉದ್ದೇಶ ಹಾಗೂ ಜತೆಗೆ ಸಮುದಾಯದಲ್ಲಿ ಅವರ ಆತ್ಮಗೌರವ ಹೆಚ್ಚಿಸುವ ಸಲುವಾಗಿ ಈ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.

ನ್ಯಾಯಮೂರ್ತಿ ನಾಗೇಶ ನಾಯ್ಕ ಅವರು ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು. ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಅಂಗವಿಕಲ ಸಾಧಕರನ್ನು ಸನ್ಮಾನಿಸಲಾಗುವುದು ಎಂದರು.

ಕಿಮ್ಸ್ ನಿರ್ದೇಶಕ ಡಾ. ಎಸ್.ಎಫ್. ಕಮ್ಮಾರ, ಡಾ. ಗುರುಶಾಂತಪ್ಪ, ಡಾ. ಈಶ್ವರ ಹಸಬಿ, ಮಜೇಥಿಯಾ ಫೌಂಡೇಷನ್ ಚೇರ್ಮನ್ ಜಿತೇಂದ್ರ ಮಜೇಥಿಯಾ, ಡಾ. ಪ್ರಭು ಬಿರಾದಾರ, ಇತರರು ಭಾಗವಹಿಸುವರು.

ಫೌಂಡೇಷನ್ ಟ್ರಸ್ಟಿ ಡಾ. ವಿ.ಬಿ. ನಿಟಾಲಿ, ಡಾ. ಸುಭಾಸ ಬಬ್ರುವಾಡ, ಅಮರೇಶ ಹಿಪ್ಪರಗಿ, ಸುನಿಲ ಕುಕ್ಕನೂರ ಗೋಷ್ಠಿಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net